ಓದಿನ ನಿರಾಸಕ್ತಿ ದೂರಮಾಡಲು ಕೆರಕಲಮಟ್ಟಿಯಲ್ಲಿ ಮಕ್ಕಳಿಂದ ಪೋಷಕರ ಪಾದಪೂಜೆ, ದೀಕ್ಷೆ..! 

ಓದಿನ ನಿರಾಸಕ್ತಿ ದೂರಮಾಡಲು ಕೆರಕಲಮಟ್ಟಿಯಲ್ಲಿ ಮಕ್ಕಳಿಂದ ಪೋಷಕರ ಪಾದಪೂಜೆ, ದೀಕ್ಷೆ..! 


ಬಾಗಲಕೋಟೆ:  ಜಿಲ್ಲೆಯ ಬಾದಾಮಿ ತಾಲೂಕಿನ ಕೆರಕಲಮಟ್ಟಿ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಂದ ತಂದೆ ತಾಯಿಯ ಪಾದ ಪೂಜೆ ಹಾಗೂ ಪೋಷಕರಿಂದ ಮಕ್ಕಳಿಗೆ ದೀಕ್ಷೆ ಕೊಡಿಸಲಾಯಿತು.

ಗ್ರಾಮದ ರ‍್ಕಾರಿ ಶಾಲೆಯಲ್ಲಿ  ೧ ರಿಂದ ೭ ನೇ ತರಗತಿವರೆಗೆ ಒಟ್ಟು ೨೪೨ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಶಾಲೆಯ ಮುಖ್ಯ ಗುರುಗಳಾದ ರಾಜೇಶ್ ಮನಗುಳಿ ಹಾಗ ಸಹ ಶಿಕ್ಷಕರು, ಶ್ರಾವಣದ ಕೊನೆ ಸೋಮವಾರದಂದು ಮಕ್ಕಳಿಂದ ತಂದೆ-ತಾಯಿಗಳ ಪಾದಪೂಜೆ ಮಾಡಿಸಿದ್ದಾರೆ. ಮಕ್ಕಳಿಗೆ ಆತ್ಮವಿಶ್ವಾಸದೊಂದಿಗೆ ಭರವಸೆ ಮೂಡಿಸುವ ಕರ‍್ಯ ಮಾಡಿದ್ದಾರೆ. ಶಿಕ್ಷಕರ ವಿನೂತನ ಕರ‍್ಯಕ್ರಮಕ್ಕೆ  ಗ್ರಾಮಸ್ಥರು ಸಹ ಸಾಥ್ ನೀಡಿದ್ದಾರೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಜೊತೆಗೆ ಅವರಲ್ಲಿ ಹೆಚ್ಚಿನ ಪ್ರಮಾಣದ ಓದಿನ ಆಸಕ್ತಿ ಬೆಳೆಸಲು ಈ ಶಾಲೆ ಮುಂದಾಗಿದೆ. ಎಲ್ಲಾ ಮಕ್ಕಳು ಪ್ರತಿ ನಿತ್ಯ ಶಾಲೆಗೆ ಬರಬೇಕು ಪೋಷಕರು ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರಥಮ ಆದ್ಯತೆ ನೀಡಬೇಕು ಆ ಮೂಲಕ ಉತ್ತಮ ಫಲಿತಾಂಶ ಪಡೆಯಬೇಕು ಅನ್ನೋ ಹಂಬಲದಿಂದ ಶಿಕ್ಷಕರು ವಿಶೇಷ ಕರ‍್ಯಕ್ರಮ ಹಮ್ಮಿಕೊಂಡಿತ್ತು.

ತಂದೆ, ತಾಯಿಗೆ ಪಾದಪೂಜೆ, ಮಕ್ಕಳಿಂದ ಪ್ರತಿಜ್ಞೆ, ಪೋಷಕರಿಂದ ದೀಕ್ಷೆ..!

ನೂರಾರು ಮಕ್ಕಳು ಸಾಮೂಹಿಕವಾಗಿ ತಮ್ಮ ತಮ್ಮ ತಂದೆ ತಾಯಿಯ ಪಾದಪೂಜೆ ಮಾಡಿ ಆಶರ‍್ವಾದ ಪಡೆದರು. ಪೋಷಕರ ಪಾದ ತೊಳೆದು ವಿಭೂತಿ ಕುಂಕುಮ ರ‍್ಪಿಸಿ ಹೂ ಇಟ್ಟು ಉದಬತ್ತಿ ಬೆಳಗಿ ಪೂಜೆ ಮಾಡಿ, ಪವಿತ್ರ ದಿನವಾದ ಇಂದು, ನನ್ನ ಹೆತ್ತವರ ಪುಣ್ಯಪಾದಗಳನ್ನು ಮುಟ್ಟಿ ಪ್ರತಿಜ್ಞೆ ಮಾಡುವುದು ಏನೆಂದರೆ, ನಾನು ನನ್ನ ಶಿಕ್ಷಣವನ್ನು ಪರ‍್ಣಗೊಳಿಸುವವರೆಗೆ ಎಂದಿಗೂ ಶಾಲೆಗೆ ಗೈರು ಹಾಜರಾಗದೇ, ಶಾಲೆಯಲ್ಲಿ ಪೂಜ್ಯ ಗುರುಗಳಿಂದ ಪಡೆದ ಜ್ಞಾನವನ್ನು ನನ್ನ ಜೀವನದಲ್ಲಿ ಅಳವಡಿಸಿಕೊಂಡು, ಅವರು ಹೇಳಿದ ಮನೆಗೆಲಸ ಮತ್ತು ವಹಿಸಿದ ಜವಾಬ್ದಾರಿಗಳನ್ನು ಶಿರಸಾವಹಿಸಿ ಪಾಲಿಸಿ ಸಮಾಜದಲ್ಲಿ ಉತ್ತಮ ನಾಗರಿಕನಾಗಲು ಮನಃಪರ‍್ವಕವಾಗಿ ಪ್ರಯತ್ನಿಸುತ್ತೇನೆ. ನಾನು ಇನ್ನು ಮುಂದೆ ಜೀವನದಲ್ಲಿ ಎಂದಿಗೂ ದುರಭ್ಯಾಸಗಳನ್ನು ಮಾಡುವುದಿಲ್ಲ. ಸತ್ಯ,, ಅಹಿಂಸೆಗಳನ್ನು ಪಾಲಿಸುತ್ತಾ ಸನ್ಮರ‍್ಗದಲ್ಲಿ ನಡೆಯುತ್ತ ಆರ‍್ಶ ವಿದ್ಯರ‍್ಥಿಯಾಗುತ್ತೇನೆ. ವಿದ್ಯಾದಾನ ಮಾಡಿದ ಗುರುಗಳಿಗೆ ಜನ್ಮ ನೀಡಿದ ಹೆತ್ತವರಿಗೆ ಕರ‍್ತಿ ತರುವ ಹಾಗೆ ಜೀವನವನ್ನು ರೂಪಿಸಿಕೊಳ್ಳುತ್ತೇನೆ.ಆ ಮೂಲಕ ನನ್ನ ಊರಿಗೆ, ನಾಡಿಗೆ ಹಾಗೂ ದೇಶಕ್ಕೆ ಹೆಸರು ತರಲು ನನ್ನ ಉಸಿರು ಇರುವವರೆಗೂ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಈ ಮೂಲಕ ದೃಢಸಂಕಲ್ಪ ಮಾಡುತ್ತಾ ಪ್ರತಿಜ್ಞೆ ಮಾಡುತ್ತೇನೆ ಎಂದು ಪ್ರಮಾಣ ಮಾಡಿದರು


ಶಿಕ್ಷಕರು ಹಾಗೂ ಮಕ್ಕಳಿಗೆ ಸಾಥ್ ಕೊಟ್ಟ ಪೋಷಕರು..!

ಮಕ್ಕಳಲ್ಲಿ ಭರವಸೆಯನ್ನ ಮೂಡಿಸೋದು ಮೊದಲ ಭಾಗವಾದ್ರೆ ಇನ್ನುಳಿದಂತೆ ಪಾಲಕರು ಮಕ್ಕಳನ್ನ ಉತ್ತಮವಾಗಿ ಓದಿಸುವ ಕುರಿತು ಪೋಷಕರಿಂದ ಪ್ರಮಾಣ ಮಾಡಿಸಿ ದೀಕ್ಷೆ ಕೊಡಿಸಿದರು. ಈ ವೇಳೆ ಎಲ್ಲ ಪೋಷಕರು ಪವಿತ್ರದಿನವಾದ ಇಂದು ನಮ್ಮ ಮಗುವಿನ, ಮಕ್ಕಳ ತಲೆಯ ಮೇಲೆ ಕೈ ಇಟ್ಟು ಪ್ರಮಾಣ ಮಾಡುವ ಮೂಲಕ ದೀಕ್ಷೆ ಕೈಗೊಳ್ಳುವುದು ಏನೆಂದರೆ, ನಮ್ಮ ಮಗುವಿಗೆ, ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಕೊಡಿಸುವುದನ್ನು ನಮ್ಮ ಪ್ರಥಮ ಆದ್ಯತೆಯೆಂದು ಭಾವಿಸಿ ಕಾಯಾ ವಾಚಾ ಮನಸಾ ಪ್ರಯತ್ನಿಸುತ್ತೇವೆ. ಅವರ ಶಿಕ್ಷಣಕ್ಕೆ ಯಾವುದೇ ಚ್ಯುತಿ ಬಾರದಂತೆ ನಡೆದುಕೊಳ್ಳುತ್ತೇವೆ. ಅವರು ಎಲ್ಲಿಯವರೆಗೆ ಶಿಕ್ಷಣ ಪಡೆಯಲು ಇಚ್ಛಿಸುವರೋ ಅಲ್ಲಿಯವರೆಗೆ ಏನೇ ಕಷ್ಟಗಳು ಬಂದರೂ ಎದೆಗುಂದದೇ ಅವರು ಶಿಕ್ಷಣವನ್ನು ಪರ‍್ಣಗೊಳಿಸುವಂತೆ ಶ್ರಮಿಸುತ್ತೇವೆ. ಇನ್ನು ಮುಂದೆ ನಾವು ಮಕ್ಕಳಿಗಾಗಿ ಆಸ್ತಿ ಮಾಡದೇ ನಮ್ಮ ಮಕ್ಕಳನ್ನೇ ನಮ್ಮ ಊರಿನ, ಸಮಾಜದ, ನಾಡಿನ ಹಾಗೂ ದೇಶದ ಹೆಮ್ಮೆಯ ಆಸ್ತಿಯನ್ನಾಗಿ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇವೆ. ನಮ್ಮ ಮಕ್ಕಳ ಗುಣಾತ್ಮಕ ಶಿಕ್ಷಣಕ್ಕಾಗಿ ನಮ್ಮೂರಿನ ಶಾಲೆ ಹಾಗೂ ಪೂಜ್ಯ ಗುರುಗಳೊಂದಿಗೆ ಉತ್ತಮ ಬಾಂಧವ್ಯದೊಂದಿಗೆ ಸಂಪರ‍್ಣ ಸಹಕಾರ ನೀಡುತ್ತೇವೆ. ಮತ್ತು ಇದೇ ಪುಣ್ಯ ದಿನದಂದುನಮ್ಮ ಮಗುವಿನ,  ಮಕ್ಕಳ ತಲೆಯ ಮೇಲೆ ಕೈ ಇಟ್ಟು ಪ್ರಮಾಣ ಮಾಡುವುದೇನೆಂದರೆ, ನಮ್ಮ ಮಗುವಿನ, ಮಕ್ಕಳ ಸುಂದರ ಭವಿಷ್ಯಕ್ಕಾಗಿ ನಮ್ಮಲ್ಲಿರುವ ಎಲ್ಲಾ ರೀತಿಯ ದುಶ್ಚಟಗಳನ್ನು ಬಿಟ್ಟು ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಮಕ್ಕಳಿಗೆ ಒಳ್ಳೆಯ ಪಾಲಕರಾಗಿ ಸನ್ಮರ‍್ಗದಲ್ಲಿ ನಡೆಯುತ್ತಾ ಆರ‍್ಶ ಜೀವನವನ್ನು ನಡೆಸುತ್ತೇವೆ ಎಂದು ದೀಕ್ಷೆ ಕೈಗೊಳ್ಳುತ್ತೇವೆ ಎಂದು  ಶಾಲಾ ಶಿಕ್ಷಕರ ಸಮ್ಮುಖದಲ್ಲಿ ಪ್ರಮಾಣ ವಚನ ಬೋಧನೆ ಮಾಡಿಸಲಾಯಿತು.  

ಇಂತಹ ಕರ‍್ಯಕ್ರಮದ ಮೂಲಕ ಮಕ್ಕಳಲ್ಲಿ ತಂದೆ-ತಾಯಿ ಆಶರ‍್ವಾದವಿದೆ ಎಂಬ ನಂಬಿಕೆ ಮೂಡಿದೆ. ಇತ್ತ ತಂದೆ-ತಾಯಿಗಳು ಸಹ ತಮ್ಮ ತಮ್ಮ ಮಕ್ಕಳ ಓದಿನ ಬಗ್ಗೆ ಮತ್ತಷ್ಟು ಕಾಳಜಿ ವಹಿಸಲು ಸಹಕಾರಿಯಾಗಿದೆ. ಎಂದು ಶಿಕ್ಷಕರು, ಪೋಷಕರು ವಿದ್ಯರ‍್ಥಿಗಳು ಸಂತಸ ವ್ಯಕ್ತಪಡಿಸಿದರು.