ಜಿಲ್ಲೆಯಲ್ಲಿ ಶತಕ ಬಾರಿಸಿದ ಕೋವಿಡ್: ವಿದ್ಯಾಗಿರಿ ಶಾಲೆಯ ಮತ್ತೆ ೮ ಮಕ್ಕಳಲ್ಲಿ ಸೋಂಕು ದೃಢ

ಜಿಲ್ಲೆಯಲ್ಲಿ ಶತಕ ಬಾರಿಸಿದ ಕೋವಿಡ್: ವಿದ್ಯಾಗಿರಿ ಶಾಲೆಯ ಮತ್ತೆ ೮ ಮಕ್ಕಳಲ್ಲಿ ಸೋಂಕು ದೃಢ

ನಾಡನುಡಿ ನ್ಯೂಸ್
ಬಾಗಲಕೋಟೆ:
ಜಿಲ್ಲೆಯಲ್ಲಿ ಶನಿವಾರ ೧೦೬ ಜನರಲ್ಲಿ‌ ಕೋವಿಡ್ ಕಾಣಿಸಿಕೊಂಡಿದ್ದು, ವಿದ್ಯಾಗಿರಿಯ ಸಮೃದ್ಧಿ ಗುರುಕುಲ‌ ಶಾಲೆಯಲ್ಲಿ ಮತ್ತೆ ೮ ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದೆ.

ಶಿರೂರಿನ ಸಿದ್ದೇಶ್ವರ ಹೈಸ್ಕೂಲಿನ ಇಬ್ಬರು ಮಕ್ಕಳಲ್ಲೂ ಸೋಂಕು ದೃಢಪಟ್ಟಿದೆ. ಮುಧೋಳ ತಾಲೂಕಿನ ಚಿಕ್ಕೂರು ಸರ್ಕಾರಿ ಶಾಲೆಯಲ್ಲೂ ಒಂದು ಮಗುವಿನಲ್ಲಿ ಸೋಂಕು ಕಾಣಿಸಿಕೊಂಡಿದೆ.ಇದಲ್ಲದೇ ನವನಗರ ಬಾಲಮಂದಿರದಲ್ಲೂ ಮೂವರಿಗೆ ಸೋಂಕು ದೃಢಪಟ್ಟಿದೆ.

ಶಾಲೆಗಳಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದ್ದು, ಸೋಂಕಿತ ವಿದ್ಯಾರ್ಥಿಗಳು ಕಾಣಿಸಿಕೊಳ್ಳುವ ಶಾಲೆಗಳಿಗೆ ಮಾತ್ರ ರಜೆ ನೀಡಲು ಜಿಲ್ಲಾಡಳಿತ ನಿರ್ಧರಿಸಿದೆ. ಬಹುದಿನಗಳ ನಂತರ ಶಾಲೆಗಳು ಆರಂಭಗೊಂಡಿದ್ದು, ಸೋಂಕು‌ ಹರಡದಂತೆ ಸಕಲ ರೀತಿಯಿಂದಲೂ ಜಿಲ್ಲಾಡಳಿ ಪ್ರಯತ್ನಿಸುತ್ತಿದೆ. ಹೀಗಾಗಿ ಸೋಂಕಿತರು ಕಾಣಿಸಿಕೊಳ್ಳುವ ಶಾಲೆಗಳನ್ನಷ್ಟೇ ಬಂದ್ ಮಾಡಲಾಗುವುದು ಇನ್ನುಳಿದಂತೆ ಶಾಲೆ, ಕಾಲೇಜುಗಳು ಕೋವಿಡ್ ನಿಯಮಗಳನ್ನು ಪಾಲಿಸಿ ತರಗತಿಗಳನ್ನು ನಡೆಸಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.