ಮಲ್ಲಿಕಾರ್ಜುನ ಚರಂತಿಮಠ ಬಿಡುಗಡೆಗೊಳಿಸಿದ ಪ್ರಣಾಳಿಕೆಯಲ್ಲಿ ಏನೆಲ್ಲ ಇದೆ..?
ಬಾಗಲಕೋಟೆ: ಉದ್ಯೋಗ ಸೃಷ್ಟಿ, ಆಟೋ, ಟಂಟA ಚಾಲಕರ ಕುಟುಂಬದವರಿಗಾಗಿ ಪ್ರತ್ಯೇಕ ಬಡಾವಣೆ, ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಸೇರಿದಂತೆ ೧೧ ಅಂಶಗಳ ಪ್ರಣಾಳಿಕೆಯನ್ನು ಬಾಗಲಕೋಟೆ ಮತಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಚರಂತಿಮಠ ಬಿಡುಗಡೆಗೊಳಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಪ್ರಣಾಳಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಮುಳುಗಡೆ ನಗರಿ ಹಣೆಪಟ್ಟಿ ಹೊಂದಿರುವ ಬಾಗಲಕೋಟೆ ನಗರದ ವಿದ್ಯಾವಂತರಿಗೆ ಉದ್ಯೋಗವಿಲ್ಲದಂತಾಗಿದೆ ಅವರಿಗೆ ಉದ್ಯೋಗ ಒದಗಿಸಲು ಕೈಗಾರಿಕೆ ಸ್ಥಾಪನೆಯ ಗುರಿ ಹೊಂದಲಾಗಿದೆ ಎಂದರು.
ಆಟೋ, ಟಂಟA ಚಾಲಕರಿಗೆ ಪ್ರತ್ಯೇಕ ಬಡಾವಣೆ ನಿರ್ಮಾಣ, ನೆನೆಗುದ್ದಿಗೆ ಬಿದ್ದಿರುವ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಫನೆ, ಕಿಲ್ಲಾ ನಡುಗಡ್ಡೆ ಪ್ರದೇಶದ ಮನೆಗಳಿಗೆ ಯೋಗ್ಯ ಪರಿಹಾರ, ನಡುಗಡ್ಡೆ ಸ್ಥಳಾಂತರ, ಬಿಟಿಡಿಎದಿಂದ ಆಸ್ತಿ ತೆರಿಗೆ ವಿನಾಯಿ ೧೦ ವರ್ಷಕ್ಕೆ ಮುಂದೂಡಿಕೆ ಮಾಡುವುದು, ಸರ್ಕಾರಿ ಪದವಿ ಕಾಲೇಝು ಸ್ಥಾಪನೆ, ಹಳೆ ಬಾಗಲಕೋಟೆ ನಗರದ ಮಾರುಕಟ್ಟೆಯನ್ನು ನವನಗರ ಮೂರನೇ ಯೂನಿಟ್‌ಗೆ ಸ್ಥಳಾಂತರ, ಶಿರೂರ, ಅಮಿನಗಡ, ಕಮತಗಿ ಮಾದರಿ ಪಟ್ಟಣಗಳಾಗಿ ನಿರ್ಮಾಣ, ಕ್ಷೇತ್ರದ ಕೆರಗಳನ್ನು ಆಲಮಟ್ಟಿ ಹಿನ್ನೀರಿನಿಂದ ಭರ್ತಿ ಮಾಡುವುದು, ನವನಗರದ ಪ್ರತಿ ಸೆಕ್ಟರ್‌ಗೆ ದೇಶ ಭಕ್ತರು, ಸ್ವಾತಂತ್ರö್ಯ ಹೋರಾಟಗಾರರ ಹೆಸರು ಇಡುವುದು, ಬಾಗಲಕೋಟೆ ಕ್ಷೇತ್ರವನ್ನು ಉತ್ತರ ಕರ್ನಾಟಕದಲ್ಲೇ ಮಾದರಿ ಕ್ಷೇತ್ರವನ್ನಾಗಿಸುವ ಗುರಿ ಹೊಂದಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಬಿಜೆಪಿ ತೊರೆದು ಎಂಸಿಸಿ ಬಳಗಕ್ಕೆ ಸೇರ್ಪಡೆಗೊಂಡ ವಿರುಪಾಕ್ಷ ಅಮೃತಕರ, ಅಚ್ಯುತ್ ಕೊಪ್ಪ, ಕಲಾವತಿ ರಾಜೂರ ಅವರು ಮಾತನಾಡಿ, ಬಿಜೆಪಿಯಲ್ಲಿ ಕಾರ್ಯಕರ್ತರಿಗೆ ಗೌರವ ಸಿಗುತ್ತಿಲ್ಲ. ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬಂದಿದ್ದಕ್ಕೆ ಹೊರಗೆ ಬಂದಿದ್ದೇವೆ. ಮಲ್ಲಿಕಾರ್ಜುನ ಚರಂತಿಮಠ ಅವರು ಶಾಸಕರಾಗಿ ಆಯ್ಕೆಯಾಗಬೇಕೆಂದರು. ಪಕ್ಷ ತೊರೆದಿರುವುದಕ್ಕೆ ಮಾತು ಆರಂಭಿಸುವ ಮುನ್ನ ವಿರುಪಾಕ್ಷ್ ಕಣ್ಣೀರಿಟ್ಟರು.
ಕಳಕಪ್ಪ ಬಾದೋಡಗಿ ಅವರು ಮಾತನಾಡಿ, ನಾನು ವೈಯಕ್ತಿ ಸ್ವಾರ್ಥಕ್ಕೆ ಪಕ್ಷ ತೊರೆದಿಲ್ಲ. ಕಾರ್ಯಕರ್ತರಿಗೆ ಆಗುತ್ತಿದ್ದ ಅನ್ಯಾಯವನ್ನು ಪ್ರಶ್ನಿಸಿ ಹೊರಗೆ ಬಂದಿದ್ದೇನೆ ಎಂದರು. ಸಂತೋಷ ಹೊಕ್ರಾಣಿ, ರವಿ ಕುಮಟಗಿ, ಸಂಗನಗೌಡ ಗೌಡರ, ರಾಜು ಗವಳಿ, ಅರುಣ ಲೋಕಾಪುರ, ಅಶೋಕ ಮುತ್ತಿನಮಠ ಮತ್ತಿತರರು ಇದ್ದರು.