ಮಗು ಕೈಯಲ್ಲಿದ್ದ ಮೊಬೈಲ್ ಎಗರಿಸಿ ಪಂಗನಾಮ ಹಾಕಿದ ಐನಾತಿ ಕಳ್ಳಿಯರು

ನಾಡನುಡಿ ನ್ಯೂಸ್
ಬಾಗಲಕೋಟೆ:
ಬಾಗಲಕೋಟೆ ಜಾಗೃತ ದೇವಾಲಯ ಎಂದು ಹೆಸರು ವಾಸಿಯಾಗಿರುವ ತುಳಸಿಗೇರಿ ಆಂಜನೇಯ ದೇವಸ್ಥಾನದಲ್ಲಿ,ಬೇರೆಯವರ ಮೊಬೈಲ್ ನಮ್ಮದು ಎಂದು ಇಬ್ಬರು ಯುವತಿಯರು ಕಸಿದುಕೊಂಡು ಹೋಗಿರುವ ಘಟನೆ ನಡೆದಿದೆ.

ಕಳೆದ ರಾತ್ರಿ ಶನಿವಾರ ಹುಣ್ಣಿಮೆ ನಿಮಿತ್ಯ ಪಕ್ಕದ ದೇವನಾಳ ಗ್ರಾಮ ಗಿರೀಶ ಪೂಜಾರ ಎಂಬುವವರು ದಂಪತಿ ಸಮೇತ ದೇವಸ್ಥಾನಕ್ಕೆ ಆಗಮಿಸಿದ್ದಾರೆ.ಈ ಸಂದರ್ಭದಲ್ಲಿ ಅವರ ಮಗನ ಕೈಯಲ್ಲಿ ಕೊಟ್ಟು ಹೋಗಿದ್ದಾರೆ.ಆಗ ಆಕಸ್ಮಿಕ ವಾಗಿ ಅದೇ ಜಾಗದಲ್ಲಿ ಮೆರೆತು ಹೋಗಿದ್ದಾರೆ.ಇನ್ನೊಬ್ಬ ಬೇರೆ ಹುಡುಗ ಸ್ಥಳದಲ್ಲಿ ಇದ್ದ ಮೊಬೈಲ್ ತೆಗೆದುಕೊಂಡಾಗ,ಆಗ ಯುವತಿ ಇಬ್ಬರು ನಮ್ಮದು ಎಂದು ಸುಳ್ಳು ಹೇಳಿ ಕಸಿದುಕೊಂಡು ಹೋಗಿದ್ದಾರೆ. ಈ ಬಗ್ಗೆ ದೇವಸ್ಥಾನ ದ ಸಿಸಿಟಿವಿ ಹ್ಯಾಮರ್ ದಲ್ಲಿ ಬೆಳಕಿಗೆ ಬಂದಿದೆ.ಯುವತಿಯರೇ ಕಳ್ಳತನಕ್ಕೆ ಯತ್ನ ಮಾಡಿರುವುದು ಚರ್ಚೆಯ ಸಂಗತಿಯಾಗಿದೆ.

ವಿವೋ ಕಂಪನಿಯ 20 ಸಾವಿರ ರೂಪಾಯಿ ಮೌಲ್ಯದ ಮೊಬೈಲ್ ಕಳವು ಮಾಡಿರುವುದು ಬೆಳಕಿಗೆ ಬಂದಿದೆ.ಕಲಾದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದರೂ,ಇನ್ನು ಯುವತಿಯರ ಮೇಲೆ ದೂರು ದಾಖಲಾಗಿಲ್ಲ.ಮೊಬೈಲ್ ಕಳೆದುಕೊಂಡ ವ್ಯಕ್ತಿಯು ಸಿಸಿಟಿವಿ ಕ್ಯಾಮರ್ ದಲ್ಲಿ ಪರಿಶೀಲನೆ ನಡೆಸಿದಾಗ ಯುವತಿಯರೇ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ..