ಮೌಲ್ವಿ ಟೀಕಿಸಿದ ಯತ್ನಾಳ ವಿರುದ್ಧ ಬದ್ನೂರ ಗರಂ: ದೇಶ ಬಿಟ್ಟು ತೊಲಗುವಂತೆ ಒತ್ತಾಯ
ಬಾಗಲಕೋಟೆ: ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಹೇಳಿಕೆಯಿಂದ ಮುಸ್ಲಿಂ ಸಮಾಜದ ಭಾವನೆಗೆ ಧಕ್ಕೆ ಆಗಿದೆ ಎಂದು ಸಾಮಾಜಿಕ ಹೋರಾಟಗಾರ ರಮೇಶ ಬದ್ನೂರ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಶಾಸಕ ಯತ್ನಾಳ ಮಾಡಿರುವ ದೂರು ಸತ್ಯಕ್ಕೆ ದೂರವಾಗಿದ್ದು, ಇದರಿಂದಾಗಿ ದೇಶದಲ್ಲಿ ಶಾಂತಿ ಕದಡುತ್ತದೆ. ಯತ್ನಾಳ ಅವರ ಮೇಲೆ ತಕ್ಷಣವೇ ಕ್ರಿಮಿನಲ್ ಮೊಕದಮೆ ದಾಖಲಿಸಿ ಬಂಧಿಸಬೇಕೆAದು ಅವರು ಆಗ್ರಹಿಸಿದ್ದಾರೆ.
ಯತ್ನಾಳ್ ರವರು ಒಬ್ಬ ಶಾಸಕರು ಸಂವಿಧಾನಿಕ ಹುದ್ದೆಯಲ್ಲಿದ್ದು ಈ ರೀತಿ ಬೇಜವಾಬ್ದಾರಿತನದಿಂದ ವರ್ತಿಸಿದರೆ ದೇಶದ ಸಂವಿಧಾನಕ್ಕೆ ದಕ್ಕೆಯಾಗಲಿದೆ. ಯತ್ನಾಳ ಆರೋಪ ಸಾಬೀತುಪಡಿಸಲಿ ಇಲ್ಲವೇ ದೇಶ ಬಿಟ್ಟು ಹೋಗಲಿ. ಭಾರತ ನನ್ನ ತಾಯಿ, ನನ್ನ ತಾಯಿನಾಡಿನಲ್ಲಿ ಯತ್ನಾಳನಂತಹ ಧರ್ಮಾಂಧರಿಗೆ ಅವಕಾಶವಿಲ್ಲ. ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಧ್ವನಿಯಾಗುವುದನ್ನು ಬಿಟ್ಟು ಕೀಳು ರಾಜಕೀಐ, ಪೊಳ್ಳು ಪ್ರಚಾರಕ್ಕಾಗಿ ಯತ್ನಾಳ ಹೀಗೆ ಆಡುತ್ತಿದ್ದಾರೆ ಎಂದು ಬದ್ನೂರ ಅಸಮಾಧಾನ ಹೊರಹಾಕಿದ್ದಾರೆ.