ಬಾಲಕರ ಪಥಸಂಚಲನಕ್ಕೆ ವಿದ್ಯಾಗಿರಿ ಅಣಿ
ಬಾಗಲಕೋಟೆಯ ವಿದ್ಯಾಗಿರಿಯಲ್ಲಿ ರವಿವಾರ ನಡೆಯಲಿರುವ ಬಾಲಕರ ವಿಶೇಷ ಪಥಸಂಚಲನ ಪ್ರಯುಕ್ತ ಬೀದಿಗಳನ್ನು ಶೃಂಗರಿಸಲಾಗಿದೆ.
ಬಾಗಲಕೋಟೆ:
ರವಿವಾರ ನಗರದ ವಿದ್ಯಾಗಿರಿಯಲ್ಲಿ ನಡೆಯಲಿರುವ Rss ಬಾಲಕರ ಪಥಸಂಚಲನಕ್ಕೆ ವಿದ್ಯಾಗರಿ ಅಣಿಯಾಗಿದೆ.
ಮಧ್ಯಾಹ್ನ ೪ಗಂಟೆ ಅಥಣಿ ಕಲ್ಯಾಣ ಮಂಟಪದಿಂದ ಘೋಷ ಪಥಸಂಚಲನ ಹೊರಡಲಿದ್ದು, ವಿದ್ಯಾಗಿರಿಯ ವಿವಿಧ ಕ್ರಾಸ್ ಗಳಲ್ಲಿ ಸಂಚರಿಸಿ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ಸಮಾವೇಶಗೊಳ್ಳಲಿದೆ.
ಪಥಸಂಚಲನ ಸ್ವಾಗತಿಸಲು ವಿದ್ಯಾಗಿರಿ ರಸ್ತೆಗಳು ಸಂಪೂರ್ಣ ಕೇಸರಿಮಯಗೊಂಡಿದ್ದು, ಪಥಸಂಚಲನ ಸ್ವಾಗತಿಸಲು ಜನ ತಳಿರು ತೋರಣಗಳನ್ನು ಕಟ್ಟಿದ್ದಾರೆ.
ಒಟ್ಟಾರೆ ವಿದ್ಯಾಗಿರಿಯಲ್ಲಿ ರವಿವಾರ ಹಬ್ಬದ ವಾತಾವರಣ ಮೇಳೈಸಲಿದ್ದು, ಬಾಲಕರು ಸಹ ಪಥಸಂಚಲನದಲ್ಲಿ ಹೆಜ್ಜೆ ಹಾಕಲು ಸಜ್ಜಾಗಿದ್ದಾರೆ