ಲೋಕಸಭೆ ಚುನಾವಣೆ: ಬೆಳಗಾವಿಗೆ ವೀರಣ್ಣ ಚರಂತಿಮಠ, ಬಾಗಲಕೋಟೆಗೆ ಸಿದ್ದು ಸವದಿ- ಪಕ್ಷದಿಂದ ಘೋಷಣೆ
ಬಾಗಲಕೋಟೆ ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರನ್ನು ಬೆಳಗಾವಿ ಕ್ಷೇತ್ರಕ್ಕೆ ಉಸ್ತುವಾರಿ ಆಗಿ, ತೇರದಾಳ ಶಾಸಕ ಸಿದ್ದು ಸವದಿ ಅವರನ್ಜು ಬಾಗಲಕೋಟೆ ಲೋಕಸಭಾ ಕ್ಷೇತ್ರದ ಸಂಚಾಲಕರನ್ನಾಗಿ ನೇಮಿಸಿ ಪಕ್ಷ ಆದೇಶಿಸಿದೆ
ಬಾಗಲಕೋಟೆ:ಮುಂಬರುವ ಲೋಕಸಭೆ ಚುನಾವಣೆಗೆ ಬಿರುಸಿನ ತಾಲೀಮು ಆರಂಭಿಸಿರುವ ಬಿಜೆಪಿ ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹಾಗೂ ತೇರದಾಳ ಶಾಸಕ ಸಿದ್ದು ಸವದಿ ಅವರಿಗೆ ಮಹತ್ವದ ಜವಾಬ್ದಾರಿಯನ್ನು ನೀಡಿದೆ.
ರಾಜ್ಯದಲ್ಲೇ ಪವರ್ ಸೆಂಟರ್ ಎನಿಸಿಕೊಂಡಿರುವ ಬೆಳಗಾವಿ ಜಿಲ್ಲೆಗೆ ಬವಿವ ಸಂಘದ ಕಾರ್ಯಧ್ಯಕ್ಷರೂ ಆಗಿರುವ ಡಾ.ವೀರಣ್ಣ ಚರಂತಿಮಠ ಅವರನ್ನು ಉಸ್ತುವಾರಿಯನ್ನಾಗಿ ನೇಮಿಸಿದೆ. ಪಕ್ಷದ ಸಿದ್ಧಾಂತವನ್ನು ಕಟ್ಟರ್ ಆಗಿ ಪ್ರತಿಪಾದಿಸುವವರಿಗೆ ವಿವಿಧ ಲೋಕಸಭಾ ಕ್ಷೇತ್ರಗಳ ಆಗು, ಹೋಗುಗಳ ಪರಿಶೀಲನೆ, ಸಂಘಟನೆ ದೃಷ್ಠಿಯಿಂದ ಉಸ್ತುವಾರಿಗಳನ್ನಾಗಿ ನೇಮಿಸಲಾಗಿದೆ. ಉತ್ತರ ಕರ್ನಾಟಕದಲ್ಲಿ ಪ್ರಮುಖ ಕ್ಷೇತ್ರದ ಉಸ್ತುವಾರಿ ಜವಾಬ್ದಾರು ಅವರಿಗೆ ಒಲಿದು ಬಂದಿರುವುದು ಪಕ್ಷದಲ್ಲಿನ ಅವರ ವರ್ಚಸ್ಸಿಗೆ ಕಾರಣವಾಗಿದೆ. ಇನ್ನು ಅವರೊಂದಿಗೆ ಸಂಚಾಲಕರಾಗಿ ಮಾಜಿ ಶಾಸಕ ಸಂಜಯ ಪಾಟೀಲ ಅವರನು ಪಕ್ಷ ನೇಮಿಸಿದೆ.
ಅಲ್ಲದೆ ಬಾಗಲಕೋಟೆ ಲೋಕಸಭಾ ಕ್ಷೇತ್ರಕ್ಕೆ ಉಸ್ತುವಾರಿ ಆಗಿ ಲಿಂಗರಾಜ ಪಾಟೀಲ ಅವರನ್ನು ನೇಮಿಸಿರುವ ಪಕ್ಷ ಸಂಚಾಲಕರನ್ನಾಗಿ ತೇರದಾಳ ಶಾಸಕ ಸಿದ್ದು ಸವದಿ ಅವರನ್ನು ನೇಮಿಸಿದೆ. ಈವರೆಗೆ ಬಾಗಲಕೋಟೆ ಉಸ್ತುವಾರಿ ಆಗಿದ್ದ ಬೆಳಗಾವಿ ಶಾಸಕ ಅಭಯ ಪಾಟೀಲ ಅವರಿಗೆ ಚಿಕ್ಕೋಡಿ ಕ್ಷೇತ್ರದ ಉಸ್ತುವಾರಿ ನೀಡಲಾಗಿದೆ.