ಕೋವಿಡ್‌ನಿಂದ ೨೮ ಜನ ಗುಣಮುಖ, ಜಿಲ್ಲಾ ಆಸ್ಪತ್ರೆಯಿಂದ ಬಿಡುಗಡೆ
ಜಿಲ್ಲೆಯಲ್ಲಿ ಮತ್ತೆ ೨೮ ಜನ ಕೋವಿಡ್‌ನಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದು, ರವಿವಾರ ಸಂಜೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.
ನಾಡನುಡಿ ನ್ಯೂಸ್
ಬಾಗಲಕೋಟೆ ಜು.೧೩ : ಜಿಲ್ಲೆಯಲ್ಲಿ ಮತ್ತೆ ೨೮ ಜನ ಕೋವಿಡ್‌ನಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದು, ರವಿವಾರ ಸಂಜೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದರೂ ಇದರ ಜೊತೆಗೆ ಗುಣಮುಖರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಕಳೆದ ಎರಡು ದಿನಗಳಲ್ಲಿ ಒಟ್ಟು ೬೧ ಜನ ಚಿಕಿತ್ಸೆ ಪಡೆದು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ರವಿವಾರ ೨೮ ಜನ ಗುಣಮುಖರಾದವರಲ್ಲಿ ಕಲಾದಗಿ ಗ್ರಾಮದ ೧೭, ಬಾದಾಮಿ ೬, ಮುಧೋಳ ೨, ಜಮಖಂಡಿ, ಬಾಗಲಕೋಟೆ ತಾಲೂಕಿನ ಮುಡಪಲಜೀವಿ ಗ್ರಾಮ, ಬೀಳಗಿ ತಾಲೂಕಿನ ಗಲಗಲಿ ಗ್ರಾಮ ತಲಾ ಒಬ್ಬರು ಇದ್ದಾರೆ.
ಕಲಾದಗಿ ಗ್ರಾಮದ ೧೦ ವರ್ಷದ ಬಾಲಕ ಪಿ-೧೫೩೧೮, ೫ ವರ್ಷದ ಬಾಲಕಿ ಪಿ-೧೬೬೧೦, ೧೧ ವರ್ಷದ ಬಾಲಕಿ ಪಿ-೧೨೦೬೮, ೧೦ ವರ್ಷದ ಬಾಲಕಿ ಪಿ-೨೩೧೩೯, ಬಾದಾಮಿಯ ೧೦ ವರ್ಷದ ಬಾಲಕ ಪಿ-೨೩೧೪೧, ೪ ವರ್ಷದ ಬಾಲಕ ಪಿ-೨೩೧೪೨, ೨೭ ವರ್ಷದ ಯುವಕ ಪಿ-೯೧೫೨, ೨೬ ವರ್ಷದ ಯುವತಿ ಪಿ-೨೪೬೪೬, ಕಲಾದಗಿಯ ೩೫ ವರ್ಷದ ಮಹಿಳೆ ಪಿ-೧೨೦೬೯, ೧೫ ವರ್ಷದ ಬಾಲಕಿ ಪಿ-೧೨೦೭೦, ೪೦ ವರ್ಷದ ಪುರುಷ ಪಿ-೨೪೬೪೪, ಬಾದಾಮಿಯ ೨೫ ವರ್ಷದ ಯುವತಿ ಪಿ-೨೪೬೪೪ ಕೋವಿಡ್‌ನಿಂದ ಗುಣಮುಖರಾಗಿದ್ದಾರೆ.
ಜಮಖಂಡಿಯ ೪೨ ವರ್ಷದ ಪುರುಷ ಪಿ-೨೪೬೧೮, ಬಾಗಲಕೋಟೆ ತಾಲೂಕಿನ ಮುಡಪಲಜೀವಿ ಗ್ರಾಮದ ೩೮ ವರ್ಷದ ಮಹಿಳೆ ಪಿ-೧೩೨೭೩, ಬೀಳಗಿ ತಾಲೂಕಿನ ಗಲಗಲಿ ಗ್ರಾಮದ ೧೩ ವರ್ಷದ ಬಾಲಕ ಪಿ-೧೨೦೬೭, ಕಲಾದಗಿ ಗ್ರಾಮದ ೩೭ ವರ್ಷದ ಪುರುಷ ೧೨೦೭೨, ಮುಧೋಳನ ೫೭ ವರ್ಷದ ಪುರುಷ ಪಿ-೧೫೩೦೪, ಕಲಾದಗಿ ಗ್ರಾಮದ ೨೮ ವರ್ಷದ ಯುವತಿ ಪಿ-೧೫೩೧೭, ಮುಧೋಳ ತಾಲೂಕಿ ಮುಗಳಖೋಡ ಗ್ರಾಮದ ೨೯ ವರ್ಷದ ಯುವಕ ಪಿ-೧೫೩೧೯, ಬಾದಾಮಿಯ ೭೯ ವರ್ಷದ ವೃದ್ದ ಪಿ-೧೬೬೦೩ ಗುಣಮುಖರಾಗಿದ್ದಾರೆ.
ಕಲಾದಗಿ ಗ್ರಾಮದ ೫೧ ವರ್ಷದ ಪುರುಷ ಪಿ-೧೬೬೦೫, ೪೫ ವರ್ಷದ ಮಹಿಳೆ ಪಿ-೧೬೬೦೬, ೨೪ ವರ್ಷದ ಯುವತಿ ಪಿ-೧೮೨೫೯, ೩೨ ವರ್ಷದ ಮಹಿಳೆ ಪಿ-೧೮೨೬೪, ೨೭ ವರ್ಷದ ಯುವಕ ಪಿ-೨೪೬೪೨, ೪೪ ವರ್ಷದ ಪುರುಷ ಪಿ-೪೬೪೩ ಹಾಗೂ ೨೫ ವರ್ಷದ ಯುವತಿ ಪಿ-೨೪೬೪೫ ಕೋವಿಡ್‌ನಿಂದ ಗುಣಮುಖರಾಗಿದ್ದಾರೆ. ಗುಣಮುಖರಾದವರಿಗೆ ಜಿಲ್ಲಾ ಶಸ್ತç ಚಿಕಿತ್ಸಕ ಡಾ.ಪ್ರಕಾಶ ಬಿರಾದಾರ ಔಷಧ ಮತ್ತು ಪ್ರಮಾಣ ಪತ್ರ ವಿತರಿಸಿದರೆ ಆಸ್ಪತ್ರೆಯ ಸಿಬ್ಬಂದಿಗಳು ಅವರ ಕೈಗಳಿಗೆ ಸೀಲ್ ಹಾಕಿ ಚಪ್ಪಾಳೆ ತಟ್ಟಿ ಬೀಳ್ಕೊಟ್ಟರು.