ಧಾರ್ಮಿಕ ಭಾವನೆಗಳಿಗೆ ಧಕ್ಕೆ ತೆರುವ ಯಾವುದೇ ಚಿತ್ರಗಳಿಗೆ ಅವಕಾಶ ಬೇಡ- ಬ್ರಾಹ್ಮಣ ಸಮಾಜ ಆಗ್ರಹ
ನಾಡನುಡಿ ನ್ಯೂಸ್
ಬಾಗಲಕೋಟೆ
ಬ್ರಾಹ್ಮಣರ ಅವಹೇಳನೆ ಮಾಡಿ ನಂತರ ಪೊಗರು ಚಿತ್ರದಲ್ಲಿ ಅಂಥ ದೃಶ್ಯಗಳಿಗೆ ಕತ್ತರಿ, ಇನ್ನುಮುಂದೆ ಈ ರೀತಿ ಸಮಾಜದ ಭಾವನೆಗಳಿಗೆ ಧಕ್ಕೆ ತರುವ ಚಿತ್ರಗಳಿಗೆ ಅವಕಾಶ ನೀಡಬಾರದು ಎಂದು ಬ್ರಾಹ್ಮಣ ಸಮಾಜದ ಮುಖಂಡರು ಆಗ್ರಹಿಸಿದ್ದಾರೆ.
ಜಿಲ್ಲಾಡಳಿತ ಭವನಕ್ಕೆ ತೆರಳಿ ಮನವಿ ಸಲ್ಲಿಸಿದ ಮುಖಂಡರು, ಪೊಗರು ಚಿತ್ರದಲ್ಲಿ ಬ್ರಾಹ್ಮಣರನ್ನು ಅವಹೇಳನೆ ಮಾಡಲಾಗಿದೆ. ಸಮಾಜದಿಂದ ಪ್ರತಿಭಟನೆ ವ್ಯಕ್ತವಾದ ನಂತರ ಚಿತ್ರ ತಂಡ ಕ್ಷಮೆಯಾಚಿಸಿದೆ.ಇನ್ನು ಮುಂದೆ ಚಲನಚಿತ್ರಗಳಲ್ಲಾಗಲಿ, ರಾಜಕೀಯ ವ್ಯಕ್ತಿಗಳಾಗಲಿ ಸಮಾಜವನ್ನು ಟೀಕಿಸಿದರೆ ಸಮಾಜ ಅದನ್ನು ನೋಡಿ ಸುಮ್ಮನಿರುವುದಿಲ್ಲ ಎಂದು ಎಚ್ವರಿಸಿದರು.
ಯಾವುದೇ ಧಾರ್ಮಿಕ ಭಾವನೆಗಳಿಗೆ ಚಲನಚಿತ್ರಗಳಲ್ಲಿ ಧಕ್ಕೆ ಆಗದಂತೆ ಸರ್ಕಾರ ನಿರ್ಬಂಧ ವಿಧಿಸಬೇಕೆಂದು ಒತ್ತಾಯಿಸಿದರು.
ಬ್ರಾಹ್ಮಣ ಮಹಾಸಭಾ ಜಿಲ್ಲಾಧ್ಯಕ್ಷ ಡಾ.ಗಿರೀಶ ಮಾಸೂರಕರ, ಪಂಡಿತ ಭೀಮಸೇನಾಚಾರ್ಯ ಪಾಂಡುರಂಗಿ, ಶಶಿ ದೇಶಪಾಂಡೆ, ಅಣ್ಣಿಗೇರಿ, ಗುರುರಾಜ ಜೋಶಿ, ರಾಘವೇಂದ್ರ ಕುಲಕರ್ಣಿ, ಧೀರೇಂದ್ರ ಜೋಶಿ, ವಿನಾಯಕ ತಾಳಿಕೋಟಿ, ನರಸಿಂಹ ಆಲೂರ, ಸಂತೋಷ ಗದ್ದನಕೇರಿ, ನವೀನ ಕಟ್ಟಿ, ಮೋಹನ ದೇಶಪಾಂಡೆ ಮತ್ತಿತರರು ಉಪಸ್ಥಿತರಿದ್ದರು.