ಕೋಟೆ ಜನರಿಗಿಲ್ಲ ಈ ವರ್ಷ ಪಥಸಂಚಲನ ಕಣ್ತುಂಬಿಕೊಳ್ಳುವ ಭಾಗ್ಯ...!

* ಊರಿಗೂರೆ ಹಬ್ಬ ಎಂದು ಸಂಭ್ರಮಿಸುತ್ತಿದ್ದ ಆರ್‌ಎಸ್‌ಎಸ್ ರೂಟ್‌ಮಾರ್ಚ್   * ಕೋವಿಡ್ ಹಿನ್ನೆಲೆಯಲ್ಲಿ ಮರೆಯಾಯಿತು ಮತ್ತೊಂದು ಸಂಭ್ರಮ      

ಕೋಟೆ ಜನರಿಗಿಲ್ಲ ಈ ವರ್ಷ ಪಥಸಂಚಲನ ಕಣ್ತುಂಬಿಕೊಳ್ಳುವ ಭಾಗ್ಯ...!
file photos of bagalkot rss march past

 
ನಾಡನುಡಿ ನ್ಯೂಸ್
ಬಾಗಲಕೋಟೆ: 
ಮುಳುಗಡೆ ನಂತರವೂ ಹಲವು ವಿಶೇಷತೆಯನ್ನು ಬಾಗಲಕೋಟೆ ಕಾಪಾಡಿಕೊಂಡು ಬಂದಿತ್ತು. ಆದರೆ ಕೋವಿಡ್ ಎಂಬ ಮಹಾಮಾರಿ ಈ ಬಾರಿ ಎಲ್ಲವನ್ನೂ ನುಂಗಿ ಹಾಕಿದೆ. ಬಾಗಲಕೋಟೆಯ ಹಬ್ಬವೆಂದೇ ಖ್ಯಾತಿಗಳಿಸಿದ್ದ ರಾಷ್ಟಿçÃಯ ಸ್ವಯಂ ಸೇವಕ ಸಂಘದ ಪಥಸಂಚಲನವೂ ಅದರಲ್ಲಿ ಒಂದಾಗಿದೆ. 
 ೮೦ ವರ್ಷಗಳ ಇತಿಹಾಸ ಹೊಂದಿರುವ ಬಾಗಲಕೋಟೆ ಆರ್‌ಎಸ್‌ಎಸ್ ಪಥಸಂಚಲನ ತನ್ನದೇ ವಿಶೇಷತೆಯನ್ನು ಹೊಂದಿದೆ. ಸಂಘದ ಕೇಂದ್ರ ಸ್ಥಾನ ನಾಗಪುರ ಹೊರತುಪಡಿಸಿದರೆ ಅಷ್ಟು ದೊಡ್ಡ ಪ್ರಮಾಣದಲ್ಲಿ ಪಥಸಂಚಲನ ನಡೆಯುವುದು ಬಾಗಲಕೋಟೆಯಲ್ಲಿ ಮಾತ್ರ. ಇಲ್ಲಿ ಪಕ್ಷಾತೀತವಾಗಿ ಜನ ಸಂಘದ ಪಥಸಂಚಲನವನ್ನು ಸ್ವಾಗತಿಸುತ್ತಾರೆ ಅಲ್ಲದೇ ಎರಡು ಮಾರ್ಗಗಳಲ್ಲಿ ಬಂದು ಸೇರುವ ಪಥಸಂಚಲನ ವೀಕ್ಷಣೆಗೆ ಸುತ್ತಮುತ್ತಲ ಹಳ್ಳಿಗಳ ಜನ ಸೇರಿ ಲಕ್ಷಾಂತರ ಜನ ವೀಕ್ಷಣೆಯಲ್ಲಿ ಪಾಲ್ಗೊಂಡಿರುತ್ತಾರೆ. ಕೋವಿಡ್ ಹಿನ್ನೆಲೆಯಲ್ಲಿ ನ.೧ರ ಭಾನುವಾರ ನಡೆಯಬೇಕಿದ್ದ ಭವ್ಯ ಮೆರವಣಿಗೆ ಈ ವರ್ಷ ನೇಪಥ್ಯಕ್ಕೆ ಸರಿದಿದೆ. 
 ರಾಜ್ಯೋತ್ಸವದ ದಿನದಂದೇ ಪಥಸಂಚಲನ ಈ ಬಾರಿ ಕಾಕತಾಳೀಯವಾಗಿ ಬಂದಿತ್ತು. ಆದರೆ ಕೋವಿಡ್ ಎಂಬ ಮಹಾಮಾರಿಯಿಂದಾಗಿ ಈ ಬಾರಿ ಬಾಗಲಕೋಟೆ ಜನರ ಅಚ್ಚುಮೆಚ್ಚಿನ ಹಬ್ಬ ಎಂದ್ದೇ ಗುರುತಿಸಿಕೊಂಡಿದ್ದ ಪಥಸಂಚಲನ ಇಲ್ಲದಿರುವುದು ಬೇಸರ ಮೂಡಿಸಿದೆ. 


 ಊರಿಗೂರೆ ಸಂಭ್ರಮಿಸುತ್ತಿದ್ದ ಹಬ್ಬವಿಲ್ಲ: ಚಿಕ್ಕ ಕಂದಮ್ಮಗಳಿAದ ಹಿಡಿದು ಇಳಿವಯಸ್ಸಿನ ಹಿರಿಯವರೆಗೂ ಗಣವೇಷ ಧರಿಸಲು ಎಲ್ಲರೂ ಉತ್ಸುಕರಾಗಿರುತ್ತಾರೆ. ಬಾಗಲಕೋಟೆ ಪಥಸಂಚಲನದಲ್ಲಿ ೨ ಸಾವಿರದವರೆಗೆ ಗಣವೇಷಧಾರಿ ಸ್ವಯಂ ಸೇವಕರು ಪಾಲ್ಗೊಳ್ಳುತ್ತಾರೆ. ಸುಶ್ರಾöವ್ಯವಾದ ಬ್ಯಾಂಡ್ ವಾದನದ ಜತೆಗೆ ಶಿಸ್ತು ಬದ್ಧ ನಡಿಗೆ ನೆರೆದವರನ್ನು ರೋಮಾಂಚನಗೊಳಿಸುತ್ತದೆ. 
 ಘೋಷ್ ಪ್ರಮುಖ್ ಅವರ ಹಿಂಬದಿಯಲ್ಲಿ ಆನಕ ವಾದನ, ನಂತರ ಪಣವ್, ತ್ರಿಭುಜ, ಜಾಲರಿ, ವಂಶಿ, ಶಂಖ ವಾದನ ಅವರ ಹಿಂದೆ ದಂಡ ಸಹಿತ ಸ್ವಯಂ ಸೇವಕರ ನಡಿಗೆ, ತೆರೆದ ಜೀಪ್‌ನಲ್ಲಿ ಭಗವಾ ಸಹಿತ ಸ್ವಯಂ ಸೇವಕ, ಅದರ ರಕ್ಷಣೆಗೆ ನಾಲ್ವರು, ಅಲಂಕಾರ ಧ್ವಜಗಳು ಹೀಗೆ ಅದನ್ನು ಶಬ್ದಗಳಿಂದ ವರ್ಣಿಸಲು ಸಾಧ್ಯವಿಲ್ಲ. ಇಂಥ ಹಬ್ಬಕ್ಕಾಗಿ ಊರಿನ ಜನ ವರ್ಷದವರೆಗೆ ಕಾಯುತ್ತ ಕುಳಿತಿರುತ್ತಾರೆ. ಈ ಬಾರಿ ಅಂಥ ಹಬ್ಬವೇ ಇಲ್ಲದಿರುವುದಕ್ಕೆ ಅನೇಕರು ಬೇಸರ ವ್ಯಕ್ತಪಡಿಸಿದ್ದಾರೆ. 

 ವಿಜಯದಶಮಿ ಮೊದಲ ರವಿವಾರ: ವಿಜಯದಶಮಿ ದಿನದಂದೇ ಸಂಘ ಸ್ಥಾಪನೆ ಆಗಿದೆ. ವಿಜಯ ದಶಮಿ ನಂತರ ಬರುವ ಮೊದಲ ಭಾನುವಾರ ಬಾಗಲಕೋಟೆಯಲ್ಲಿ ಬೃಹತ್ ಪಥಸಂಚಲನ ಹೊರಡುತ್ತದೆ. ಅ.೨೬ರ ಭಾನುವಾರ ಹಬ್ಬವಾಗಿದ್ದರಿಂದ ನ.೧ರಂದು ಈ ವರ್ಷದ ಪಥಸಂಚಲನ ಆಯೋಜನೆಗೊಳ್ಳಬೇಕಿತ್ತು.  ಈ ಮೊದಲು ನಾವಲಗಿ ಜಿನ್ನಿಂಗ್ ಫ್ಯಾಕ್ಟರಿಯಿಂದ ಎರಡು ಮಾರ್ಗದ ಮೆರವಣಿಗೆಗಳು ಹೊರಡುತ್ತಿದ್ದವು. ಈಗ ಅದು ಬದಲಾಗಿದ್ದು, ಬವಿವ ಸಂಘದ ಮೈದಾನದಿಂದ ಹೊರಡುವ ಎರಡೂ ಮೆರವಣಿಗೆಗಳು ನಂತರ ಅದೇ ಸ್ಥಳದಲ್ಲಿ ಸಮಾವೇಶವಾಗಿ ಮಾರ್ಪಡುತ್ತವೆ. ಕೆಲವರು ಉದ್ಯೋಗಕ್ಕಾಗಿ ಬೇರೆ ಊರುಗಳಲ್ಲಿದ್ದು, ಮನೆ ಹಬ್ಬಗಳಲ್ಲಿ ಪಾಲ್ಗೊಳ್ಳದಿದ್ದರೂ ಊರಿನ ಹಬ್ಬ ಎಂದ್ದೇ ಖ್ಯಾತವಾಗಿರುವ ಪಥಸಂಚಲನವನ್ನು ತಪ್ಪಿಸಿಕೊಳ್ಳುವುದಿಲ್ಲ. ಅಷ್ಟರ ಮಟ್ಟಿಗೆ ಈ ಹಬ್ಬ ಖ್ಯಾತಿಗಳಿಸಿದೆ.