ಹೆಚ್ಚುವರಿ ಡಿಜೆ ಬಳಕೆಗೆ ಅವಕಾಶ ಕೊಡಿ; ಠಾಣೆ ಮುಂದೆ ಜಮಾಯಿಸಿದ ಯುವಕರು
ಬಾಗಲಕೋಟೆ: ಈದ್ ಮಿಲಾದ್ ಮೆರವಣಿಗೆಯಲ್ಲಿ ಹೆಚ್ಚುವರಿ ಡಿಜೆಗಳ ಬಳಕೆಗೆ ಅವಕಾಶ ನೀಡುವಂತೆ ಕೋರಿ ಮುಸ್ಲಿಂ ಸಮುದಾಯದ ಮುಖಂಡರು, ಯುವಕರು ಶಹರ ಪೊಲೀಸ್ ಠಾಣೆ ಮುಂದೆ ಜಮಾಯಿಸಿದ್ದರು.
ಹಳೆ ನಗರದಲ್ಲಿ ಸೋಮವಾರ ಬೃಹತ್ ಈದ್ ಮೆರವಣಿಗೆ ನಡೆಯಲಿದ್ದು, ೨ ಡಿಜೆಗೆ ಪೊಲೀಸರು ಅನುಮತಿ ನೀಡಿದ್ದರು, ಆದರೆ ೮ ಡಿಜೆಗಳು ಬಂದಾಗ ಪೊಲೀಸರು ಅನುಮತಿ ಪಡೆದಷ್ಟೇ ಡಿಜೆಗಳನ್ನು ಬಳಸಬೇಕೆಂದು ಸೂಚನೆ ನೀಡಿದರು.
ಆದರೆ ಅಷ್ಟೂ ಡಿಜೆಗಳ ಬಳಕೆಗೆ ಅನುಮತಿ ನೀಡಬೇಕೆಂದು ಪಟ್ಟು ಹಿಡಿದ ಯುವಕರು ಠಾಣೆ ಮುಂದೆ ಜಮಾಯಿಸಿದರು.
ವಿಷಯ ತಿಳಿದು ಠಾಣೆಗೆ ಬಂದ ಎಸ್ಪಿ ವೈ.ಅಮರನಾಥ ರೆಡ್ಡಿ ಅವರು, ಅನುಮತಿ ಇದ್ದಷ್ಟೇ ಡಿಜೆಗಳನ್ನು ಬಳಸಿ. ಅನಗತ್ಯ ಗೊಂದಲ ಮಾಡಿಕೊಳ್ಳಬೇಡಿ ಎಂದು ತಿಳಿಹೇಳಿ ಕಳುಹಿಸಿದರು.