ಜಿಲ್ಲೆಯ ಮೂವರು ಶಾಸಕರಿಗೆ ಒಲಿದ ನಿಗಮ ಮಂಡಳಿ ಪಟ್ಟ

ಜಿಲ್ಲೆಯ ಮೂವರು ಶಾಸಕರಿಗೆ ಒಲಿದ ನಿಗಮ ಮಂಡಳಿ ಪಟ್ಟ

ಬಾಗಲಕೋಟೆ:ರಾಜ್ಯ ಸರ್ಕಾರ ಪ್ರಕಟಿಸಿರುವ ನಿಗಮ ಮಂಡಳಿಗಳ ಪಟ್ಟಿಯಲ್ಲಿ ನಿರೀಕ್ಷೆಯಂತೆ ಜಿಲ್ಲೆಯ ಮೂವರು ಶಾಸಕರಿಗೆ ಸ್ಥಾನ ಸಿಕ್ಕಿದೆ. 

ಬಾಗಲಕೋಟೆ ಶಾಸಕ ಎಚ್.ವೈ.ಮೇಟಿ, ಬೀಳಗಿ ಶಾಸಕ ಜೆ.ಟಿ.ಪಾಟೀಲ ಹಾಗೂ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಅವರಿಗೆ ಸಂಪುಟ ದರ್ಜೆ ಸ್ಥಾನ ನೀಡಿ ಸರ್ಕಾರ ಆದೇಶಿಸಿದೆ. 

ಎರಡು ಬಾರಿ ಗುಳೇದಗುಡ್ಡ ಶಾಸಕರಾಗಿ ಕ್ಷೇತ್ರ ಪುನರವಿಂಗಡಣೆ ನಂತರ ಬಾಗಲಕೋಟೆಯಲ್ಲಿ ಹಿಡಿತ ಸಾಧಿಸಿ ಎರಡು ಬಾರಿ ಶಾಸಕರಾಗಿರುವ ಎಚ್.ವೈ.ಮೇಟಿ ಅವರಿಗೆ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ(ಬಿಟಿಡಿಎ)ವನ್ನು ನಿರೀಕ್ಷಿಸಲಾಗಿದೆ. ಆದರೆ ಆದೇಶದಲ್ಲಿ ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರ(ಬುಡಾ) ಎಂದು ಆಗಿದೆ. ಇದು ಗೊಂದಲದಿAದಾಗಿ ಸೋಮವಾರ ಆದೇಶ ತಿದ್ದುಪಡಿ ಆಗಲಿದೆ ಎಂದು ಶಾಸಕ ಮೇಟಿ ಅವರ ಆಪ್ತರು ತಿಳಿಸಿದ್ದಾರೆ. ಈ ಬಗ್ಗೆ ಸ್ವತಾ ಶಾಸಕ ಮೇಟಿ ಅವರಿಗೂ ಗೊಂದಲ ಉಂಟಾಗಿದೆ. 

ಶುಕ್ರವಾರ ನಿಗಮ ಮಂಡಳಿ ಪಟ್ಟಿ ಘೋಷಣೆಗೂ ಮೊದಲು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮುಖ್ಯಮಂತ್ರಿಗಳು ಕಳುಹಿಸಿದ ಟಿಪ್ಪಣಿ ಬಹಿರಂಗಗೊAಡಿತ್ತು. ಅದರಲ್ಲಿ ಮೇಟಿ ಅವರ ಹೆಸರು ಸಹ ತಪ್ಪಾಗಿ ನಮೂದಾಗಿತ್ತು ಆ ವೇಳೆ ಬುಡಾ ಎಂದು ಇರುವುದು ಸಹ ಬಿಟಿಡಿಎ ಎಂದು ತಿದ್ದುಪಡಿ ಆಗಲಿದೆ ಎಂದು ನಿರೀಕ್ಷಿಸಲಾಗಿತ್ತು.

ಆದರೆ ಅಂತಿಮ ಪಟ್ಟಿ ಬಂದಾಗಲೂ ಅದು ಬುಡಾ ಎಂದು ನಮೂದಾಗಿರುವುದು ಈಗ ಗೊಂದಲಕ್ಕೆ ಕಾರಣವಾಗಿದೆ. ಬುಡಾ ನಿಗಮ ಮಂಡಳಿಯಲ್ಲಿ ಕೇವಲ ಪ್ರಾಧಿಕಾರ ಹೀಗಾಗಿ ಬಿಟಿಡಿಎ ಎಂಬುದೇ ಅಂತಿಮ ಅಧಿಕಾರಿಗಳಿಗೆ ಗೊಂದಲವಾದAತ್ತಿದೆ ಎಂದು ಅವರು ಆಪ್ತರು ಹೇಳುತ್ತಿದ್ದಾರೆ. 
ಬೀಳಗಿ ಶಾಸಕ ಜೆ.ಟಿ.ಪಾಟೀಲ ಅವರು  ಸಹ ಹಿರಿಯ ಶಾಸಕರಾಗಿದ್ದು, ಅವರಿಗೆ ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಸ್ಥಾನ ಒಲಿದು ಬಂದಿದೆ. ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಅವರಿಗೆ ಕ್ರೀಡಾ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಸಿಕ್ಕಿದೆ. ಆದರೆ ಮಂತ್ರಿಸ್ಥಾನದ ಆಕಾಂಕ್ಷಿಯಾಗಿರುವ ಅವರು ನಿಗಮ ಮಂಡಳಿ ವಿಚಾರದಲ್ಲಿ ಅಷ್ಟಾಗಿ ಖುಷಿಯಿಲ್ಲ ಎಂದು ಹೇಳಲಾಗಿದೆ. 

ಜಾಹೀರಾತು

(ಜಾಹೀರಾತು)

(ಜಾಹೀರಾತು:ಆ.೨೮ರ ವಿಪ್ರ ವಾಕಥಾನ್‌ನಲ್ಲಿ ಭಾಗಿಯಾಗಿ)