ಬಿಜೆಪಿಯಿಂದ ರಾಗಾ ಅವಹೇಳನೆ: ನಾಳೆ ಕೋಟೆಯಲ್ಲಿ ಕಾಂಗ್ರೆಸ್ ಪ್ರತಿಭಟನೆ

ಬಿಜೆಪಿಯಿಂದ ರಾಗಾ ಅವಹೇಳನೆ: ನಾಳೆ ಕೋಟೆಯಲ್ಲಿ ಕಾಂಗ್ರೆಸ್ ಪ್ರತಿಭಟನೆ
ಬಾಗಲಕೋಟೆ:ಬಿಜೆಪಿ ನಾಯಕರು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಕುರಿತಾಗಿ ಹಗುರವಾಗಿ ಮಾತನಾಡುತ್ತಿರುವುದನ್ನು ಖಂಡಿಸಿ ಸೆ.೨೪ರಂದು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ತಿಳಿಸಿದರು. 

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಾಯಿಬಿಟ್ಟರೆ ಸಂಸ್ಕೃತಿ, ಸಂಸ್ಕಾರದ ಬಗ್ಗೆ ಮಾತನಾಡುವ ಬಿಜೆಪಿ ಅವರು ತಾವೇ ಅವುಗಳನ್ನು ಬಿಟ್ಟು ವರ್ತಿಸುತ್ತಿದ್ದಾರೆ. ದೇಶಕ್ಕಾಗಿ ಅಜ್ಜಿ, ತಂದೆಯನ್ನು ಕಳೆದುಕೊಂಡ ರಾಹುಲ್ ಗಾಂಧಿಯAಥ ನಾಯಕರ ಬಗ್ಗೆ ಅನವಶ್ಯಕ ಟೀಕೆಗಳನ್ನು ಮಾಲಡಾಗುತ್ತಿದೆ. ನೈತಿಕತೆ ಕಳೆದುಕೊಂಡಿರುವ ಬಿಜೆಪಿ ಶಾಸಕರು ಆರೋಗ್ಯಕರ ಹೇಳಿಕೆ ನೀಡುತ್ತಿಲ್ಲ. ಅವರ ಕೀಳು ಮಾತುಗಳು ಬಿಜೆಪಿಯ ಸಂಸ್ಕೃತಿಯನ್ನು ತೋರುತ್ತಿದೆ ಎಂದರು. 
ಶಾಸಕ ಯತ್ನಾಳ ಕಾಂಗ್ರೆಸ್ ಶಾಸಕರ ಬಗ್ಗೆ ಕೀಳಾದ ಹೇಳಿಕೆ ನೀಡುತ್ತಿದ್ದಾರೆ. ದೇಶದೆಲ್ಲೆಡೆ ಬಿಜೆಪಿ ಮುಖಂಡರು ಇಂತಹದ್ದೇ ಹೇಳಿಕೆ ನೀಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 
ಶಾಸಕ ಜೆ.ಟಿ.ಪಾಟೀಲ  ಅವರು ಮಾತನಾಡಿ ಬಿಜೆಪಿ ನಾಯಕರು ರಾಹುಲ್ ಗಾಂಧಿಯವರ ಹೇಳಿಕೆಗಳನ್ನು ಅರ್ಥ ಮಾಡಿಕೊಂಡು ಮಾತನಾಡಲಿ. ವಿರೋಧ ವ್ಯಕ್ತಪಡಿಸುವುದಕ್ಕಾಗಿ ಇಲ್ಲ ಸಲ್ಲದ ಮಾತುಗಳನ್ನಾಡುವುದು ಸರಿಯಲ್ಲ. ಟೀಕೆಗಳು ರಚನಾತ್ಮಕವಾಗಿರಲಿ ಎಂದರು. 
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಬಿಜೆಪಿಯವರ ಪ್ರವೃತ್ತಿ ವಿರೋಧಿಸಿ ನಗರದ ಬಸವೇಶ್ವರ ವೃತ್ತದಲ್ಲಿ ಮಂಗಳವಾರ ಬೆಳಗ್ಗೆ ೧೧ಕ್ಕೆ ಪ್ರತಿಭಟನೆ ನಡೆಯಲಿದೆ. ಸಚಿವರು, ಶಾಸಕರು, ಪಕ್ಷದ ಮುಖಂಡರು ಭಾಗವಹಿಸಲಿದ್ದಾರೆ. ರಾಹುಲ್ ಗಾಂಧಿ ಅವರು ಯಾವ ವಿಷಯ ಪ್ರಸ್ತಾಪಿಸಿದರೂ ಬಿಜೆಪಿಯವರು ಅದನ್ನು ತಪ್ಪಾಗಿ ಅರ್ಥೈಸಿ ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ.  ಇಂತಹ ಹೇಳಿಕೆಗಳು ಜನರ ಅಸಮಾಧಾನಕ್ಕೆ ಕಾರಣವಾಗುತ್ತವೆ. ಬಿಜೆಪಿಯವರು ಅನವಶ್ಯಕ ಟೀಕೆ ನಿಲ್ಲಿಸದಿದ್ದರೆ ತಾಲೂಕು ಕೇಂದ್ರಗಳಲ್ಲೂ ಹೋರಾಟ ನಡೆಸಬೇಕಾಗುತ್ತದೆ ಎಂದರು. 
ಶಾಸಕ ಎಚ್.ವೈö.ಮೇಟಿ ಇದ್ದರು.