ಕೋಟೆನಗರಿಯಲ್ಲಿ ಅಪ್ಪು ಸ್ಮರಣೆ: ಅನ್ನದಾನ, ರಕ್ತದಾನ ಮೂಲಕ ಅಭಿಮಾನ ಮೆರೆದ ಜನ
ಪುನಿತ್ ರಾಜಕುಮಾರ ನೆನಪಿನಲ್ಲಿ ನಗರದ ವಿವಿಧೆ ಹಮ್ಮಿಕೊಂಡಿದ್ದ ಅನ್ನ ಸಂತರ್ಪಣೆಯಲ್ಲಿ ಶಾಸಕ ಡಾ.ವೀರಣ್ಣ ಚರಂತಿಮಠ ಸೇರಿ ಗಣ್ಯ ಪಾಲ್ಗೊಂಡು ಅಪ್ಪು ಭಾವಚಿತ್ರಕ್ಕೆ ನಮನ ಸಲ್ಲಿಸಿದರು.
ಬಾಗಲಕೋಟೆ:
ಅಗಾಧ ಸಾಧನೆ ಮಧ್ಯೆಯೂ ಸರಳ ವ್ಯಕ್ತಿತ್ವದ ಮೂಲಕ ದೇವಮಾನವ ಎನಿಸಿಕೊಂಡ ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ ಅವರ ನೆನಪಿನಲ್ಲಿ ಅವರ ಅಭಿಮಾನಿಗಳು ನಗರದ ವಿವಿಧೆಡೆ ಅನ್ನಸಂತರ್ಪಣೆ ಮಾಡಿದರು.
ಮಾಂಜಿರಮ್ ಸಂಸ್ಥೆ ಸಹಯೋಗದಲ್ಲಿ ವಿದ್ಯಾಗಿರಿ ಕಾಲೇಜು ಸರ್ಕಲ್, ನವನಗರ ಎಲ್ ಐಸಿ ವೃತ್ತ ಹಾಗೂ ಬಾಗಲಕೋಟೆ ನಗರದ ಬಸವೇಶ್ವರ ವರ್ತುಲದಲ್ಲಿ ಅನ್ನ ಸಂತರ್ಪಣೆ ಕೈಗೊಳ್ಳಲಾಯಿತು.
ಶಾಸಕ ಡಾ. ವೀರಣ್ಣ ಚರಂತಿಮಠ ಅವರು ಪುನಿತ್ ಭಾವಚಿತ್ರಕ್ಕೆ ನಮಿಸಿ, ಅನ್ನಸಂತರ್ಪಣೆಗೆ ಚಾಲನೆ ನೀಡಿದರು.
ಏಕಕಾಲಕ್ಕೆ ಮೂರು ಕಡೆಗಳಲ್ಲಿ ಆರಂಭಗೊಂಡಿರುವ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆ ಜನ ಊಟ ಸವಿದರು.
ನಗರದ ವಾಸವಿ ಚಿತ್ರಮಂದಿರದಲ್ಲಿ ಅಪ್ಪು ಅವರ ಗಂಧದ ಗುಡಿ ವೀಕ್ಷಣೆಗೂ ಸಾವಿರಾರು ಸಂಖ್ಯೆಯಲ್ಲಿ ಜನ ಮುಗಿಬಿದ್ದರು. ಅಭಿಮಾನಿಗಳು ಚಿತ್ರ ಮಂದಿರದ ಬಳಿ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದರು.
ಬಸವರಾಜ ಯಂಕಂಚಿ, ಸತ್ಯನಾರಾಯಣ ಹೇಮಾದ್ರಿ, ರಾಜು ರೇವಣಕರ, ಬಸಲಿಂಗಪ್ಪ ನಾವಲಗಿ, ದರ್ಶನ ಏಡಕೆ, ಸದಾನಂದ ನಾರಾ ಮತ್ತಿತರರು ಇದ್ದರು.