ಮಾಜಿ ಯೋಧನ ಮೇಲೆ ಹಲ್ಲೆ, ಫೈರಿಂಗ್

*ಜಮಖಂಡಿ ತಾಲೂಕು ತೊದಲಬಾಗಿಯಲ್ಲಿ ಘಟನೆ * ಬೆಚ್ವಿಬಿದ್ದ ಊರು

ಮಾಜಿ ಯೋಧನ ಮೇಲೆ ಹಲ್ಲೆ, ಫೈರಿಂಗ್

ಬಾಗಲಕೋಟೆ
ಜಮಖಂಡಿ ತಾಲೂಕಿನ ತೊದಲಬಾಗಿ ಗ್ರಾಮದ ರವಿವಾರ ರಾತ್ರಿ ಮಾಜಿ ಯೋಧನ ಮೇಲೆ ಮಹಾರಾಷ್ಟ್ರದಿಂದ ಬಂದ ವ್ಯಕ್ತಿ ಹಲ್ಲೆ ನಡೆಸಿ  ಗುಂಡು ಹಾರಿಸಿರುವ ಘಟನೆ ವರದಿಯಾಗಿದೆ. ಘಟನೆಯಿಂದಾಗಿ ಗ್ರಾಮದಲ್ಲಿ ಆತಂಕ ಮನೆ ಮಾಡಿದೆ.

ಮಾಜಿ ಯೋಧ  ಶ್ರೀಧರ ಕಾಸಾರ ಹಲ್ಲೆಗೊಳಗಾದ ವ್ಯಕ್ತಿ ಮಹಾರಾಷ್ಟ್ರದ ತಾಸಗಾಂವ ಮೂಲದ ಅನಿಲ್ ಪಾಟೀಲ ಎಂಬಾತ ತನ್ನ ನಾಲ್ವರು ಸಹಚರರಯೊಂದಿಗೆ ಆಗಮಿಸಿ ಏಕಾಏಕಿ ಹಲ್ಲೆ ನಡೆಸಿ ಯೋಧನ‌ ಮೇಲೆ ಗುಂಡು ಹಾರಿಸಿದ್ದು ಅದೃಷ್ಟವಶಾತ್ ಅದು ತಾಗಿಲ್ಲ.

(ಗಾಯಗೊಂಡಿರುವ ಶ್ರೀಧರ ಕಾಸಾರ್)

ಗಾಯಗೊಂಡಿರುವ ಯೋಧ ಶ್ರೀಧರ್ ಕಾಸಾರ್ ಅವರನ್ನು ಜಮಖಂಡಿ ತಾಲೂಕಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಶ್ರೀಧರ ಕಾಸಾರ ಅನಿಲ್ ಪಾಟೀಲ್ ಜತಗೆ ಒಣದ್ರಾಕ್ಷಿ ವ್ಯವಹಾರ ಮಾಡುತ್ತಿದ್ದರು, ಗ್ರಾಮದ ಇತರ ರೈತರಿಂದಲೂ ಒಣದ್ರಾಕ್ಷಿ ಕೊಡಿಸುತ್ತಿದ್ದರು.

ಆದರೆ ಈ ವರ್ಷ ಬೇರೆ ಕಡೆ ಸಾಗಿಸಿದ ಹಿನ್ನೆಲೆಯಲ್ಲಿ ಅನಿಲ ಪಾಟೀಲ ತೊದಲಬಾಗಿ ಗ್ರಾಮಕ್ಕೆ ಬಂದು ಗಲಾಟೆ ನಡೆಸಿ, ಗುಂಡು ಹಾರಿಸಿದ್ದಾನೆ ಎಂದು ತಿಳಿದು ಬಂದಿದೆ.

ಘಟನೆ ಸಂಬಂಧ  ಸಾವಳಗಿಯ ಸುಭಾಸ್ ರಂಗಪ್ಪ ಪಾಟೋಳಿ, ಸಾಂಗ್ಲಿ ಜಿಲ್ಲೆ ತಾಸಗಾಂವ ತಾಲೂಕಿನ  ಅನಿಲ ಪಾಂಡುರಂಗ ಪಾಟೀಲ, ಸುಜಿತ್ ಸುಭಾಸ್ ಪಾಟೋಳಿ ಹಾಗೂ ಇತರ‌ ಐದು ಜನರ ವಿರುದ್ಧ ಸಾವಳಗಿ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.