ಡಿಸಿಸಿ ಬ್ಯಾಂಕ್ ಫಲಿತಾಂಶ ಘೋಷಣೆಗೆ ಹೈಕೋರ್ಟ್ ಅಸ್ತು..!

ಸಿದ್ಧನಗೌಡ ಪಾಟೀಲರ ಮತ ಹೊರತುಪಡಿಸಿ ಇತರ ಮತಗಳ ಎಣಿಕೆಗೆ ನ್ಯಾಯಾಲಯ ಆದೇಶಿಸಿದೆ.

ಡಿಸಿಸಿ ಬ್ಯಾಂಕ್ ಫಲಿತಾಂಶ ಘೋಷಣೆಗೆ ಹೈಕೋರ್ಟ್ ಅಸ್ತು..!

ಬಾಗಲಕೋಟೆ:
ಡಿಸಿಸಿ ಬ್ಯಾಂಕ್ ಅಧ್ಯಕ್ಷ,ಉಪಾಧ್ಯಕ್ಷರ ಚುನಾವಣೆಯ ಮತ ಎಣಿಕೆಗೆ ಧಾರವಾಡ ವಿಭಾಗೀಯ ಪೀಠ ಆದೇಶಿಸಿದೆ.

ಸರ್ಕಾರದಿಂದ ನಾಮನಿರ್ದೇಶನಗೊಂಡಿರುವ ಸಿದ್ಧನಗೌಡ ಪಾಟೀಲರ ಮತ ಹೊರತು ಪಡಿಸಿ ಇತರ ರ ಮತಗಳ ಎಣಿಕೆಗೆ ನ್ಯಾಯಾಲಯ ಆದೇಶಿಸಿದೆ.

ನ.೧೭ ರಂದು ಡಿಸಿಸಿ ಬ್ಯಾಂಕ್ ಗೆ ಮತದಾನ ನಡೆದಿತ್ತು ಆದರೆ ಶೇರುಗಳಿಲ್ಲದೇ ಸರ್ಕಾರ ಸಿದ್ಧನಗೌಡ ಪಾಟೀಲರನ್ನು ನಾಮಕರಣಗೊಳಿಸಿದ ಹಿನ್ನೆಲೆಯಲ್ಲಿ ಫಲಿತಾಂಶ ಪ್ರಕಟಿಸದಂತೆ ಆದೇಶಿಸಲಾಗಿತ್ತು.

ಇಂದು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಸಿದ್ಧನಗೌಡರ ಮತ ಹೊರತುಪಡಿಸಿ ಇತರ ಮತಗಳ ಎಣಿಕೆಗೆ ಆದೇಶಿಸಿದೆ ಎಂದು ತಿಳಿದು ಬಂದಿದೆ. ಸಿದ್ಧನಗೌಡರ ನಿರ್ದೇಶಕ ಸ್ಥಾನ ಕುರಿತಾದ ವಿಚಾರಣೆಯನ್ನು ಕಾಯ್ದಿರಿಸಿದೆ.