ಅಧಿಕಾರವಿಲ್ಲದೇ ಹತಾಶರಾಗಿರುವ ಕಾಂಗ್ರಸ್ಸಿಗರು ಹುಚ್ಚರಂತೆ ಆಡುತ್ತಿದ್ದಾರೆ: ಕಾರಜೋಳ ವ್ಯಂಗ್ಯ
ಸಿಎಂ ಬೊಮ್ಮಾಯಿ ಅವರನ್ನು ನಾಯಿಗೆ ಹೋಲಿಸಿ ವಿಪಕ್ಷ ನಾಯಕ ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ಗರಂ ಆಗಿರುವ ಸಚಿವ ಗೋವಿಂದ ಕಾರಜೋಳ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ

ಬಾಗಲಕೋಟೆ:
ಅಧಿಕಾರ ಕಳೆದುಕೊಂಡು ಕಾಂಗ್ರೆಸ್ ಪಕ್ಷ ಹತಾಶವಾಗಿದೆ. ಅದಕ್ಕಾಗಿಯೇ ಧಾರವಾಡ ಹುಚ್ಚು ಆಸ್ಪತ್ರೆಯಿಂದ ತಪ್ಪಿಸಿಕೊಂಡು ಬಂದವರಂತೆ ಕಾಂಗ್ರೆಸ್ಸಿಗರು ಮಾತನಾಡುತ್ತಿದ್ದಾರೆ ಎಂದು ಸಚಿವ ಗೋವಿಂದ ಕಾರಜೋಳ ವಾಗ್ದಾಳಿ ನಡೆಸಿದ್ದಾರೆ.
ಮುಧೋಳ ನಗರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ನಾಯಿಗೆ ಹೋಲಿಸಿ ವಿಪಕ್ಷ ನಾಯಕ ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ತೀವ್ರ ಅಸಮಾಧಾನ ಹೊರಹಾಕಿದರು.
ಸಿದ್ದರಾಮಯ್ಯ ಓರ್ವ ಮುತ್ಸದ್ದಿ ರಾಜಕಾರಣಿ. ಅವರು ಮಾತನಾಡೋವಾಗ ಎಚ್ಚರಿಕೆಯಿಂದ ಇರಬೇಕು.ಈ ಪದಗಳನ್ನು ಬಳಸಿದರೆ ಬೊಮ್ಮಾಯಿ ಅವರು ಸಣ್ಣವರಾಗುವುದಿಲ್ಲ ಎಂದರು.
ಕಾಂಗ್ರೆಸ್ಸಿನವರಿಗೆ ಅಧಿಕಾರ ಕಳೆದುಕೊಂಡು ಹುಚ್ಚು ಹಿಡಿದಿದೆ ಅವರು ಖಾಯಂ ಹುಚ್ಚರಾಗಯವುದು ಬೇಡ ಸ್ವಲ್ಪ ಸುಧಾರಿಸಿಕೊಳ್ಳಲಿ ಎಂದರು.
ವಿಧಾನಸೌಧದಲ್ಲಿ ಹಣ ಪತ್ತೆಯಾಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯನಿಗೆ ಇರುವಷ್ಟು ಅನುಭವ ಹಣ ತಂದವನಿಗೂ ಇಲ್ಲ. ಯಾರಾದ್ರೂ ಲಂಚವನ್ನು ವಿಧಾನಸೌಧಕ್ಕೆ ತರ್ತಾರ. ಅವರ ಸರ್ಕಾರದ ಅವಧಿಯಲ್ಲಿ ವಿಧಾನಸೌಧದ ಒಬ್ಬ ಮಂತ್ರಿ ಕಚೇರಿಯಲ್ಲಿ ಹಣ ಸಿಕ್ಕಿತ್ತು. ಅದಕ್ಕೆ ಸಿದ್ದರಾಮಯ್ಯ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದರು.
ಚುನಾವಣೆ ಸಂದರ್ಭದಲ್ಲಿ ಇಂಥ ನಾಟಕಗಳು ನಡೆಯುತ್ತವೆ. ವಿಧಾನಸೌಧಕ್ಕೆ ಒಬ್ಬ ಇಂಜನಿಯರ್ ದುಡ್ಡು ತಂದಿದ್ದಾನೆ ಎಂದರೆ ಯಾರು ನಂಬುತಾರೆ ಎಂದು ಪ್ರಶ್ನಿಸಿದರು.
ಬಿಜೆಪಿ ಮೇಲೆ ಲಂಚ, ಪರ್ಸಂಟೇಜ್ ಆರೋಪ ಮಾಡೋದು ರಾಜಕೀಯ ನಾಟಕ. ಸಿದ್ದರಾಮಯ್ಯ ವ್ಯರ್ಥ ಕಸರತ್ತು ಮಾಡುತ್ತಿದ್ದಾರೆ ಎಂದರು.
ಗುತ್ತಿಗೆದಾರರ ಸಂಘದ ಕೆಂಪಣ್ಣ ಆರೋಪಗಳ ಕುರಿತು ಉತ್ತರಿಸಿದ ಅವರು ಕೆಂಪಣ್ಣ ಕೆಲಸವನ್ನಧ ಮಾಡಿಲ್ಲ. ಯಾವುದೋ ಓಬೆರಾಯನ ಕಾಲದ ಕಾಂಟ್ರಾಕ್ಟರ ಆತ. ಸುಮ್ಮನೆ ಆರೋಪ ಮಾಡುತ್ತಿದ್ದಾರೆ ದಾಖಲೆ ಇದ್ದರೆ ಕೊಡಲಿ ಎಂದರು.
ಜೆಪಿ ನಡ್ಡಾ ಅವರು ಮಠ ಮಾನ್ಯಗಳಿಗೆ ಭೇಟಿ ಕೊಡುವ ವಿಚಾರವಾಗಿ ಉತ್ತರಿಸಿದ ಅವರು, ನಡ್ಡಾ ಅವರು ಹಿಂದುತ್ವದ ಸಂಸ್ಕಾರದಲ್ಲಿ ಬೆಳೆದು ಬಂದವರು. ಅವರು ದೇವಾಲು,ಮಠ, ಮಾನ್ಯಗಳಿಗೆ ಭೇಟಿ ನೀಡುತ್ತಲೇ ಬಂದಿದ್ದಾರೆ.ಮಠಗಳು, ಮಠಾಧೀಶರನ್ನು ಗೌರವಿಸೋದು ನಮ್ಮ ಸಂಸ್ಕಾರ ಎಂದರು.
ಬಾಕ್ಸ
ಮುಧೋಳದಲ್ಲ ಸಮ್ಮೇಳನಕ್ಕೆ ಕಾರಜೋಳ ಬೇಡಿಕೆ
ಮುಂದಿನ ಬಾರಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮುಧೋಳದಲ್ಲಿ ನಡೆಸಬೇಕೆಂದು ಸಚಿವ ಗೋವಿಂದ ಕಾರಜೋಳ ಒತ್ತಾಯಿಸಿದ್ದಾರೆ.
ಸಮ್ಮೇಳನದ ಮೂರನೇ ದಿನ ಮುಂದಿನ ಸಮ್ಮೇಳನದ ಸ್ಥಲ ನಿಗದಿ ಆಗುತ್ತದೆ. ನಾನು ಮುಧೋಳದಲ್ಲಿ ನಡೆಸಬೇಕೆಂದು ಒತ್ತಾಯಿಸುತ್ತೇನೆ ಎಂದರು.