ನಾವು ಹಿಂದೂಗಳಲ್ಲ, ವೈದಿಕ ಪರಂಪರೆಯ ಭಾಗವಲ್ಲ

ನಾವು ಹಿಂದೂಗಳಲ್ಲ, ವೈದಿಕ ಪರಂಪರೆಯ ಭಾಗವಲ್ಲ

ಬಾಗಲಕೋಟೆ:ನಾವು ಹಿಂದೂಗಳಲ್ಲ, ವೈದಿಕ ಪರಂಪರೆಯ ಭಾಗವಲ್ಲ. ಸ್ವತಂತ್ರ ಲಿಂಗಾಯತ ಧರ್ಮ ಸ್ಥಾಪನೆಯೇ ನಮ್ಮ ಅಂತಿಮ ಗುರಿ ಎಂದು ಸ್ವಾಭಿಮಾನಿ ಶರಣ ಮೇಳದ ರೂವಾರಿ  ಡಾ.ಚನ್ನಬಸವಾನಂದ ಸ್ವಾಮೀಜಿ ಹೇಳಿದ್ದಾರೆ.

ಕೂಡಲ ಸಂಗಮ ಕ್ರಾಸ್ ನಲ್ಲಿ ಜ.೧೩ ಮತ್ತು ಜ.೧೪ರಂದ ಹಮ್ಮಿಕೊಂಡಿರುವ ಸ್ವಾಭಿಮಾನಿ ಶರಣ ಮೇಳದ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಬಸವಧರ್ಮ ಪೀಠದಲ್ಲಿ ಬಿರುಕು ಉಂಟಾಗಿದೆ ಹೈಕೋರ್ಟ್ ನಲ್ಲಿ ನಮ್ಮನ್ನು ತೆಗೆದು ಹಾಕಲು ಅವಕಾಶವಿಲ್ಲ ಎಂದು ನಮ್ಮ ಪರವಾಗಿ ತೀರ್ಪು ಬಂದಿದೆ. ವಿಚಾರ ಈಗ ಸುಪ್ರೀಂ ಕೋರ್ಟ್ ನಲ್ಲಿ ಬಾಕಿ ಇದೆ ಎಂದರು.

ಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿ ಅವರಿಂದ ನ್ಯಾಯ ದೊರಕುವುದಿಲ್ಲ. ಅವರು ಲಿಂಗಾಯತ ಸ್ವತಂತ್ರ ಧರ್ಮ ವಿರೋಧಿಸಿದವರೊಂದಿಗೆ ರಾಜಿಯಾಗಿದ್ದಾರೆ ಎಂದು ಬಸವ ಧರ್ಮಪೀಠದ ಅಧ್ಯಕ್ಷೆ ಮಾತೆ ಗಂಗಾದೇವಿ ವಿರುದ್ಧ ಆರೋಪ ಮಾಡಿದರು.

೨೦೧೮ರಲ್ಲಿ ಸ್ವತಂತ್ರ ಲಿಂಗಾಯತ ಧರ್ಮಕ್ಕೆ ಸಿಎಂ ಸಿದ್ದರಾಮಯ್ಯ ಶಿಫಾರಸ್ಸು ಮಾಡಿದ್ದರು ಆದರೆ ಕೇಂದ್ರ ಸರ್ಕಾರ ಅದನ್ನು ಒಪ್ಪಿಲ್ಲ ಹೀಗಾಗಿ ಮರು ಪ್ರಸ್ತಾವನೆ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ತರಲು ರಾಜ್ಯಾದ್ಯಂತ ಜನಜಾಗೃತಿ ಅಭಿಯಾನ ಕೈಗೊಳ್ಳಲಾಗುತ್ತದೆ ಎಂದರು.

ಎರಡು ದಿನಗಳ ಸ್ವಾಭಿಮಾನಿ ಶರಣ ಮೇಳದಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸಲಿದ್ದಾರೆ.

ಶ್ರೀಪ್ರಭುಲಿಂಗ ಸ್ವಾಮೀಜಿ, ಶ್ರೀಮಾತಾ ಸತ್ಯಾದೇವಿ, ಶ್ರೀ ಅಕ್ಕನಾಗಲಾಂಬಿಕಾ ಮಾತಾಜಿ ಮತ್ತಿತರರು ಇದ್ದರು