ಲಡ್ಡು ಮುತ್ತ್ಯಾ ಪಾತ್ರಧಾರಿ ಉಮೇಶ ಪುರಾಣಿಕ ಇನ್ನಿಲ್ಲ
ಅಣ್ಣಾವ್ರು, ವಿಷ್ಣುದಾದಾ ಹಾಡು,ಡೈಲಾಗ್ ಗಳ ರೀಲ್ಸ್ ಗಳನ್ನೂ ಮಾಡುತ್ತಿದ್ದ ಉಮೇಶ ಸರಳ ವ್ಯಕ್ತಿತ್ವದ ಮೂಲಕ ಎಲ್ಲರಿಗೂ ಆಪ್ತರೆನಿಸಿದ್ದರು.
ಬಾಗಲಕೋಟೆ:
ಶ್ರೀಲಡ್ಡುಮುತ್ತ್ಯಾ ಪಾತ್ರಧಾರಿಯಾಗಿ ಚಿತ್ರದಲ್ಲಿ ನಟಿಸಿ ಜನಮನ ಗೆದ್ದಿದ್ದ ನಿರ್ದೇಶಕ, ನಟ ಉಮೇಶ ಪುರಾಣಿಕಮಠ (೫೮)ನಿಧನ ಹೊಂದಿದರು.
ಆಧ್ಯಾತ್ಮಿಕ ಚಿತ್ರಗಳಲ್ಲಿ ನಟಿಸುವುದರ ಮೂಲಕ ಹೆಸರುವಾಸಿಯಾಗಿದ್ದ ಉಮೇಶ ಲಡ್ಡುಮುತ್ತ್ಯಾ ಚಿತ್ರದಲ್ಲಿ ಮನೋಜ್ಞ ನಟನೆ ಮೂಲಕ ಮತ್ತಷ್ಟು ಖ್ಯಾತಿಗಳಿಸಿದ್ದರು. ಶುಕ್ರವಾರ ರಾತ್ರಿ ಹಠಾತ್ ಹೃದಯಾಘಾತದಿಂದ ಅವರು ನಿಧನ ಹೊಂದಿದರು ಎಂದು ತಿಳಿದು ಬಂದಿದೆ.
ಮೂಲತಃ ರಾಮದುರ್ಗದವರಾದ ಉಮೇಶ ಇಬ್ಬರು ಪುತ್ರರು, ಓರ್ವ ಪುತ್ರಿ ಸೇರಿ ಅಪಾರ ಬಂಧು ಬಳಗ ಅಗಲಿದ್ದಾರೆ.
ಉಮೇಶ ನಿಧನಕ್ಕೆ ಕೆಲೂರು ಶಿವಗಂಗಾ ಕ್ಷೇತ್ರದ ಡಾ.ಮಲಯ ಶಾಂತಮುನಿ ಸ್ವಾಮೀಜಿ, ಸಿದ್ದನಕೊಳ್ಳದ ಡಾ.ಶಿವಕುಮಾರ ಸ್ವಾಮೀಜಿ, ಮುರನಾಳದ ಮೇಘರಾಜೇಂದ್ರ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.