ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಶವವಾಗಿ ಪತ್ತೆ..!

ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಶವವಾಗಿ ಪತ್ತೆ..!


ಬಾಗಲಕೋಟೆ: ನಗರ ಹೊರವಲಯದ ಶೀಗಿಕೇರಿ ಕ್ರಾಸ್‌ನ ರೈಲ್ವೇ ಬ್ರಿಡ್ಜ್ಬಳಿ ಅನುಮಾನಾಸ್ಪದ ಸ್ಥಿತಿಯಲ್ಲಿ ಫಿಜಿಯೋಥೆರಪಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯ ಶವ ಪತ್ತೆಯಾಗಿದೆ. 


 ಇಳಕಲ್ ಮೂಲದ ಸುಮನ್ ಮನೋಹರ್ ಪತ್ತಾರ(೨೨) ಮೃತಪಟ್ಟ ದುರ್ದೈವಿ. ನಗರದ ಮೆಡಿಕಲ್ ಕಾಲೇಜಿನಲ್ಲಿ ಫಿಜಿಯೋಥೆರಪಿಸ್ಟ್ ೩ನೇ ವರ್ಷದ ವ್ಯಾಸಂಗ ಮಾಡುತ್ತಿದ್ದ ಸುಮನ್ ಸೆ.೧೪ರಂದು ಬೆಳಗ್ಗೆ ಹಾಸ್ಟೇಲ್‌ನಿಂದ ಪಾರ್ಸಲ್ ತೆರಳುವುದಾಗಿ ವಾರ್ಡನ್‌ಗೆ ಹೇಳಿ ತೆರಳಿದ್ದಳು. ಆಕೆ ವಾಪಸ್ ಬಾರದಿದ್ದಾಗ ಅದೇ ದಿನ ಸಂಜೆ ಆಕೆಯ ತಂದೆ ಮನೋಹರ ಅವರು ನವನಗರದ ಮಹಿಳಾ ಪೊಲೀಸ್ ಠಾಣೆ ಪ್ರಕರಣ ದಾಖಲಿಸಿದ್ದರು. ಸೆ.೧೬ರ ಶನಿವಾರ ಮಧ್ಯಾಹ್ನ ಆಕೆ ಶವವಾಗಿ ಪತ್ತೆಯಾಗಿತ್ತು. ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
  ಪ್ರಕರಣ ಕುರಿತು ಪ್ರತಿಕ್ರಿಯಿಸಿರುವ ಎಸ್‌ಪಿ ವೈ.ಅಮರನಾಥ ರೆಡ್ಡಿ ಅವರು, ಸೆ.೧೪ರಂದು ಸಂಜೆ ಅವರ ತಂದೆ ದೂರು ದಾಖಲಿಸಿದ್ದರು. ಪ್ರಕರಣ ಸಂಬAಧ ಪೋಷಕರಿಂದ ಮಾಹಿತಿ ಪಡೆದು ತನಿಖೆ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.