ಮಕ್ಕಳಲ್ಲಿ ಮೊಬೈಲ್ ಗೀಳಾಗಿ ಪರಿಣಮಿಸದಿರಲಿ

ಮಕ್ಕಳಲ್ಲಿ ಮೊಬೈಲ್ ಗೀಳಾಗಿ ಪರಿಣಮಿಸದಿರಲಿ
ಬಾಗಲಕೋಟೆ : ಮೊಬೈಲ್ ಬಳಕೆ ಮಕ್ಕಳಲ್ಲಿ ಗೀಳಾಗಿ ಪರಿಣಮಿಸುತ್ತಿದ್ದು, ಅದನ್ನು ತಡೆಗಟ್ಟುವ ಕೆಲಸವಾಗಬೇಕಿದೆ ಎಂದು ವಿಧಾನ ಪರಿಷತ್ತಿನ ಸದಸ್ಯ ಪಿ.ಎಚ್.ಪೂಜಾರ ಹೇಳಿದರು. 
ನಗರದ ಮಹೇಶ್ವರಿ ಮಂಗಲ ಕಾರ್ಯಾಲಯದಲ್ಲಿ ನಡೆದ ಮೊಬೈಲ್ ವ್ಯಾಪಾರಸ್ಥರ ಸಂಘದ ೧೫ನೇ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಮೊಬೈಲ್ ಪ್ರತಿಯೊಬ್ಬರ ಜೇಬಿನಲ್ಲಿ ಇರುವುದರಿಂದ ಮೊಬೈಲ್ ವ್ಯಾಪಾರವು ದೊಡ್ಡ ಕ್ಷೇತ್ರವಾಗಿ ಹೊರಹೊಮ್ಮಿದೆ. ನೀವು ನೀಡುವ ಸೇವೆಯಲ್ಲಿ ಪ್ರಾಮಾಣಿಕತೆ, ನಿಷ್ಠೆಯನ್ನು ರೂಢಿಸಿಕೊಂಡು ಸಮಾಜಕ್ಕೆ ಮಾದರಿಯಾಗುವ ಕೆಲಸ ಮಾಡಬೇಕೆಮದು ಕರೆ ನೀಡಿದರು. 
ಸಂಘದ ಅಧ್ಯಕ್ಷ ರಮೇಶ ಕಂದಕೂರ, ಮುಖಂಡರಾದ ರಾಮ ಮುಂದಡಾ,  ವಿರುಪಾಕ್ಷಿ ಅಮೃತಕರ, ಹಾಜಿಮಸ್ತಾನ ಬಾದಾಮಿ. ಪ್ರವೀಣ ಕಂದಕೂರ, ಸಂದೇಶ ಕರಣೆ, ಮಹಾಂತೇಶ ಗೌಡಬಾಂವಿ ಇತರರು ಇದ್ದರು.