ರಾಮ ಮಂದಿರವಾಯಿತು... ಇನ್ನೂ ಕಾಶಿ, ಮಥುರಾ ಸರದಿ...!

ರಾಮ ಮಂದಿರ ಪಡೆದಂತೆ ಕಾಶಿ, ಮಥರಾ ಪಡೆಯುವ ದಿನ ಹತ್ತಿರ ಎಂದು ಶಾಸಕ‌ ಡಾ.ಚರಂತಿಮಠ ಹೇಳಿದ್ದಾರೆ.

ರಾಮ ಮಂದಿರವಾಯಿತು... ಇನ್ನೂ ಕಾಶಿ, ಮಥುರಾ ಸರದಿ...!

ನಾಡನುಡಿ ನ್ಯೂಸ್ 
ಬಾಗಲಕೋಟೆ:

ರಾಮ ಮಂದಿರವಾಯಿತು. ಕಾಶಿ, ಮಥುರಾ ವಿಮೋಚನೆಯ ದಿನಗಳು ದೂರವಿಲ್ಲ‌ ಎಂದು ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದ್ದಾರೆ.

ನಗರದ ಶಿವಾನಂದ‌ ಜಿನ್ನಿಂಗ್ ಫ್ಯಾಕ್ಟರಿ ಆವರಣದ ಬಿಜೆಪಿ ಕಚೇರಿಯಲ್ಲಿ‌ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಹಾಗೂ ಮಹರ್ಷಿ ಸವಿತಾ ಜಯಂತಿಯಲ್ಲಿ ಅವರು ಮಾತನಾಡಿದರು.

ರಾಮ ಮಂದಿರ ವಿಚಾರವನ್ನು ಕೇಂದ್ರ ಸರ್ಕಾರ ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದ್ದು, ಕಾಶಿ ಹಾಗೂ ಮಥುರಾ ವಿಮೋಚನೆ ದಿನಗಳ ದೂರವಿಲ್ಲ ಎಂದು ಹೇಳಿದರು.

ಛತ್ರಪತಿ ಶಿವಾಜಿ ಅವರು ಇಲ್ಲದೆ ಹೋಗಿದ್ದರೆ ಭಾರತ, ಭಾರತವಾಗಿರುತ್ತಿರಲಿಲ್ಲ. ಅವರ ನಂತರ ದೇಶವನ್ನೂ ಒಗ್ಗೂಡಿಸಿದ‌ ಏಕೈಕ ವ್ಯಕ್ತಿ ಎಂದರೆ ಅದು ವಲ್ಲಭಭಾಯ್ ಪಟೇಲರು ಅವರು ಗಟ್ಟಿತನದಿಂದ ದೇಶ ಒಂದಾಯಿತು. ನೆಹರು ಕೈಯಲ್ಲಿ ಸಿಕ್ಕು ದೇಶ ನಲುಗಿತ್ತು ಎಂದರು.

ಒಂದು ದೇಶ, ಒಂದು ಚುನಾವಣೆ ಕೂಡ ಸದ್ಯದಲ್ಲೇ ಜಾರಿಗೆ ಬರಲಿದೆ. ಮಾ.೪ ಮತ್ತು ೫ ರಂದು ವಿಧಾನ ಮಂಡಲ ಅಧಿವೇಶನದಲ್ಲಿ ಈ ವಿಚಾರವಾಗಿ ಚರ್ಚೆ ನಡೆಯಲಿದೆ ಎಂದರು.

ಪ್ರಧಾನಿ ಮೋದಿ ಅವರಿಂದಾಗಿ ದೇಶದಲ್ಲಿ‌ ಅನೇಕ ಕ್ರಾಂತಿಕಾರಿ ಬದಲಾವಣೆಗಳಾಗಿವೆ. ಪ್ರಣಾಳಿಕೆಯಲ್ಲಿ ಹೇಳಿದೆಲ್ಲವೂ ಜಾರಿಯಾಗಿವೆ ಎಂದರು.

ಕಾಶ್ಮೀರ ದೇಶದ ಕೈಬಿಡುವ ವಾತಾವರಣ ಸೃಷ್ಟಿಯಾದಾಗ ದಿಟ್ಟತನದಿಂದ ಅದನ್ನು ಮೋದಿ  ಹಾಗೂ ಅಮಿತ್ ಷಾ ಉಳಿಸಿದ್ದಾರೆ ಎಂದು ಸ್ಮರಿಸಿದರು.

ಶಿವಾಜಿ ಮಹಾರಾಜರು ಸೇರಿ ಅನೇಕರು ದೇಶದ ಉಳುವಿಗಾಗಿ ಶ್ರಮಿಸಿದರು. ಇಲ್ಲಿನ ಸಂಸ್ಕೃತಿಯನ್ನು ಉಳಿಸಿದರು. ಆದರೆ ಅಂಥ ಮೇರು ವ್ಯಕ್ತಿತ್ವಗಳನ್ನು ನಾವು ಜಾತಿಗೆ ಸೀಮಿತಗೊಳಿಸುವ ಕೆಲಸ ಮಾಡುತ್ತಿದ್ದೇವೆ ಅದು ನಿಲ್ಲಬೇಕೆಂದರು.

ದೇಶ ಮೊದಲು ಎಂಬುದು ನಮ್ಮ ತಲೆಯಲ್ಲಿರಬೇಕು ಎಂದು ಕರೆ ನೀಡಿದರು.

ಮದನ್ ಮೋಹನ್ ಮಾಳವಿಯ ಅವರು ಬನಾರಸ್ ಹಿಂದು ವಿವಿ ಆರಂಭಿಸಿದರು, ಶಿವಾಜಿ ಮಹಾರಾಜರು ಧರ್ಮ ರಕ್ಷಣೆ ಮಾಡಿದರು. ಅಂಥ ಯೋಚನೆಗಳೊಂದಿಗೆ ಜನಸಂಘ, ಬಿಜೆಪಿ ಜನ್ಮತಾಳಿದೆ ಎಂದರು.

ಜಾತಿ ಇಲ್ಲದೆ ಬದುಕೇ ಇಲ್ಲ ಎಂಬಂಥ ಸ್ಥಿತಿ‌‌ ಇಂದು ನಿರ್ಮಾಣವಾಗಿದೆ.‌ಇದು ಬದಲಾಗಬೇಕು.‌ದೇಶದ ಮೂಲ ಸಿದ್ಧಾಂತ ಅರಿತು‌‌ ನಾವೆಲ್ಲರೂ ಮುನ್ನಡೆಯಬೇಕೆಂದರು.