ನವನಗರ ಮೂರನೇ ಯೂನಿಟ್ ಭೂಸ್ವಾಧೀನ: ನ್ಯಾಯಯುತ ಬೆಲೆಗೆ ರೈತರ ಒತ್ತಾಯ

 ನವನಗರ ಮೂರನೇ ಯೂನಿಟ್ ಭೂಸ್ವಾಧೀನ: ನ್ಯಾಯಯುತ ಬೆಲೆಗೆ ರೈತರ ಒತ್ತಾಯ

     
ಬಾಗಲಕೋಟೆ: ನವನಗರ ಮೂರನೇ ಯೂನಿಟ್ ಅಭಿವೃದ್ಧಿಗಾಗಿ ಭೂಸ್ವಾಧೀನಪಡಿಸಿಕೊಂಡಿರುವ ಭೂಮಿಗೆ ನ್ಯಾಯಯುತ ಬೆಲೆ ನೀಡಬೇಕು, ಅಗತ್ಯಕ್ಕೆ ತಕ್ಕಷ್ಟು ಭೂಮಿಯನ್ನಷ್ಟೇ ಸ್ವಾಧೀನಪಡಿಸಿಕೊಳ್ಳಬೇಕೆಂದು ಮುಚಖಂಡಿ ಮತ್ತು ಶೀಗಿಕೇರಿ ಭಾಗದ ರೈತರು ಅಪರ ಜಿಲ್ಲಾಧಿಕಾರಿ ಪರಶರುರಾಮ ಶಿನ್ನಾಳಕರ ಅವರಿಗೆ ಮನವಿ ಸಲ್ಲಿಸಿದರು. 
 ನವನಗರದ ಜಿಲ್ಲಾಡಳಿತ ಭವನದ ಎದುರು ಜಮಾಯಿಸಿದ ರೈತರು, ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಭೂಮಿಗೆ ಪುಡಿಗಾಸು ನೀಡಿ ಕೈತೊಳೆದುಕೊಂಡರೆ ಸಾಲದು. ನಗರದ ಮಧ್ಯಭಾಗದಲ್ಲಿರುವುದರಿಂದ ನ್ಯಾಯಯುತ ಬೆಲೆಯನ್ನು ನೀಡಬೇಕೆಂದು ಒತ್ತಾಯಿಸಿದರು. 
 ಈ ಸಂದರ್ಭದಲ್ಲಿ ಮುಖಂಡ ರವಿ ಕುಮಟಗಿ ಮಾತನಾಡಿ, ೨೦೧೬-೧೭ರಲ್ಲಿ ಪ್ರತಿ ಎಕರೆಗೆ ೬-೭ ಲಕ್ಷ ರೂ.ಗಳ ನಿಗದಿಪಡಿಸಿ ಎಲ್ಲ ಸೌಕರ್ಯ ಸೇರಿ ೧೬ ರಿಂದ ೨೦ ಲಕ್ಷ ರೂ.ಗಳನ್ನು ನೀಡಿ ಕೈತೊಳೆದುಕೊಂಡಿದಾರೆ.  ಭೂಸ್ವಾಧೀಣಗೊಂಡಿರುವ ೧೬೪೩ ಎಕರೆ ಭೂಮಿ ನಗರದ ಕೇಂದ್ರ ಭಾಗದಲ್ಲಿರುವುದರಿಂದ ಕೋಟ್ಯಾಂತರ ರೂಪಾಯಿ ಬೆಲೆ ಬಾಳುತ್ತವೆ. ಇಷ್ಟು ಬೆಲೆಗೆ ನಾವು ಮತ್ತೆ ಕೃಷಿ ಭೂಮಿ ಖರೀದಿಸುವುದಕ್ಕೂ ಸಾಧ್ಯವಾಗುವುದಿಲ್ಲ, ಒಂದು ಚಿಕ್ಕ ನಿವೇಶನ ಖರೀದಿಗೂ ದುಡ್ಡು ಸಾಲುವುದಿಲ್ಲ. ಇದು ರೈತರ ಮೇಲಿನ ದಬ್ಬಾಳಿಕೆ ಅಲ್ಲದೆ ಇನ್ನೇನು ಎಂದು ಪ್ರಶ್ನಿಸಿದರು. 
 ನವನಗರದ ಮೂಲೇ ನಿವೇಶನಗಳು ಚ.ಅಡಿಗೆ ನಾಲ್ಕೆöÊದು ಸಾವಿರ ರೂ.ಗೆ ಹರಾಜುಗೊಂಡಿರುವಾಗ ಉಪನೋಂದಣೀ ಕಚೇರಿಯಲ್ಲಿ ಅದೇ ದಾಖಲಾಗಿರುತ್ತದೆ. ಹೀಗಿರುವಾಗಲೂ ನಮಗೆ ಅತೀ ಕಡಿಮೆ ಬೆಲೆ ನೀಡಿ ಖರೀದಿಸುವುದು ಯಾವ ನ್ಯಾಯ. ನಗರದಲ್ಲಿ ಸಂತ್ರಸ್ತರಿಗೆ ಎಷ್ಟು ಅಗತ್ಯವಿದೆ ಅಷ್ಟನ್ನು ಮಾತ್ರವೇ ಭೂಸ್ವಾಧೀನಪಡಿಸಿಕೊಳ್ಳಬೇಕು. ಅನಗತ್ಯ ಹೆಚ್ಚಿನ ಅಭಿವೃದ್ಧಿಗೆ ಕೈ ಹಾಕಿ ದುಂದು ವೆಚ್ಚವನ್ನು ಮಾಡಲಾಗುತ್ತಿದೆ. ಮುಂದೆ ಇದೆಲ್ಲವೂ ನಮಗೆ ಹೊರೆಯಾಗಲಿದೆ. ಹೀಗೆ ಬೇಕಾಬಿಟ್ಟಿ ಅಭಿವೃದ್ಧಿಯನ್ನು ನಿಲ್ಲಿಸಿ ರೈತರಿಗೆ ನೆರವಾಗುವುದಕ್ಕಾದರೂ ಮುಂದಾಗಬೇಕೆAದು ಮನವಿ ಮಾಡಿದರು. 
 ಮಹೇಶ ಅಥಣಿ, ವೀರಣ್ಣ ಹಲಕುರ್ಕಿ, ತಾವರೆಪ್ಪ ಲಮಾಣಿ, ನಿಂಗಪ್ಪ ಲಮಾಣಿ, ಗೋಪಾಲ ಲಮಾಣಿ, ಬಸಪ್ಪ ಸ್ವಾಗಿ, ಪರಸು ಛಬ್ಬಿ, ಈರಣ್ಣ ಬಲಮಿ, ನಿಂಗಣ್ಣ ಗೋಡಿ, ರುದ್ರಾಕ್ಷಿ ಮತ್ತಿತರರು ಇದ್ದರು. 

(ಅತೀ ಹೆಚ್ಚು ಜನರನ್ನು ತಲುಪುತ್ತಿರುವ ನಿಮ್ಮ ನಾಡನುಡಿಯಲ್ಲಿ ಜಾಹೀರಾತುಗಳನ್ನು ನೀಡಲು ೯೯೦೦೦೧೪೦೫೦ ಸಂಪರ್ಕಿಸಿ)