ಕಾಲೇಜು ಆರಂಭ: ಹತ್ತು ಜನರಲ್ಲಿ ಕಾಣಿಸಿಕೊಂಡ ಕೊರೊನಾ
ಮೊನ್ನೆಯಷ್ಟೇ ಕಾಲೇಜುಗಳು ಆರಂಭಗೊಂಡಿದ್ದು, ೧೦ ಜನರಲ್ಲಿ ಸೋಂಕು ದೃಢಪಟ್ಟಿದೆ
ನಾಡನುಡಿ ನ್ಯೂಸ್
ಬಾಗಲಕೋಟೆ:
ಜಿಲ್ಲೆಯಲ್ಲಿ ಪದವಿ ಅಂತಿಮ ವರ್ಷ ಹಾಗೂ ಸ್ನಾತಕೋತ್ತರ ಪದವಿ ಕಾಲೇಜುಗಳು ಆರಂಭಗೊಂಡಿದ್ದು, ೧೦ ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ.
ಕಾಲೇಜು ಆರಂಭದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿ ಕಡ್ಡಾಯವಾಗಿ ಕೊರೊನಾ ಟೆಸ್ಟ್ ಗೆ ಒಳಪಡಲು ಸೂಚಿಸಲಾಗಿತ್ತು.
ಅದರಂತೆ ೧೫೦೦ ವಿದ್ಯಾರ್ಥಿ ಹಾಗೂ ಉಪನ್ಯಾಸರು ಪರೀಕ್ಷೆಗೆ ಒಳಗಾಗಿದ್ದು ಈ ಪೈಕಿ ಹತ್ತು ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ತಿಳಿದು ಬಂದಿದೆ.
ಸೋಂಕು ಕಾಣಿಸಿಕೊಂಡಿದ್ದರೂ ರೋಗ ಲಕ್ಷಣವಿಲ್ಲ ಹೀಗಾಗಿ ಮನೆಯಲ್ಲೇ ಐಸೂಲೇಷನ್ ಗೆ ಒಳಪಡಲು ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.