ಜೂಜಾಟ:  ಮೂವರ ಬಂಧನ

  ಜೂಜಾಟ:  ಮೂವರ ಬಂಧನ

        ಜೂಜಾಟ:  ಮೂವರ ಬಂಧನ 
ಬಾಗಲಕೋಟೆ : 
ಶಹರ್ ಪೊಲೀಸ್ ಠಾಣೆಯ ಪಿಎಸ್‌ಐ ಷಹಜಹಾನ್ ನಾಯ್ಕ್ ನಡೆಸಿದ ದಾಳಿಯಲ್ಲಿ ಮೂರು ಮಟಕಾ ಮತ್ತು ಒಂದು ಇಸ್ಪಿಟು ಅಂದರ ಬಾಹರ ಜೂಜಾಟ ಪ್ರಕರಣ ದಾಖಲಾಗಿದ್ದು ಮೂವರನ್ನು ಬಂಧಿಸಲಾಗಿದೆ. 
 ನಗರದ ಬೆರೆ ಬೆರೆ ಭಾಗಗಳಲ್ಲಿ ನಡೆಸಿದ ದಾಳಿಯಲ್ಲಿ ಮಟಕಾ ನಂಬರಗಳನ್ನು ಬರೆದುಕೊಳ್ಳುತ್ತಿದ್ದ ಮುವರನ್ನು ಬಂಧಿಸಿ ಅವರಿಂದ ನಗದು ಹಣ ಮತ್ತು ಮಟಕಾ ಚೀಟಿಗಳನ್ನು ವಸಪಡಿಸಿಕೊಂಡಿದೆ. ಗೌಳೇರಗುಡಿ ಭಾಗದಲ್ಲಿ ಐವರು ಕೂಡಿಕೊಂಡು ಇಸ್ಪೀಟು ಅಂದರ ಬಾಹರ್ ಆಟ ಆಡುತ್ತಿದ್ದಾಗ ಅವರಿಂದ ೫೨ ಇಸ್ಪಟು ಎಲೆಗಳನ್ನು ಮತ್ತು ನಗದು ಹಣವನ್ನು ವಶಪಡಿಸಿಕೊಂಡಿದೆ. ಈ ಎಲ್ಲರ ಮೇಲೆ ನಾಲ್ಕು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿ ಆರೋಪಿತರನ್ನು ನ್ಯಾಯಾಂಗ ವಶಕ್ಕೆ ನೀಡಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.