ಕಾಂಗ್ರೆಸ್ ವಿರೋಧದ ಮಧ್ಯೆ ಕಾಟನ್ ಮಾರ್ಕೆಟ್ ಲೀಸ್ ಅವಧಿ ವಿಸ್ತರಣೆಗೆ ತೀರ್ಮಾನ
ನಾಡನುಡಿ ನ್ಯೂಸ್
ಬಾಗಲಕೋಟೆ
ನಗರದ ಕಾಟನ್ ಮಾರುಕಟ್ಟೆ ಹಾಗೂ ಕಿರಾಣಿ ಮಾರುಕಟ್ಟೆಗಳ ಲೀಸ್ ಅವಧಿಯನ್ನು ಮುಂದಿನ ಐದು ವರ್ಷಕ್ಕೆ ವಿಸ್ತರಿಸಲು ಶುಕ್ರವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಕಾಂಗ್ರೆಸ್ ಸದಸ್ಯರ ವಿರೋಧದ ನಡುವೆ ಲೀಸ್ ಅವಧಿ ವಿಸ್ತರಿಸಲಾಗಿದೆ.
ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಗರಸಭೆ ಪೌರಾಯುಕ್ತರಾಗಿದ್ದ ರುದ್ರೇಶ ಅವರು ಕಾಟನ್ ಮಾರುಕಟ್ಟೆ ಲೀಸ್ ಅವಧಿ ಮುಕ್ತಾಯದ ಹಿನ್ನೆಲೆಯಲ್ಲಿ ಮಾರುಕಟ್ಟೆಯನ್ನು ಖಾಲಿ ಮಾಡಿಸಿದ್ದರು. ಈಗಲೂ ಲೀಸ್ ಬದಲಾಗಿ ವ್ಯಾಪಾರಸ್ಥರಿಗೆ ಅವುಗಳನ್ನು ಬೇಕಿದ್ದರೆ ಮಾರಾಟ ಮಾಡಬಹುದು ಆದರೆ ಲೀಸ್ ವಿಸ್ತರಣೆ ಬೇಡ ಎಂದು ಕಾಂಗ್ರೆಸ್ ಆಗ್ರಹಿಸಿತ್ತು.
ಶಾಸಕ ಡಾ.ವೀರಣ್ಣ ಚರಂತಿಮಠ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಮುಂದಿನ ಐದು ವರ್ಷಕ್ಕೆ ಎರಡೂ ಮಾರುಕಟ್ಟೆಗಳ ಅವಧಿ ವಿಸ್ತರಿಸಲು ತೀರ್ಮಾನಿಸಲಾಗಿದೆ.
ಇದರ ಜತೆಗೆ ವ್ಯಾಪಾರಸ್ಥರ ಸಂಘದ ಕಟ್ಟಡದ ಅವಧಿಯನ್ನೂ ವಿಸ್ತರಿಸುವ ಸಂಬಂಧ ತೀರ್ಮಾನ ಕೈಗೊಳ್ಳಲಾಗಿದ್ದು, ಬಡ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್, ಅಡುಗೆ ಅನಿಲ ವಿತರಣೆ ಕಾರ್ಯಕ್ರಮವನ್ನೂ ಮುಂದವರಿಸಲಾಗುವುದು ಎಂದು ಶಾಸಕ ಡಾ.ಚರಂತಿಮಠ ತಿಳಿಸಿದರು.
ಉಪಾಧ್ಯಕ್ಷ ಬಸವರಾಜ ಅವರಾದಿ, ಪೌರಾಯುಕ್ತ ಮುನಿಶಾಮಪ್ಪ ಮತ್ತಿತರರು ಇದ್ದರು.