ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಗುಂಪಿನಿಂದ ಜನಾಲಿ, ಉಪಾಧ್ಯಕ್ಷ ಸ್ಥಾನಕ್ಕೆ ತಪಶೆಟ್ಟಿ...?
ಬಾಗಲಕೋಟೆ ಡಿಸಿಸಿ ಬ್ಯಾಂಕ್ ಗೆ ಅಚ್ಚರಿ ಬೆಳವಣಿಗೆಯಲ್ಲಿ ಕುಮಾರಗೌಡ ಜನಾಲಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಗುಂಪಿನಿಂದ ಅಭ್ಯರ್ಥಿ ಆಗಿದ್ದಾರೆ.ಪ್ರಕಾಶ ತಪಶೆಟ್ಟಿ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗಿದ್ದು ಸದ್ಯದಲ್ಲೇ ನಾಮಪತ್ರ ಸಲ್ಲಿಸಲಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಕಡೆಯಿಂದ ಯಾರು ನಾಮಪತ್ರ ಸಲ್ಲಿಸಲಿದ್ದಾರೆ ಎಂಬ ಬಗ್ಗೆ ನಿರಂತರ ಚರ್ಚೆ ಗಳು ನಡೆದಿದ್ದವು. ಆದರೆ ಅಚ್ಚರಿ ಬೆಳವಣಿಗೆಯಲ್ಲಿ ಕುಮಾರಗೌಡ ಜನಾಲಿಯನ್ನು ಬೆಂಬಲಿಸಲು ಬಿಜೆಪಿ ಗುಂಪು ತೀರ್ಮಾನಿಸಿದೆ ಎನ್ನಲಾಗಿದೆ.
ಬಾದಾಮಿ ಪಿಕೆಪಿಎಸ್ ನಿಂದ ಆಯ್ಕೆ ಆಗುತ್ತಿದ್ದ ಜನಾಲಿಗೆ ಈ ಬಾರಿ ಬಿಜೆಪಿ ಬೆಂಬಲಿಸದ ಕಾರಣ ಬಂಡಾಯವಾಗಿ ಸ್ಪರ್ಧಿಸಿದ್ದರು. ಅವರ ಆಯ್ಕೆ ಬಿಜೆಪಿಗೆ ಇರುಸುಮುರಿಸು ತಂದಿತ್ತು.
ಅಧ್ಯಕ್ಷ ಗಾದೆಯನ್ನು ಶತಾಯಗತಾಯ ಉಳಿಸಿಕೊಳ್ಳಲು ಯತ್ನಿಸುತ್ತಿರುವ ಬಿಜೆಪಿ ಇದೀಗ ಜನಾಲಿಗೆ ಗಾಳ ಹಾಕಿದಲ್ಲದೇ ಅವರನ್ನೇ ಬೆಂಬಲಿಸಿ ಅಚ್ಚರಿ ಮೂಡಿಸಿದೆ. ಇನ್ನೂ ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ ಎನ್ನಲಾಗಿದೆ. ಇನ್ನೂ ಕೆಲವೇ ಕ್ಷಣಗಳಲ್ಲಿ ಇದು ಬಹಿರಂಗವಾಗಲಿದೆ.