ಶಿವಾಜಿ ಪ್ರತಿಮೆ ವಿವಾದ: ಜಗದೀಶ ಕಾರಂತ ಎಂಟ್ರಿ

ಶಿವಾಜಿ ಪ್ರತಿಮೆ ವಿವಾದ: ಜಗದೀಶ ಕಾರಂತ ಎಂಟ್ರಿ

ಬಾಗಲಕೋಟೆ:
ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ವಿವಾದಕ್ಕೆ ಹಿಂದೂ ಜಾಗರಣ ವೇದಿಕೆ ಮುಖ್ಯಸ್ಥ ಜಗದೀಶ ಕಾರಂತ ಎಂಟ್ರಿ ಕೊಟ್ಟಿದ್ದಾರೆ.

ನಗರದ ಸೋನಾರ ಬಡಾವಣೆಯಲ್ಲಿ  ಪ್ರತಿಷ್ಠಾಪಿಸಲಾಗಿದ್ದ ಮೂರ್ತಿಯನ್ನು  ನಗರಸಭೆ ಜಿಲ್ಲಾಡಳಿತದ ಮೂಲಕ ತೆರವುಗೊಳಿಸಿತ್ತು. ನಂತರ ಹಿಂದೂಪರ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿ ಮೂರ್ತಿ ಮರುಪ್ರತಿಷ್ಠಾಪನೆಗೆ ಆ.೨೫ರ ಗಡುವು ನೀಡಿದ್ದವು. ಈಗ ಗಡುವಿನ ಅವಧಿ ಮುಕ್ತಾಯಗೊಂಡಿದ್ದು ಕಾರಂತ ಎಂಟ್ರಿ ಕೊಟ್ಟಿದ್ದಾರೆ.

ಸಂಘಟನೆ ಆಯ್ಕೆ ಏನು:
ರಾಜಕೀಯ ಪ್ರತಿಷ್ಠೆ, ವಿವಾದದ ಆಚೆಗೆ ಹಿಂದೂ ಜಾಗರಣ ವೇದಿಕೆ ಚಿಂತನೆ ನಡೆಸುತ್ತಿದೆ.
ಮರಾಠ ಸಮಾಜದಲ್ಲಿರುವ ಎರಡು ಗುಂಪುಗಳಿಂದಾಗಿಯೇ ಶಿವಾಜಿ ಪ್ರತಿಮೆ ಸ್ಥಾಪನೆಯ ವಿವಾದ ಕಿಡಿ ಹೊತ್ತಿರುವುದರಿಂದ ಎರಡೂ ಕಡೆಯವರ ಸಂಧಾನಕ್ಕೆ ಕಾರಂತ ಯತ್ನಿಸಲಿದ್ದಾರೆ.

ಸಂಧಾನದ ಮೂಲಕ ವಿವಾದ ಇತ್ಯರ್ಥಪಡಿಸಿ ಯಾವುದೇ ಆಕ್ಷೇಪಗಳಿಗೆ ಅವಕಾಶವಿಲ್ಲದಂತೆ ಮೂರ್ತಿ ಪ್ರತಿಷ್ಠಾಪನೆಗೆ ದಾರಿ ಮಾಡುವ ಉದ್ದೇಶ ಹೊಂದಿದ್ದಾರೆ ಎ‌ನ್ನಲಾಗಿದೆ. ಇದು ಬಹುತೇಕ ಫಲ ನೀಡುವ ಸಾಧ್ಯತೆಯೂ ಇದೆ‌.

ಇದರ ಹೊರತಾಗಿ ಹೋರಾಟ ಮುಂದವರಿಯುಸುವ ಅನಿವಾರ್ಯತೆ ಎದುರಾದರೂ ಆ ಬಗ್ಗೆಯೂ ಚಿಂತಯಿದ್ದು ಸಮಾಜ ಸಂಘಟನೆಗೂ ಮುಂದಾಗಲಿದೆ. ಅದಕ್ಕಾಗಿಯೇ ಸಂಜೆ ನಗರದ ಬಸವೇಶ್ವರ ಮಂಗಲ ಕಾರ್ಯಲಯದಲ್ಲಿ ಬೃಹತ್ ಸಭೆಯೂ ನಡೆಯಲಿದೆ.