ಬಾಗಲಕೋಟೆ
ಬಿಜೆಪಿ ಪಕ್ಷಕ್ಕೆ ಮರಳುವಂತೆ ತಮಗೆ ಹಲವರಿಂದ ಆಹ್ವಾನವಿದ್ದು, ಸದ್ಯಕ್ಕೆ ಆ ಬಗ್ಗೆ ಯೋಚನೆ ಇಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಕುಟುಂಬ, ಹೊಂದಾಣಿಕೆ ರಾಜಕೀಯವಿದೆ. ಶಿಕಾರಿಪುರದಲ್ಲಿ ನಾವು ಕೊಟ್ಟಿರುವ ಭಿಕ್ಷೆಯಿಂದ ನೀವು ಗೆದ್ದಿದ್ದೀರಿ ಎಂದು ಡಿ.ಕೆ.ಶಿವಕುಮಾರ ಅವರು ಬಿ.ವೈ.ವಿಜಯೇಂದ್ರ ಅವರಿಗೆ ಹೇಳಿದಾಗ ನನಗೆ ನೋವಾಯಿತು. ಈ ಹೇಳಿಕೆ ಹೊಂದಾಣಿಕೆ ರಾಜಕಾರಣವನ್ನು ತೋರಿಸುತ್ತದೆ ಎಂದು ಅಸಮಾಧಾನ ಹೊರಹಾಕಿದರು.
ಕುಟುಂಬ ರಾಜಕಾರಣ ವಿರೋಧಿಸಿದ ಬಿಜೆಪಿಯಲ್ಲಿ ಕುಟುಂಬ ರಾಜಕಾರಣವೇ ಆವರಿಸಿದೆ. ಇದನ್ನು ವಿರೋಧಿಸಿ ನಾನು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದೆö. ನನ್ನ ಸ್ಪರ್ಧೆಯ ಉದ್ದೇಶ ಈಡೇರಿದೆ, ಈಗ ಬಿಜೆಪಿಯಲ್ಲಿ ಶುದ್ಧೀಕರಣ ಪ್ರಕ್ರಿಯೆ ನಡೆದಿದೆ ಎಂದರು.
ಪಕ್ಷದಲ್ಲಿ ಒಂದು ಕುಟುಂಬಕ್ಕೆ ಒಂದು ಸ್ಥಾನ ಎಂಬ ನಿಯಮವಿದೆ. ಆ ಪ್ರಕಾರ ನಾನು ಪುತ್ರನಿಗೆ ಟಿಕೆಟ್ ಕೇಳಿದ್ದೆö, ನಾನು ಶಾಸಕ, ಸಂಸದನಾಗಿರಲಿಲ್ಲö. ಶಾಸಕ ಯತ್ನಾಳ ನೇತೃತ್ವದಲ್ಲಿ ಹಲವರು ಕುಟುಂಬ ರಾಜಕಾರಣದ ವಿರುದ್ಧ ಹೋರಾಟ ನಡೆಸಿದ್ದಾರೆ. ನನ್ನ ಆಪೇಕ್ಷೆ ಕೂಡ ಇದೇ ಆಗಿತ್ತು. ಜಾತಿಗಣತಿ ಬಗ್ಗೆ ಸಿದ್ದರಾಮಯ್ಯ ಅವರು ೯ ವರ್ಷದ ಹಿಂದೆ ಕೂಡ ಉತ್ತರ ಕುಮಾರನ ಪೌರುಷದ ಹೇಳಿಕೆ ನೀಡಿದ್ದರು. ಈಗ ಚುನಾವಣೆ ನೆಪ ಹೇಳುತ್ತಿದ್ದಾರೆ. ಮೂಡಾ ಹಗರಣದಲ್ಲಿ ಸಿಲುಕಿರುವ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ತನಿಖೆ ಎದುರಿಸಲಿ. ನಂತರ ಮತ್ತೆ ಸಿಎಂ ಆಗಲಿ ಅಭ್ಯಂತರವಿಲ್ಲö. ಆದರೆ ಅವರು ಅಹಿಂದ ಜನರನ್ನು ರಾಜಕಾರಣಕ್ಕೆ ಬಳಸುತ್ತಿದ್ದಾರೆ ಎಂದು ಟೀಕಿಸಿದರು.
ಸರ್ವೊಚ್ಛ ನ್ಯಾಯಾಲಯದ ಆದೇಶದ ಪ್ರಕಾರ ಒಳಮೀಸಲಾತಿ ಜಾರಿಯಾಗಬೇಕು. ಸಿದ್ದರಾಮಯ್ಯ ತಮ್ಮ ಅನುಕೂಲಕ್ಕೆ ತಕ್ಕಂತೆ ಹೇಳಿಕೆ ಕೊಡುತ್ತಾರೆ. ಮೂಡಾ ವಿಚಾರದಲ್ಲಿ ನ್ಯಾಯಾಲಯ ತಮ್ಮ ಪರವಾಗಿ ಇಲ್ಲ ಎಂದಾಗ ರಾಜೀನಾಮೆ ಕೊಡುವುದಿಲ್ಲ ಎಂದರು. ಎಲ್ಲ ಸಚಿವರು ಸಿದ್ದರಾಮಯ್ಯನವೇ ಸಿಎಂ ಎಂದು ಹೇಳಿ ಅವರ ಬೆನ್ನಿಗೆ ಚೂರಿ ಹಾಕುತ್ತಿದ್ದಾರೆ. ಕಾಂಗ್ರೆಸ್ ಕೆಟ್ಟ ರಾಜಕಾರಣ ಮಾಡುತ್ತಿರುವುದು ಹೊಸತಲ್ಲ ಎಂದು ಕುಟುಕಿದರು
ಆರ್‌ಸಿಬಿ ಸ್ಥಾಪನೆ ಬಗ್ಗೆ ತೀಆðನ
ಬಾಗಲಕೋಟೆಯ ಚರಂತಿಮಠ ಶಿವಾನುಭವ ಮಂಟಪದಲ್ಲಿ ಅ.೨೦ರಂದು ಹಮ್ಮಿಕೊಂಡಿರುವ ಸಭೆಯಲ್ಲಿ ರಾಯಣ್ಣ,ಚೆನ್ನಮ್ಮ ಬ್ರಿಗೇಡ್ ಸ್ಥಾಪನೆ ಬಗ್ಗೆ ತೀರ್ಮಾನಿಸಲಾಗುವುದು ಎಂದು ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಸಭೆಯಲ್ಲಿ ೨೫ ಸ್ವಾಮೀಜಿಗಳು, ರಾಜ್ಯಾದ್ಯಂತ ನಾನಾ ಜಿಲ್ಲೆಗಳ ಮುಖಂಡರು, ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಸಂಘಟನೆ ಸ್ಥಾಪನೆ, ಚಟುವಟಿಕೆ ಬಗ್ಗೆ ಚರ್ಚೆ ನಡೆಯಲಿದೆ. ಹಿಂದುಳಿದ, ದಲಿತ ಸಮುದಾಯದವರಿಗೆ ನ್ಯಾಯ ಸಿಗುತ್ತಿಲ್ಲö, ಹೀಗಾಗಿ ಬ್ರಿಗೇಡ್ ಆರಂಭಿಸಲಾಗುತ್ತಿದೆ. ಈ ಮೊದಲು ಬ್ರಿಗೇಡ್ ಸ್ಥಾಪಿಸಿದಾಗ ಕೆಲವರು ಹೈಕಮಾಂಡ್ ಮೇಲೆ ಒತ್ತಡ ಹೇರಿದರು. ಹಿರಿಯರಾದ ಅಮಿತ್ ಶಾ ಅವರ ಸೂಚನೆಯಂತೆ ಸಂಘಟನೆ ಸ್ಥಗಿತಗೊಳಿಸಲಾಯಿತು. ಆಗ ಸಂಘಟನೆ ಸ್ಥಗಿತಗೊಳಿಸಿದ್ದು ತಪ್ಪು ಎಂದು ಈಗ ಅನಿಸುತ್ತಿದೆ. ಸಂಘಟನೆ ಮುಂದುವರಿಸಿದ್ದರೆ ಸಮುದಾಯಗಳಿಗೆ ಸೌಲಭ್ಯ ದೊರೆಯುತ್ತಿತ್ತು" ಎಂದರು.
ಮುಖAಡ ವೀರಣ್ಣ ಹಳೇಗೌಡರ ಮಾತನಾಡಿ ಅ.೨೦ ರಂದು ಬಾಗಲಕೋಟೆಯ ಚರಂತಿಮಠದ ಶಿವಾನುಭವ ಮಂಟಪದಲ್ಲಿ ಬೆಳಗ್ಗೆ ೧೧ಕ್ಕೆ ನಡೆಯಲಿರುವ ಸಮಾವೇಶದಲ್ಲಿ ಅಭಿಮಾನಿಗಳು ಭಾಗವಹಿಸಬೇಕು. ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ದುರ್ಬಲವಾಗಿದೆ. ಅಹಿಂದ ಬಗ್ಗೆ ನಿರ್ಲಕ್ಷ÷ ತೋರಿದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ತಕ್ಕಪಾಟ ಕಲಿಯಲಿದೆ ಎಂದರು.