ಬಾದಾಮಿ ದೇವಸ್ಥಾನ ಉಳುವಿಗೆ ಹೋರಾಡುತ್ತಿರುವವರ ಮೇಲೆ ಕೇಸ..!

ಬಾದಾಮಿಯಲ್ಲಿ ದೇವಸ್ಥಾನ ಹಾಗೂ ಹಿಂದೂ ರುದ್ರಭೂಮಿ ಕುರಿತಾಗಿ ಉಂಟಾಗಿರುವ ವಿವಾದಗಳು ರಾಜಕೀಯ ಚರ್ಚೆಗೆ ಕಾರಣವಾಗಿವೆ. ಈ ಬಗ್ಗೆ ಕಾಂಗ್ರೆಸ್ ಮುಖಂಡರೊಬ್ಬರು ನೀಡಿದ್ದಾರೆನ್ನಲಾದ ಎಚ್ಚರಿಕೆಯ ವಿಡಿಯೋ ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ.

ಬಾದಾಮಿ ದೇವಸ್ಥಾನ ಉಳುವಿಗೆ ಹೋರಾಡುತ್ತಿರುವವರ ಮೇಲೆ ಕೇಸ..!

ನಾಡನುಡಿ ನ್ಯೂಸ್

ಬಾಗಲಕೋಟೆ:

ಬಾದಾಮಿಯಲ್ಲಿ ದೇವಸ್ಥಾನದ ಉಳುವಿಗಾಗಿ ಹೋರಾಡುತ್ತಿರುವ ಹಿಂದೂಪರ ಸಂಘಟನೆಗಳ ಕಾರ್ಯಕರ್ತರಿಗೆ ಕಾಂಗ್ರೆಸ್ ಮುಖಂಡರು ತೊಂದರೆ ನೀಡಲಿದ್ದಾರೆ ಎಂದು ಅದೇ ಪಕ್ಷದ ಮುಖಂಡರು ಹೇಳಿದ್ದಾರೆ ಎನ್ನಲಾದ ವಿಡಿಯೋವೊಂದು ಸಾಮಾಜಿಕ‌ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. 

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಮಹಾಂತೇಶ ಹಟ್ಟಿ ಅವರು ಈ ಕುರಿತು ದೇವಸ್ಥಾನಗಳ ಉಳುವಿಗೆ ಹೋರಾಡುತ್ತಿರುವ ಮಹಾಂತೇಶ ವಡ್ಡರ ಅವರ ಮುಂದೆ ಈ ವಿಚಾರ ಬಹಿರಂಗಪಡಿಸಿದ್ದಾರೆ ಎನ್ನಲಾಗಿದ್ದು, ಹಷಾರಾಗಿರುವಂತೆ ಹಿತೈಷಿ ಆಗಿ ಎಚ್ಚರಿಕೆ ನೀಡಿದ್ದಾರೆ ಎಂದು ಹೇಳಿಕೊಂಡು ವಿಡಿಯೋವನ್ನು ಮಹಾಂತೇಶ ವಡ್ಡರ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಬಾದಾಮಿಯಲ್ಲಿ ಅಲ್ಪಸಂಖ್ಯಾತ ಹಾಸ್ಟೇಲ್ ನಿರ್ಮಾಣಕ್ಕಾಗಿ ದೇವಸ್ಥಾನಗಳ‌ ತೆರವಿಗೆ ‌ನಿರ್ಧರಿಸಲಾಗಿದ್ದು, ಇದಕ್ಕೆ ಶ್ರೀರಾಮ ಸೇನೆ ಸೇರಿ ಹಿಂದೂಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಅದರ ಬೆನ್ನಲ್ಲೇ ಮಹಾಂತೇಶ ವಡ್ಡರ ಮಾಡಿರುವ ಈ ಪೋಸ್ಟ್ ಚರ್ಚೆಗೆ ಕಾರಣವಾಗಿದೆ.

ಗುಳೇದಗುಡ್ಡ ಭಾಗದ ಕಾಂಗ್ರೆಸ್ ಮುಖಂಡರಿಂದ ತೊಂದರೆ ಇದೆ. ಪೊಲೀಸ್ ಇಲಾಖೆ ಸಹ ಬೆನ್ನು ಬಿದ್ದಿದ್ದು, ಪೊಲೀಸರು ಎಫ್ ಐಆರ್ ಕೂಡ ದಾಖಲಿಸಿವರು ಈ ಬಗ್ಗೆ ಹುಷಾರಾಗಿರುವಂತೆ ಮಹಾಂತೇಶ ಹಟ್ಟಿ ಉಪದೇಶ ಮಾಡಿದ್ದಾರೆ ಎಂದು ವಡ್ಡರ ಫೇಸ್ಬುಕ್ ನಲ್ಲಿ ಬರೆದುಕೊಂಡಿದ್ದಾರೆ.