ಲಂಚ ಪಡೆದ ಅಧಿಕಾರಿಗೆ ಜೈಲೇಗತಿ..!

ಲಂಚ ಪಡೆದ ಅಧಿಕಾರಿಗೆ ಜೈಲೇಗತಿ..!
ಬಾಗಲಕೋಟೆ : ಲಂಚಕ್ಕೆ ಬೇಡಿಕೆ ಇಟ್ಟು ಲೋಕಾಯುಕ್ತರ ಬಲೆಗೆ ಸಿಕ್ಕಬಿದ್ದ ಬಾಗಲಕೋಟೆ ತಹಶೀಲ್ದಾರ ಕಚೇರಿಯ ಪ್ರಥಮ ದರ್ಜೆ ಸಹಾಯಕ ವಿನೋದ ಕೃಷ್ಣಪ್ಪ ಪತ್ತಾರ ಎಂಬ ಆರೋಪಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಶಿಕ್ಷೆ ಮತ್ತು ದಂಡ ವಿಧಿಸಿ ಆದೇಶಿಸಿದೆ.
ಆರೋಪಿ ೫೦ ಸಾವಿರ ರೂ.ಗಳ ಬೇಡಿಕೆ ಇಟ್ಟ ಬಗ್ಗೆ ಎಸಿಬಿ ಠಾಣೆಗೆ ರವಿ ಯಶವಂತ ಶಿಂಧೆ ದೂರು ನೀಡಿದ್ದರು. ದಾಳಿ ವೇಳೆಯಲ್ಲಿ ೨೫ ಸಾವಿರ ರೂ.ಗಳ ಲಂಚ ಪಡೆಯುವ ವೇಳೆ ಸಿಕ್ಕಿದ್ದು, ಈ ಬಗ್ಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ವಿಚಾರಣೆ ನಡೆಸಿದ ಆಪಾದಿತನಿಗೆ ಕಲಂ ೭ ಪಿಸಿ ಕಾಯ್ದೆ ೧೯೮೮ರಲ್ಲಿ ೩ ವರ್ಷ ಸಾಧಾ ಶಿಕ್ಷೆ ಮತ್ತು ೫ ಸಾವಿರ ದಂಡ ಹಾಗೂ ಕಲಂ ೧೩(೧)ಲ ಸಹ ಕಲಂ ೧೩(೨) ಪಿಸಿ ಕಾಯ್ದೆ ೧೯೮೮ ರಲ್ಲಿ ೪ ವರ್ಷ ಕಠಿಣ ಶಿಕ್ಷೆ ಹಾಗೂ ೧೦ ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದೆ. 
ಪ್ರಕರಣವನ್ನು ಬಾಗಲಕೋಟೆ ಎಸಿಬಿಯ ಪೋಲಿಸ್ ಇನ್ಸಪೆಕ್ಟರ ಆರ್.ಎಚ್.ಹಳ್ಳೂರ ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ವಿಶೇಷ ಸರಕಾರಿ ಅಭಿಯೋಜಕ ಕೆ.ಟಿ.ಅಬ್ಬಿಗೇರಿ ಪ್ರಕರಣದಲ್ಲಿ ವಾದ ಮಂಡಿಸಿದ್ದರು.