ಜಿಲ್ಲೆಯಲ್ಲಿಂದು ಕೋವಿಡ್ ಲಸಿಕೆ ಡ್ರೈ ರನ್..!

ಜಿಲ್ಲೆಯ ೭ ಕಡೆಗಳಲ್ಲಿ ಇಂದು ಡ್ರೈ ರನ್ ನಡೆಯಲಿದೆ.ಎಲ್ಲಿ, ಏನು ಎಂಬುದರ ಮಾಹಿತಿ ಇಲ್ಲಿದೆ.

ಜಿಲ್ಲೆಯಲ್ಲಿಂದು ಕೋವಿಡ್ ಲಸಿಕೆ ಡ್ರೈ ರನ್..!

ನಾಡನುಡಿ ನ್ಯೂಸ್ 
ಬಾಗಲಕೋಟೆ ಜ.೮:
ರಜ್ಯದ ಹಲವೆಡೆ ಈಗಾಗಲೇ ಕೋವಿಡ್ ಲಸಿಕೆಯ ಡ್ರೈರನ್ ಪೂರ್ಣಗೊಂಡಿದ್ದು, ಇಂದು ಬಾಗಲಕೋಟೆ ಜಿಲ್ಲೆಯ ೭ ಕಡೆಗಳಲ್ಲಿ ಡ್ರೈರನ್ ನಡೆಸಲಾಗುತ್ತಿದೆ.

ದೇಶಾದ್ಯಂತ ಲಸಿಕೆ ಲಭ್ಯವಾಗುತ್ತಿರುವ ಸಂದರ್ಭದಲ್ಲಿ ಎಲ್ಲರಿಗೂ ಲಸಿಕೆ ವಿತರಣೆ ಆಗಬೇಕು. ಆ ಸಂದರ್ಭದಲ್ಲಿ ಯಾರಿಗೂ ತೊಂದರೆ ಆಗಬಾರದು ಆ ಕಾರಣಕ್ಕಾಗಿ ಡ್ರೈರನ್ ನಡೆಸಲಾಗುತ್ತದೆ. ಪ್ರತಿ ವ್ಯಕ್ತಿಗೆ ಲಸಿಕೆ ಹಾಕಲು ಹಿಡಿಯುವ ಸಮಯ, ಹಾಕುವ ರೀತಿ ಎಲ್ಲವನ್ನೂ ಪರೀಕ್ಷಿಸಲಾಗುತ್ತದೆ. 

ಡ್ರೈರನ್ ಸಂದರ್ಭದಲ್ಲಿ ಲಸಿಕೆ ಸಾಗಾಣೆ, ಸಂಗ್ರಹ, ಹಂಚಿಕೆ, ಫಲಾನುಭವಿಗಳನ್ನು ಕೇಂದ್ರಕ್ಕೆ ಕರೆತರುವುದು ಸೇರಿ ಎಲ್ಲವನ್ನೂ ಪ್ರಯೋಗ ಮಾಡಲಾಗುತ್ತದೆ.

ಇಲ್ಲೆಲ್ಲ ನಡೆಯಲಿದೆ ಪ್ರಯೋಗ:
ಜಿಲ್ಲೆಯ ಒಟ್ಟು ೭ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆಯ ಡ್ರೈರನ್ ನಡೆಯಲಿದೆ ಬಾದಾಮಿ, ಮುಧೋಳ, ಬೀಳಗಿ ತಾಲೂಕು ಆಸ್ಪತ್ರೆಗಳು, ಜಮಖಂಡಿ ತಾಲೂಕಿನ ಚಕ್ಕಲಕಿ ಕ್ರಾಸ್ ಪ್ರಾಥಮಿಕ ಆರೋಗ್ಯ ಕೇಂದ್ರ, ಇಳಕಲ್ ಸಮುದಾಯ ಆರೋಗ್ಯ ಕೇಂದ್ರ, ಬಾಗಲಕೋಟೆಯ ನವನಗರದ ಸೆಕ್ಟರ ನಂ.೪೭ ರಲ್ಲಿನ‌ ನಗರ ಆರೋಗ್ಯ ಕೇಂದ್ರಗಳಲ್ಲಿ ಡ್ರೈರನ್ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.