ಜಿಲ್ಲೆಯ ೨೬ ಪೊಲೀಸರಿಗೆ ತಗುಲಿದ ಕೊರೊನಾ

ಜಿಲ್ಲೆಯ ೨೬ ಪೊಲೀಸರಿಗೆ ತಗುಲಿದ ಕೊರೊನಾ

ನಾಡನುಡಿ ನ್ಯೂಸ್
ಬಾಗಲಕೋಟೆ ಜು.೧೯: 
ಕೋವಿಡ್ ಕಬಂಧ ಬಾಹು ಜಿಲ್ಲಾದ್ಯಂತ ವ್ಯಾಪಿಸುತ್ತಿದೆ. ಕೊರೊನಾ ವಿಚಾರದಲ್ಲಿ ಮುಂಚೂಣಿಯಲ್ಲಿ ನಿಂತು ವಾರಿರ‍್ಸ್ ಆಗಿರುವ ಪೊಲೀಸರನ್ನೂ ಅದು ಬಿಟ್ಟಿಲ್ಲ. ಜಿಲ್ಲೆಯ ೨೬ ಜನ ಪೊಲೀಸರಿಗೆ ಸೋಂಕು ತಗುಲಿದ್ದು, ಈ ಪೈಕಿ ನಾಲ್ವರು ಗುಣಮುಖರಾಗಿದ್ದಾರೆ. 
 ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯ ೬ ಜನ ಸಿಬ್ಬಂದಿಗೆ ಸೋಂಕು ತಗುಲಿದ್ದು, ಗುಳೇದಗುಡ್ಡ, ಕೆರೂರು ಪೊಲೀಸ್ ಠಾಣೆಯ ಆರು ಪೇದೆಗಳು, ಬಾಗಲಕೋಟೆ ಶಹರ, ನವನಗರ ಠಾಣೆಯ ಮೂವರು ಪೇದೆಗಳು, ಇಳಕಲ್ ನಗರ, ಗ್ರಾಮೀಣ ಠಾಣೆಯ ನಾಲ್ವರು, ಬನಹಟ್ಟಿ, ತೇರದಾಳ ಠಾಣೆಯ ತಲಾ ಓರ್ವ ಪೇದಗಳು, ಜಿಲ್ಲಾ ಸಶಸ್ತçಮೀಸಲು ಪಡೆಯ ಓರ್ವ ಪೇದೆ ಸೇರಿ ಒಟ್ಟು ೨೨ ಜನ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆ. ಎಲ್ಲರೂ ಚೇತರಿಕೆಯಾಗುತ್ತಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ಮಾಹಿತಿ ನೀಡಿದ್ದಾರೆ.