ಜಿಲ್ಲೆಯಲ್ಲಿ ಇನ್ನೂ ಜೀವಂತ ಅಸ್ಪೃಶ್ಯತೆ..!
ಬಾಗಲಕೋಟೆ: ದಲಿತ ಯುವಕನೋರ್ವ ದೇವಸ್ಥಾನ ಪ್ರವೇಶಿಸಿದ ಎಂಬ ಕಾರಣಕ್ಕೆ ಆತನನ್ನು ಕಂಬಕ್ಕೆ ಕಟ್ಟಿ ಥಳಿಸಿರುವ ಆರೋಪ ಕೇಳಿ ಬಂದಿದೆ.
ಬಾದಾಮಿ ತಾಲೂಕಿನ ಕೆರೂರು ಪೊಲೀಸ್ ಠಾಣೆ ವ್ಯಾಪ್ತಿಯ ಉಗಲವಾಟ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹಲ್ಲೆಗೊಳಗಾದವನನ್ನು ಅರ್ಜುನ ಮಾದರ(೨೮) ಎಂದು ಗುರುತಿಸಲಾಗಿದೆ.
ಗ್ರಾಮದ ದ್ಯಾಮವನ್ನ ಗುಡಿಯನ್ನು ಪ್ರವೇಶಿಸಿದಕ್ಕಾಗಿ ಅರ್ಜುನ ಮಾದರನಿಗೆ ನಿಂದಿಸಿದಲ್ಲದೇ ನಂತರ ಆತನನ್ನು ಕಂಬಕ್ಕೆ ಕಟ್ಟಿ ಥಳಿಸಿರುವ ಬಗ್ಗೆ ವರದಿಯಾಗಿದೆ.
ಈ ಸಂಬಂಧ ಗ್ರಾಮದ ೨೧ ಜನರ ವಿರುದ್ಧ ದೂರು ಸಲ್ಲಿಸಲಾಗಿದೆ ಎಂದು ತಿಳಿದು ಬಂದಿದೆ.ಗ್ರಾಮಕ್ಕೆ ದಲಿತ ಸಂಘಟನೆಗಳ ಭೇಟಿ ನೀಡಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರಲ್ಲದೇ ನ್ಯಾಯ ಸಿಗದಿದ್ದರೆ ಗ್ರಾಮದಿಂದ ಜಿಲ್ಲಾಡಳಿತ ಭವನದವರೆಗೆ ಪಾದಯಾತ್ರೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.
ಸೆ.೧೦ರಂದು ಘಟನೆ ಜರುಗಿದ್ದು, ಸೆ.೧೪ರಂದು ಕೇರಿಯ ಜನರು ಊರು ಪ್ರವೇಶಿಸಬಾರದು ಎಂದು ಡಂಗುರ ಸಾರಿದ್ದಾರೆ ಎಂದು ದೂರಲಾಗಿದೆ.