ತೈಲಬೆಲೆ ಏರಿಕೆಯಿಂದ ಜನಸಾಮಾನ್ಯರು ವಾಹನ ಬಳಸೋದು ಕಷ್ಟ

ತೈಲಬೆಲೆ ಏರಿಕೆಯಿಂದ ಜನಸಾಮಾನ್ಯರು ವಾಹನ ಬಳಸೋದು ಕಷ್ಟ


ಬಾಗಲಕೋಟೆ:ರಾಜ್ಯ ಸರ್ಕಾರದ ತೈಲ ಬೆಲೆ ಏರಿಕೆಯಿಂದಾಗಿ ಜನ ಸಾಮಾನ್ಯರು ವಾಹನಗಳನ್ನು ಬಳಸುವುದು ಸಹ ಕಷ್ಟವಾಗಿದೆ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಅಸಮಾಧಾನ ಹೊರಹಾಕಿದ್ದಾರೆ. 
 ನಗರ ಹೊರವಲಯದ ಸಂಗಮ ಕ್ರಾಸ್ ಬಳಿ ಬಿಜೆಪಿ ನಗರ ಹಾಗೂ ಗ್ರಾಮೀಣ ಮಂಡಲಗಳಿAದ ತೈಲ ಬೆಲೆ ಏರಿಕೆ ವಿರೋಧಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಚುಕ್ಕಾಣಿ ಹಿಡಿದು ಒಂದು ವರ್ಷವಾಗಿದೆ. ಇವರು ಗ್ಯಾರಂಟಿ ಯೋಜನೆಗಳಿಗೆ ಹಣ ಹಾಕಿದ್ದು ಬಿಟ್ಟರೆ ನಯಾಪೈಸೆ ಕಾಮಗಾರಿಯೂ ನಡೆದಿಲ್ಲ. ವಾಲ್ಮೀಕಿ ಅಭಿವೃದ್ಧಿ ನಿಗಮದ ೧೮೭ ಕೋಟಿ ರೂ.ಗಳನ್ನು ಇವರು ತೆಲಂಗಾಣ ಚುನಾವಣೆಗೆ ಬಳಸಿಕೊಂಡು ಆ ಸಮುದಾಯಕ್ಕೆ ಅನ್ಯಾಯ ಎಸೆಗಿದ್ದಾರೆ ಎಂದು ದೂರಿದರು. ಸಂಗಮ ಕ್ರಾಸ್‌ನಲ್ಲಿ ಮಾನವ ಸರ್ಪಳಿ ನಿರ್ಮಿಸಿ ರಸ್ತೆ ತಡೆಯನ್ನೂ ಮಾಡಲಾಯಿತು. 
            ಬೆಳಗಾವಿ ವಿಭಾಗ ಸಹ ಪ್ರಭಾರಿ ಬಸವರಾಜ ಯಂಕAಚಿ ಹಾಗೂ ಶಿವಾನಂದ ಟವಳಿ ಮಾತನಾಡಿದರು. ಪ್ರತಿಭಟನೆಯಲ್ಲಿ ಬಿಟಿಡಿಎ ಮಾಜಿ ಸಭಾಪತಿಗಳಾದ ಜಿ.ಎನ್.ಪಾಟೀಲ, ಶಿವಾನಂದ ಕೋಟಿ,  ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಲಕ್ಷಿö್ಮÃನಾರಾಯಣ ಕಾಸಟ್, ಜಿಲ್ಲಾ ಪ್ರಧಾಣ ಕಾರ್ಯದರ್ಶಿ ರಾಜು ನಾಯ್ಕರ, ರಾಜಶೇಖರ ಮುದೇನೂರ, ಗ್ರಾಮೀಣ ಮಂಡಲ ಅಧ್ಯಕ್ಷ ಸುರೇಶ ಕೊಣ್ಣೂರ, ಮಲ್ಲೇಶ ವಿಜಾಪುರ, ಕಲ್ಲಪ್ಪ ಭಗವತಿ, ಬಸವರಾಜ ಹುನಗುಂದ, ಮುತ್ತು ಸೀಮಿಕೇರಿ,ಉಮೇಶ ಜುಮನಾಳ, ರಂಗನಗೌಡ ಗೌಡರ, ಮುತ್ತಣ್ಣ ಕೋಲಾರ, ಮಲ್ಲಯ್ಯ ಹಿರೇಮಠ, ಸೋಮಸಿಂಗ್ ಲಮಾಣಿ, ಸಂಗಪ್ಪ ಗಾಣಿಗೇರ, ಮಂಜುನಾಥ ಗೌಡರ, ಹುಚ್ಚೇಶ ನಿಲುಗಲ್ಲ, ಕವಿ ಬೇನಕಟ್ಟಿ, ಕರಿಯಪ್ಪ ಕಟ್ಟಿಮನಿ, ಸಿದ್ದು ಲೋಕಾಪುರ, ವಾಸು ಜಾಧವ ಸೇರಿದಂತೆ ಇತರರು ಇದ್ದರು.