ಬಿಜೆಪಿ ಶಾಸಕ ರಾಜಾಸಿಂಗ್ ಜಿಲ್ಲೆಗೆ ಬಾರದಂತೆ ನಿರ್ಬಂಧ 

ಬಿಜೆಪಿ ಶಾಸಕ ರಾಜಾಸಿಂಗ್ ಜಿಲ್ಲೆಗೆ ಬಾರದಂತೆ ನಿರ್ಬಂಧ 
ಬಾಗಲಕೋಟೆ: ಮುಧೋಳದ ಜನತಾರಾಜಾ ಗಣೇಶ ವಿಸರ್ಜನೆಗೆ ಮುಖ್ಯ ಅತಿಥಿಗಳಾಗಿ ಆಗಮಿಸಬೇಕಿದ್ದ ತೆಲಂಗಾಣದ ಹೈದರಾಬಾದಿನ ಬಿಜೆಪಿ ಶಾಸಕ ರಾಜಾಸಿಂಗ್ ಠಾಕೂರ್ ಜಿಲ್ಲೆ ಪ್ರವೇಶಿಸದಂತೆ ಜಿಲ್ಲಾಡಳಿತ ನಿರ್ಬಂಧವಿಧಿಸಿದೆ. 
ಸೆ.೧೯ರ ಗುರುವಾರ ಸಂಜೆಯೇ ಅವರು ಜನತಾರಾಜ ಗಣೇಶ ವಿಸರ್ಜನೆಗಾಗಿ ಜಿಲ್ಲೆಗೆ ಆಗಮಿಸಬೇಕಿತ್ತು. ಆದರೆ ರಾಜಾಸಿಂಗ್ ವಿವಾದಾತ್ಮಕ ಹೇಳಿಕೆಗಳ ಜತೆಗೆ ಮುಧೋಳ ಕೋಮುಸೂಕ್ಷö್ಮ ಪ್ರದೇಶವಾಗಿರುವುದರಿಂದ ಅವರಿಗೆ ಅನುಮತಿ ನಿಡAತೆ ಪೊಲೀಸರು ಜಿಲ್ಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಿದ್ದರು. ಅದನ್ನು ಆಧರಿಸಿ ಸೆ.೧೬ ರಿಂದ ಮುಂದಿನ ಮೂರು ತಿಂಗಳ ಅವಧಿಗೆ ರಾಜಾಸಿಂಗ್ ಬಾಗಲಕೋಟೆ ಜಿಲ್ಲೆಯನ್ನು ಪ್ರವೇಶಿಸದಂತೆ ಆದೇಶಿಸಲಾಗಿದೆ. 
೨೦೧೫ರಲ್ಲಿ ಇದೇ ಜನತಾ ರಾಜಾ ವಿಸರ್ಜನಾ ಮೆರವಣಿಗೆಯ ಸಂದರ್ಭದಲ್ಲಿ ಉಂಟಾದ ಗಲಾಟೆಯಲ್ಲಿ ಅಂದಾಜು ೧೦ ಕೋಟಿ ರೂ. ಮೊತ್ತ ಆಸ್ತಿಪಾಸ್ತಿ ನಷ್ಟ ಉಂಟಾಗಿತ್ತು. ಮೆರವಣಿಗೆ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಎಸ್‌ಪಿ ವೈ.ಅಮರನಾಥ ರೆಡ್ಡಿ, ಎಎಸ್ಪಿಗಳಾದ ಪ್ರಸನ್ನ ದೇಸಾಯಿ, ಮಹಾತೇಂಶ್ವರ ಜಿದ್ದಿ ಅವರುಗಳು ಮುಧೋಳದಲ್ಲೇ ಮೊಕ್ಕಾಂ ಹೂಡಿದ್ದರು.