ತಿರುಮಲದಲ್ಲಿ ಶೀಘ್ರ ಬವಿವ ಸಂಘದ ಯಾತ್ರಿ ನಿವಾಸ ಲೊಕಾರ್ಪಣೆ : ಚರಂತಿಮಠ

ತಿರುಮಲದಲ್ಲಿ ಶೀಘ್ರ ಬವಿವ ಸಂಘದ ಯಾತ್ರಿ ನಿವಾಸ ಲೊಕಾರ್ಪಣೆ : ಚರಂತಿಮಠ
ಬಾಗಲಕೋಟೆ: ಸುಕ್ಷೇತ್ರ ತಿರುಪತಿ ತಿರುಮಲದಲ್ಲಿ  ಶೀಘ್ರದಲ್ಲಿ  ಬವಿವ ಸಂಘದ ಯಾತ್ರಿ ನಿವಾಸ ಲೊಕಾರ್ಪಣೆಗೊಳ್ಳಲಿದೆ ಎಂದು ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಹೇಳಿದರು.
ಅವರು ಬಾಗಲಕೋಟೆಯ ಪ್ರತಿಷ್ಠಿತ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದಿAದ ತಿರುಮಲದಲ್ಲಿ ನಿರ್ಮಾಣಗೊಳ್ಳುತ್ತಿರುವ ಬಿ.ವ್ಹಿ.ವ್ಹಿ.ಸಂಘದ ಯಾತ್ರಿನಿವಾಸ ಕಾಮಗಾರಿಯನ್ನು ವೀಕ್ಷಿಸಿದ ನಂತರ ಮಾಹಿತಿ ನೀಡಿದರು.

ಈಗಾಗಲೆ ಶ್ರೀಶೈಲದಲ್ಲಿ ಅನ್ನಛತ್ರವನ್ನು ನಿರ್ಮಾಣ ಮಾಡುವ ಮೂಲಕ ದಕ್ಷಿಣ ಭಾರತದಲ್ಲಿ ಬಿ.ವ್ಹಿ.ವ್ಹಿ.ಸಂಘ ಧಾರ್ಮಿಕ ಕ್ಷೇತ್ರದಲ್ಲೂ ಸೇವೆ ಸಲ್ಲಿಸುವ ಕಾರ್ಯಕ್ಕೆ ಮುಂದಾಗಿದೆ, ಅದರ  ಮುಂದುವರಿದ ಭಾಗವಾಗಿ ತಿರುಪತಿ ತಿರುಮಲದಲ್ಲಿ ಯಾತ್ರಿ ನಿವಾಸ ನಿರ್ಮಾಣ ಮಾಡಲಾಗುತ್ತಿದೆ, ಕಟ್ಟಡ ಕಾಮಗಾರಿ ತಿವ್ರವಾಗಿ ನಡೆಯುತ್ತಿದ್ದು ಆದಷ್ಟು ಶೀಘ್ರವಾಗಿ ಲೋಕಾರ್ಪಣೆ ಮಾಡುವುದಾಗಿ ತಿಳಿಸಿದರು.
ಈ ಸಂಧರ್ಭದಲ್ಲಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ವೈದ್ಯಕೀಯ ಮಹಾವಿದ್ಯಾಲಯದ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ, ಸಂಘದ ಸದಸ್ಯರಾದ ಎಸ್.ಆರ್.ಮನಹಳ್ಳಿ,ರಾಜು ಮಲ್ಲನಗೌಡ ಪಾಟೀಲ, ಅಶೋಕಕುಮಾರ ಕಲ್ಯಾಣಶೆಟ್ಟಿ, ಬಸವರಾಜ ಕೆಂಧೂರ, ಪಂಡಿತ ಆರಬ್ಬಿ, ಡಾ.ಮಹಾಂತೇಶ ಕಡಪಟ್ಟಿ, ಸೇರಿದಂತೆ ಅನೇಕ ಸದಸ್ಯರು ಉಪಸ್ಥರಿತರಿದ್ದರು.