ಬಾಗಲಕೋಟೆ: ದಲಿತರಿಗೆ ಮೀಸಲಿಟ್ಟ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಸುರಿದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊರಗೆ ಬಸಪ್ಪ, ಒಳಗೆ ವಿಷಪ್ಪ ಎಂದು ವಿಧಾನ ಪರಿಷತ್ತಿನ ಸದಸ್ಯ ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದ್ದಾರೆ.
ಭೀಮ ಶಕ್ತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮುನ್ನ ನವನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ತೆರಿಗೆ ವಿಚಾರದಲ್ಲಿ ಕೇಂದ್ರದಿAದ ಬರಬೇಕಿರುವುದು ಎಲ್ಲವೂ ಬಂದಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಉತ್ತರಿಸಿದಲ್ಲದೇ ಏನಾದರೂ ಬರಬೇಕಿದ್ದರೆ ವಾಸ್ತವಿಕ ವರದಿ ನೀಡುವಂತೆ ಸೂಚಿಸಿದ್ದಾರೆ. ಅದನ್ನು ಬಿಟ್ಟು ಕಾಂಗ್ರೆಸ್ ರಾಜಕೀಯ ಟೀಕೆ ಮಾಡುತ್ತ ಕುಳಿತರೆ ಎಲ್ಲಿಂದ ದುಡ್ಡು ಬರುತ್ತದೆ ಎಂದು ಪ್ರಶ್ನಸಿದರು.
ದೇಶದಲ್ಲಿ ಧೂಳಿಪಟವಾಗಿರುವ ಕಾಂಗ್ರೆಸ್ ದಕ್ಷಿಣ ಭಾರತದ ಎರಡು ರಾಜ್ಯಗಳಲ್ಲಷ್ಟೇ ಆಡಳಿತದಲ್ಲಿದೆ. ದಕ್ಷಿಣ ಭಾರತವನ್ನು ಇಬ್ಭಾಗ ಮಾಡಿದರೆ ಇಲ್ಲಿಯಾದರೂ ಆಡಳಿತ ಪಡೆಯಬಹುದು ಎಂದು ದುರಾಲೋಚನೆ ಕಾಂಗ್ರೆಸ್ಸಿಗರಲ್ಲಿದ್ದು, ಅದನ್ನು ಸಂಸದ ಡಿ.ಕೆ.ಸುರೇಶ ಮೂಲಕ ಹೇಳಿಸಿದೆ ಎಂದು ವಾಗ್ದಾಳಿ ನಡೆಸಿದರು.
ತೆರಿಗೆ ವಿಚಾರದಲ್ಲಿ ಅನ್ಯಾಯವಾಗಿದ್ದರೆ ಕನ್ನಡಿಗರಾಗಿ ನಾವು ಕೇಳೋಣ ಆದರೆ ರಾಜ್ಯ ಸರ್ಕಾರದಿಂದ ಸರ್ಕಾದ ದುಡ್ಡಿನಲ್ಲಿ ಹೋರಾಟ ಹಮ್ಮಿಕೊಂಡು ದಕ್ಷಿಣ ಭಾರತಕ್ಕೆ ಅನ್ಯಾಯ ಎನ್ನುತ್ತಿರುವುದರ ಹಿಂದೆ ಯಾವ ದುರುದ್ದೇಶ ಅಡಗಿದೆ ಎಂಬುದು ಬಹಿರಂಗವಾಗಬೇಕೆAದು ಹೇಳಿದರು. ರಾಜ್ಯ ಸರ್ಕಾರವೊಂದು ಸರ್ಕಾರದ ದುಡ್ಡಿನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸಿದ್ದು ಇದೇ ಮೊದಲು ಎಂದು ಹೇಳಿದರು.
ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಈಗಿನ ಸರ್ಕಾರದ ವಿರುದ್ಧವೂ ೪೦% ಎಂದು ದೂರಿರುವುದಕ್ಕೆ ಉತ್ತರಿಸಿದ ಅವರು, ಆಗ ಕೆಂಪಣ್ಣ ಅವರ ಕಡೆಯಿಂದ ಒತ್ತಾಯಪೂರ್ವಕವಾಗಿ ಹೇಳಿಸಲಾಗಿತ್ತು. ಈಗ ಕೆಂಪಣ್ಣ ನಿಜ ಹೇಳಿದ್ದಾರೆ ಅಧಿಕಾರಿಗಳಿಗೆ ಶೇ.೪೦ ಕಮಿಷನ್ ಹಾಗೂ ಜನಪ್ರತಿನಿಧಿಗಳಿಗೆ ಸೇರಿ ಶೇ.೬೦ ಕಮಿಷನ್ ಎಂದು ದೂರಿದ್ದಾರೆ. ಆಗ ಲುಂಗಿ ಎತ್ತಿ ಗೋಡೆ ಮೇಲೆ ಬರೆಯುತ್ತಿದ್ದ ಸಿದ್ದರಾಮಯ್ಯ ಈಗಲೂ ಬರೆಯಲಿ ಎಂದು ದೂರಿದರು.
ಮಾಜಿ ಸಚಿವ ಎನ್.ಮಹೇಶ ಅವರು ಮಾತನಾಡಿ, ಭಾರತ ವಿಭಜನೆಯ ಮಾತುಗಳನ್ನು ಕಾಂಗ್ರೆಸ್ಸಿಗರು ಆಡುತ್ತಿದ್ದು, ತಮ್ಮ ಚಿಂತನೆಯನ್ನು ಬಿಟ್ಟು ಎಡಪಂಥೀಯರAತೆ ಮಾತನಾಡುತ್ತಿದ್ದಾರೆ. ಕೇಂದ್ರ ಸರ್ಕಾರ ೧೦ ವರ್ಷದಲ್ಲಿ ಕರ್ನಾಟಕಕ್ಕೆ ಪ್ರತಿವರ್ಷ ತಲಾ ೨೦ ಸಾವಿರ ಕೋಟಿ ರೂ.ಗಳಂತೆ ಅನುದಾನ ನೀಡಿದೆ. ತೆರಿಗೆ ವಿಚಾರ, ಇತರ ಅಭಿವೃದ್ಧಿಯ ಮೊತ್ತ ಇನ್ನೂ ಹೆಚ್ಚಾಗುತ್ತದೆ. ಕಾಂಗ್ರೆಸ್ ರಾಜಕೀಯಕ್ಕಾಗಿ ದೂರುತ್ತಿದೆ ಎಂದರು.
ಡಾ. ಕ್ರಾಂತಿ ಕಿರಣ, ಎಸ್‌ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಕೌತಾಳ, ಪಕ್ಷದ ಬೆಳಗಾವಿ ವಿಭಾಗ ಸಹಪ್ರಭಾರಿ ಬಸವರಾಜ ಯಂಕAಚಿ ಮತ್ತಿತರರು ಇದ್ದರು.