ಬುಡಾದಲ್ಲಿ ಸಂಘ ದಕ್ಷ....!
*ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಬಿಜೆಪಿ ಶಿಸ್ತಿನ ಸಿಪಾಯಿಗಳು
ರಾಮ ಮನಗೂಳಿ
ಬಾಗಲಕೋಟೆ:
ಸಂಘ ಪರಿವಾರದ ಸದಸ್ಯರಾಗಿ ಸಿದ್ಧಾಂತವನ್ನೇ ಜೀವನವಾಗಿಸಿಕೊಂಡವರ ಮನೆಗೆ ಅಧಿಕಾರ ಭಾಗ್ಯ ಒಲಿದು ಬಂದಿದೆ. ದಶಕಗಳ ಕಾಲ ಎಲೆಮರೆಯ ಕಾಯಂತ್ತಿದ್ದ ನಿಷ್ಠಾವಂತ ಕಾರ್ಯಕರ್ತರು ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರದ ಚುಕ್ಕಾಣಿ ಹಿಡಿಯುವುದರ ಮೂಲಕ ಕಾರ್ಯಕರ್ತರಲ್ಲಿ ಉತ್ಸಾಹ ಹೊರಹೊಮ್ಮಿದರೆ ಇತ್ತ ನಗರದ ಅಭಿವೃದ್ಧಿ ಹೊಸಪಡೆ ಮುನ್ನುಡಿ ಬರೆಯುವ ಅಭಿಲಾಷೆ ಜನರಲ್ಲಿ ಮೂಡಿದೆ.
ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕಗೊಂಡಿರುವ ಬಸಲಿಂಗಪ್ಪ ನಾವಲಗಿ, ಸದಸ್ಯರಾಗಿರುವ ಗುಂಡು ಶಿಂಧೆ, ಜಯಂತ ಕುರುಂದವಾಡ, ರಾಜು ನಾಯ್ಕರ, ಶಾಂತಾ ಐಕೂರ ಅವರ ಪತಿ ಈರಪ್ಪ ಐಕೂರ ಅವರು ಎಂದೂ ಅಧಿಕಾರದ ಆಸೆ ಪಟ್ಟವರಲ್ಲ. ರಾಷ್ಟಿçÃಯತೆಯನ್ನು ಮೈಗೂಡಿಸಿಕೊಂಡು ಸಂಘಟನೆಗಾಗಿ ಕಲ್ಲು,ಮಣ್ಣು ಹೊತ್ತವರು. ಜೈಲುವಾಸ ಅನುಭವಿಸಿದವರು. ಪಕ್ಷ ಅಧಿಕಾರಕ್ಕೆ ಬಂದಾಗ ಸಂಭ್ರಮಿಸಿದವರು. ಆದರೆ ಅಧಿಕಾರದ ಪಾಲು ಸಿಗಲೆಂದು ಆಸೆ ಪಟ್ಟವರಲ್ಲ. ಅವರ ಭಾವನೆಗಳನ್ನು ಗೌರವಿಸುವುದರ ಮೂಲಕ ಕ್ಷೇತ್ರದ ಶಾಸಕ ಡಾ.ವೀರಣ್ಣ ಚರಂತಿಮಠ ಪಕ್ಷದ ಜೀವಾಳ ಕಾರ್ಯಕರ್ತರು, ಅವರನ್ನು ಎಂದೂ ಪಕ್ಷ ಕೈ ಬಿಡುವುದಿಲ್ಲ ಎಂಬ ಸಂದೇಶವನ್ನು ತಲುಪಿಸಿದ್ದಾರೆ. ಇದೊಂದು ಬಾಗಲಕೋಟೆಯ ಇತಿಹಾಸದಲ್ಲಿ ಅವಿಸ್ಮರಣೀಯ ಘಟನೆ.
೧೯೫೨ರಿಂದ ಬಾಗಲಕೋಟೆಯಲ್ಲಿ ಸಂಘವನ್ನು ಕಟ್ಟಿಬೆಳೆಸಿದವರು ಜ್ಯೋತಿಪ್ರಕಾಶ ಸಾಳುಂಕೆ, ಗಣಪತರಾವ್ ಕಾಂಬಳೆ, ಪರಪ್ಪ ಅಂಗಡಿ, ವೀರಪ್ಪ ಶೆಟ್ಟರ್,ಕಾಶಿನಾಥ ನಾವಲಗಿ, ಬಸವರಾಜ ಶೆಟ್ಟರ್, ಹುಚ್ಚಪ್ಪ ಕತ್ತಿ, ರಂಗನಾಥ ಶಿಂಧೆ, ಈರಪ್ಪಣ್ಣ ವಡತಿಲ್ಲೆ, ಮೋಹನಸ್ವಾಮಿ ರಘುವೀರ,ಲೀಲಾಧರ ತಿವಾರಿ, ನ್ಯಾಯವಾದಿ ವಿ.ಎಸ್.ಕುಲಕರ್ಣಿ ಆ ಸಂದರ್ಭದಲ್ಲಿ ಜೋರಾಪುರ ಗಿರಣಿಯಲ್ಲಿದ್ದ ಅಂಗಡಿ ಅವರ ಬ್ಯಾಳಿ ಗಿರಣಿ, ಪ್ರಧಾನ ಅಂಚೆ ಕಚೇರಿ ಎದುರಿಗಿನ ಕೃಷ್ಣಾ ಇಲೆಕ್ಟಿçಕಲ್ಸ್, ಜವಳಿ ಸಾಲಿನಲ್ಲಿದ್ದ ಗಣೇಶ ಟ್ರೇಡರ್ಸ್, ಸರಾಫ ಬಜಾರದ ಒಂದು ಓಣಿಯ ಪುಟ್ಟ ಕೊಠಡಿಯಲ್ಲಿ ಸಂಘದ ಕಾರ್ಯಾಲಯವಿತ್ತು. ಹೂ.ವೇ.ಶೇಷಾದ್ರಿ, ಕೃ.ಸೂರ್ಯನಾರಾಯಣರಾವ್, ಸು.ರಾಮಣ್ಣ, ಭಾವುರಾವ್ ದೇಶಪಾಂಡೆ, ಎ.ಕೆ.ಸುಬ್ಬಯ್ಯ, ನ.ಕೃಷ್ಣಪ್ಪ ಅವರಂಥ ಹಿರಿಯರು ಸಂಘ, ಜನಸಂಘ, ವಿಶ್ವ ಹಿಂದು ಪರಿಷದ್, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಂಘಟನೆ ಕೆಲಸಕ್ಕೆ ಬಂದಾಗ ಈ ಕಾರ್ಯಕ್ಷೇತ್ರಗಳೇ ಸದಸ್ಯರ ಸಂಪರ್ಕ ಕೇಂದ್ರಗಳು, ಗಣೇಶ ಟ್ರೇಡರ್ಸ್ನಲ್ಲಿ ಸಂಘಟನೆಯ ಮಾತುಗಳು, ಮಹೇಶ್ವರ ಪಂಚಾಯತ್ ವಾಡಾದಲ್ಲಿ ಕಾರ್ಯಕರ್ತರ ಸಭೆ, ವಲ್ಲಭಭಾಯಿ ಚೌಕಿನಲ್ಲಿ ಸಾರ್ವಜನಿಕ ಸಭೆ, ಸಂಘ ಕಾರ್ಯಾಲಯದಲ್ಲಿ ವಾಸ್ತವ್ಯ. ಇಷ್ಟಕ್ಕೆ ಸೀಮಿತವಾಗಿತ್ತು. ಚುನಾವಣೆ ಬಂತೆAದರೆ ಗೆಲ್ಲುವ ಅದಮ್ಯ ಉತ್ಸಾಹದಲ್ಲಿ ಬಲರಾಮ ಸೈಕಲ್ ಸ್ಟೋರ್‌ನಿಂದ ತಾರಾನಾಥ ಶಿಂತ್ರೆ ಅವರಿಂದ ಬಾಡಿಗೆ ಸೈಕಲ್ ಪಡೆದು ಹಳ್ಳಿ-ಹಳ್ಳಿಗೆ ಸಂಚರಿಸುವುದು, ಸೋತಾಗ ಧೃತಿಗೆಡದ ನಿಲುವು, ಇಂಥ ಸಂದರ್ಭದಲ್ಲಿ ಸಾಥ್ ನೀಡಿದವರು ನಾರಾಯಣಸಾ ಭಾಂಡಗೆ, ಗುಂಡು ಶಿಂಧೆ, ಈರಪ್ಪ ಐಕೂರ, ತುಕಾರಾಂ ಸುಲಾಖೆ, ಮನೋಹರ ಸೂರ್ಯವಂಶಿ, ರಾಮಚಂದ್ರ ಕರಣೆ, ಢಗೆ, ಮಹಿಪತಿ ದೇಸಾಯಿ, ಗಣಪತಿ ದಾನಿ, ಸಂಜೀವ ವಾಡಕರ, ವಾಸು ಪೂಜಾರ, ಶಂಕರ ಮೇಲ್ನಾಡ, ನಾಗರಾಜ ಹದ್ಲಿ, ಅಥಣಿ ಪರಿವಾರ,ಡಾ.ಜಾಲಿಹಾಳ, ರಾಮಣ್ಣ ಬಾರಕೇರ, ಗಿರಿಮಲ್ಲಯ್ಯ ಮಠಪತಿ, ಬಾರ್ಶಿ, ಬರಗಿ ಪರಿವಾರ, ಗಂಗಾಧರ ಮುರನಾಳ ಹೀಗೆ ಪುಟ್ಟ ಕಾರ್ಯಕರ್ತರ ಪಡೆ ಆದರೆ ಅವರ ನಿಷ್ಠೆ ಅಧಿಕಾರಕ್ಕೆ ಬರುವ ಇತರ ಪಕ್ಷದವರನ್ನೂ ಅಸೂಯೆಪಡುವಂತಿತ್ತು.
ಮುಂದೆ ಕಾಲಘಟ್ಟದಲ್ಲಿ ಪಿ.ಎಚ್.ಪೂಜಾರ, ಟಿ.ಎಂ.ಹುAಡೇಕಾರ ಅಂಥವರು ಜತೆಗೂಡಿದರು. ಚಂದ್ರಶೇಖರ ಗಚ್ಚಿನಮಠ ಜೀವಾಳವಾಗಿದ್ದರು, ಪೂಜಾರ, ಮಲ್ಲಿಕಾರ್ಜುನ ಬನ್ನಿ, ರಾಜಶೇಖರ ಶೀಲವಂತ, ಡಾ.ವೀರಣ್ಣ ಚರಂತಿಮಠ ಅವರು ಪಕ್ಷದ ಗೆಲುವಿನ ರೂವಾರಿಗಳಾದರು. ಈ ಸಂದರ್ಭದಲ್ಲೂ ಜತೆಯಾಗಿ ಬಂದವರು ಗುಂಡು ಶಿಂಧೆ, ಈರಪ್ಪ ಐಕೂರ. ಸಂಘ ಪರಿವಾರದ ಕೆಲಸದಲ್ಲಿ ಇವರಿಬ್ಬರ ತ್ಯಾಗ, ನಿಷ್ಠೆ ಪ್ರಶ್ನಾತೀತ, ಬೆಲೆ ಕಟ್ಟಲಾಗದ ಕೆಲಸ. ಕಾಶಿನಾಥ ನಾವಲಗಿ ಅವರ ಪುತ್ರರಾದ ವಿಜಯಕುಮಾರ ನಾವಲಗಿ ಅವರು ಕೆ.ವಿ.ಸುಬ್ಬರಾವ್, ಡಿ.ವಿ.ಆಸ್ವಾಲೆ, ಉಮಾಪತಿ ಶಾಸ್ತಿç ಅವರೊಂದಿಗೆ ವಿದ್ಯಾರ್ಥಿ ಪರಿಷತ್ ಸಂಘಟನೆ ಮಾಡಿದರು. ನಂತರದ ದಿನಗಳಲ್ಲಿ ಅಶೋಕ ಲಿಂಬಾವಳಿ, ಅರವಿಂದ ಲಿಂಬಾವಳಿ, ಜಗದೀಶ ಹಿರೇಮನಿ ಅವರೆಲ್ಲ ರಾಜ್ಯಮಟ್ಟದಲ್ಲಿ ಮಿಂಚಿದರು. ವಿದ್ಯಾರ್ಥಿ ಪರಿಷತ್, ಯುವ ಮೋರ್ಚಾ ಮೂಲಕ ಸಂಘಟನೆಯಲ್ಲಿ ಬಂದವರು ಜಯಂತ ಕುರಂದವಾಡ, ಬಸಲಿಂಗಪ್ಪ ನಾವಲಗಿ. ಅಧಿಕಾರವೇ ಮರಿಚಿಕೆಯಾಗಿದ್ದಾಗ, ಜಾತಿಯೇ ಪ್ರಧಾನವಾಗಿದ್ದಾಗ ಹಿಂದುತ್ವದ ಘೋಷಣೆ ಹಾಕಿದರು. ಅಸ್ಸಾಂ, ಕಾಶ್ಮೀರ ಚಳುವಳಿಯಲ್ಲಿ ಭಾಗವಹಿಸಿದರು. ಪಕ್ಷಕ್ಕೆ ಅಧಿಕಾರ ಸೂತ್ರ ಬಂದಾಗ ಬಾಗಲಕೋಟೆಯಿಂದಲೂ ಕಮಲ ಅರಳಲಿ ಎಂದು ಹೋರಾಟ ಮಾಡಿದವರು. ಸಂಕಷ್ಟ ಬಂದಾಗ ಪಕ್ಷವನ್ನು ಬಿಡಲಿಲ್ಲ. ಪಕ್ಷಕ್ಕೆ ಬೆನ್ನೆಲುಬಾಗಿ ನಿಂತರು. ಅವರಿಗೆ ಸೂಕ್ತಸ್ಥಾನಮಾನ ನೀಡುವುದರ ಮೂಲಕ ಡಾ.ವೀರಣ್ಣ ಚರಂತಿಮಠ ಪಕ್ಷದ ಕಾರ್ಯಕರ್ತರ ಸಮುದಾಯಕ್ಕೆ ಒಳ್ಳೆಯ ಸಂದೇಶ ನೀಡಿದ್ದಾರೆ.
ರಾಜು ನಾಯ್ಕರ ಬಿಜೆಪಿಯ ಮುಂಚೂಣಿಯ ನಾಯಕ. ನಗರ ಅಧ್ಯಕ್ಷ ಸ್ಥಾನದಿಂದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯವರೆಗೆ ಕೆಲಸ ಮಾಡಿದ್ದಾರೆ. ಎಲ್ಲಿಯೂ ಮಿಂಚುವ ಪ್ರಯತ್ನ ಮಾಡಿಲ್ಲ. ಪಕ್ಷದ ಸಿದ್ಧಾಂತವನ್ನೇ ಪ್ರತಿಪಾದಿಸಿದ್ದಾರೆ.ಈಗ ಬುಡಾ ಸದಸ್ಯರಾಗಿದ್ದಾರೆ. ನಾಮಕರಣಗೊಂಡ ಇನ್ನೊಬ್ಬ ವಾಸ್ತು ತಜ್ಞ ಚಂದ್ರಪ್ರಕಾಶ ಚೌಧರಿ ಅವರು ಚಂದ್ರಾ ಕನ್‌ಸ್ಟçಕ್ಶನ್ ರೂವಾರಿ. ಅವರಿಗೂ ಸೂಕ್ತ ಸ್ಥಾನಮಾನ ಸಿಕ್ಕಿದೆ. ರಿಯಲ್ ಎಸ್ಟೇಟ್ ಈಗ ಪ್ರಬಲ ಉದ್ಯಮವಾಗಿ ಬಡವರ ಸೂರು ಕನಸಿನ ಮಾತಾಗಿರುವಾಗ ಪ್ರಾಧಿಕಾರವನ್ನು ಅಸ್ತಿತ್ವಕ್ಕೆ ತಂದಿರುವ ಚರಂತಿಮಠರು ಮಧ್ಯಮ ವರ್ಗಕ್ಕೂ ಸುಲಭವಾಗಿ ನಿವೇಶನ ಸಿಗುವಂತೆ ಮಾಡುವ ಪ್ರಯತ್ನಕ್ಕೆ ಮುನ್ನುಡಿ ಬರೆದಿದ್ದಾರೆ. ಪ್ರಾಧಿಕಾರದ ಆಯುಕ್ತರಾಗಿರುವ ಗಣಪತಿ ಪಾಟೀಲ ಅವರು ಕಾರ್ಯತತ್ಪರತೆ ಕೂಡ ಇದಕ್ಕೆ ಮುಕುಟವಾಗಲಿದೆ.