ಕಳಪೆ ಆಹಾರ ಆರೋಪ: ಜಿಲ್ಲಾಸ್ಪತ್ರೆ ಹೊರಗಿನ ಆಹಾರ ಗುತ್ತಿಗೆ ರದ್ದು
* ಆಸ್ಪತ್ರೆ ಆವರಣದಲ್ಲೇ ಸಿದ್ಧಪಡಲಿದೆ ಆಹಾರ * ನಿನ್ನೆಯಷ್ಟೇ ಆಹಾರ ಹಳಸಿರುವ ವಿಡಿಯೋ ವೈರಲ್ ಆಗಿತ್ತು
![ಕಳಪೆ ಆಹಾರ ಆರೋಪ: ಜಿಲ್ಲಾಸ್ಪತ್ರೆ ಹೊರಗಿನ ಆಹಾರ ಗುತ್ತಿಗೆ ರದ್ದು](https://nadanudi.com/uploads/images/2020/07/image_750x_5f167c59a1754.jpg)
ನಾಡನುಡಿ ನ್ಯೂಸ್
ಬಾಗಲಕೋಟೆ ಜು.೨೧:
ಆಹಾರದ ವಿಚಾರವಾಗಿ ಸತತ ಆರೋಪಗಳನ್ನು ಎದುರಿಸಿದ್ದ ಜಿಲ್ಲಾ ಕೋವಿಡ್ ಆಸ್ಪತ್ರೆ ಹೊರಗಿನವರಿಗೆ ನೀಡಿದ್ದ ಆಹಾರ ಪೂರೈಕೆ ಗುತ್ತಿಗೆಯನ್ನು ಕೊನೆಗೂ ರದ್ದುಪಡಿಸಿದೆ.
ಸೋಮವಾರ ಅಲ್ಲಿನ ರೋಗಿಗಳಿಗೆ ನೀಡಲಾಗಿದ್ದ ಅನ್ನ ಹಳಸಿದೆ ಎಂಬ ಆರೋಪ ರೋಗಿಗಳಿಂದ ಕೇಳಿ ಬಂದು, ಅದಕ್ಕೆ ಸಂಬAಧಿಸಿದ ವಿಡಿಯೋ ಸಹ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಚಿಕಿತ್ಸೆಗೆಗಾಗಿ ದಾಖಲಾಗಿರುವ ಪೊಲೀಸ್ ಸಿಬ್ಬಂದಿಯೊಬ್ಬರು ಜಿಲ್ಲಾ ಶಸ್ತçಚಿಕಿತ್ಸಕರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದ ಸಂಭಾಷಣೆಯೂ ವಾಟ್ಸಪ್‌ಗಳಲ್ಲಿ ಹರಿದಾಡಿತ್ತು. ಸಾಮಾಜಿಕ ಜಾಲತಾಣದಲ್ಲಿ ಆಸ್ಪತ್ರೆ ಅವ್ಯವಸ್ಥೆ ಎಂಬ ಆರೋಪವೂ ಕೇಳಿ ಬಂದಿತ್ತು. ಈ ಸಂಬAಧ ಗುತ್ತಿಗೆದಾರರನ್ನು ಅಧಿಕಾರಿಗಳು ಸಂಪರ್ಕಿಸಿದಾಗ ಲೆಮನ್ ರೈಸ್ ಆಗಿರುವುದರಿಂದ ಹುಳಿಯಾಗಿದೆ ಎಂದು ಸಬೂಬು ಹೇಳಿದ್ದರು. ಆದರೆ ಹಳಸಿದಕ್ಕೂ, ಹುಳಿಗೂ ಸಾಕಷ್ಟು ವ್ಯತ್ಯಾಸವಿದೆ. ಅಲ್ಲದೇ ವಿಡಿಯೋದಲ್ಲಿ ನಾಲ್ಕಾರು ಜನ ರೋಗಿಗಳು ಆಹಾರ ಹಳಸಿದೆ ಎಂದೇ ಆರೋಪಿಸಿದ್ದರು. ಈ ಬಗ್ಗೆ ಮಾಧ್ಯಮಗಳು ಸಹ ಜಿಲ್ಲಾಡಳಿತದ ಗಮನಸೆಳೆದಿದ್ದವು.
ಇದಾದ ನಂತರ ಎಚ್ಚೆತ್ತಿರುವ ಅಧಿಕಾರಿಗಳು ಹೊರಗಿನವರಿಂದ ಆಹಾರ ಪೂರೈಕೆ ಗುತ್ತಿಗೆಯನ್ನು ರದ್ದುಪಡಿಸಿದ್ದಾರೆ. ಹಾಸ್ಟೇಲ್‌ಗಳ ಬಾಣಸಿಗರನ್ನು ಕರೆಯಿಸಿ ಪ್ರತಿದಿನ ಆಸ್ಪತ್ರೆ ಆವರಣದಲ್ಲೇ ಆಹಾರ ಸಿದ್ಧಪಡಿಸಲು ತೀರ್ಮಾನಿಸಿದ್ದಾರೆ.
ಕಳೆದ ವಾರವೂ ರೋಗಿಗಳಿಗೆ ನೀಡಲಾಗಿದ್ದ ತಿಂಡಿಯಲ್ಲಿ ಜೀರಳೆ ಕಾಣಿಸಿಕೊಂಡು ಆ ವಿಡಿಯೋ ಸಹ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಅದಾದ ನಂತರ ಡಿಸಿಎಂ ಗೋವಿಂದ ಕಾರಜೋಳ ಅವರ ಗಮನಕ್ಕೆ ತಂದಾಗ ಪದೇ, ಪದೆ ಇಂಥ ಘಟನೆಗಳು ಸಂಭವಿಸಿದರೆ ಗುತ್ತಿಗೆ ರದ್ದುಪಡಿಸಿ, ಸಮಾಜ ಕಲ್ಯಾಣ ಇಲಾಖೆ ಹಾಸ್ಟೇಲ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಡುಗೆಯವರನ್ನು ಬಳಿಸಿಕೊಂಡು ಆಹಾರ ಸಿದ್ಧಪಡಿಸುವಂತೆಯೂ ಅವರು ಸೂಚಿಸಿದ್ದರು. ಕೊನೆಗೂ ಜಿಲ್ಲಾಡಳಿತ ಅದೇ ತೀರ್ಮಾನಕ್ಕೆ ಬಂದಿದೆ.