ರಾಮಮಂದಿರ ಲೋಕಾರ್ಪಣೆ ಬೆನ್ನಲ್ಲೆ ನಿರಾಣಿಗೆ ಪ್ರಧಾನಿ ಮೋದಿ ಪತ್ರ..!
ಬಾಗಲಕೋಟೆ: ಇತ್ತೀಚೆಗಷ್ಟೇ ನಿಧನರಾಗಿರುವ ಸುಶಿಲಾತಾಯಿ ರುದ್ರಪ್ಪ ನಿರಾಣಿ ಅವರ ನಿಧನಕ್ಕೆ ಸಂತಾಪ ಸೂಚಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅವರ ಪುತ್ರ,ಬಿಜೆಪಿ ರಾಜ್ಯ ಉಪಾಧ್ಯಕ್ಷ ಮುರುಗೇಶ ನಿರಾಣಿ ಅವರಿಗೆ ಪತ್ರಮುಖೇನ ಸಂತಾಪ ಸೂಚಿಸಿದ್ದಾರೆ.
ನಿರಾಣಿ ಕುಟುಂಬದ ಯಮನಾತಿಯಾಗಿ ಅವರು ನೀಡಿರುವ ಕೊಡುಗೆಗಳು ಅವಿಸ್ಮರಣಿಯ. ಅವರ ನಿಧನದಿಂದ ತೀವ್ರನೋವಾಗಿದ್ದು, ಕುಟುಂಬಕ್ಕೆ ನೋವುಭರಿಸುವ ಶಕ್ತಿಯನ್ನು ಭಗವಂತ ದಯಪಾಲಿಸಲಿ ಎಂದು ಪತ್ರದಲ್ಲಿ ಕೋರಿದ್ದಾರೆ.
ಇದಕ್ಕೆ ಉತ್ತರಿಸಿ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿರುವ ಮುರುಗೇಶ ನಿರಾಣಿ ಅವರು ಮಾತೃವಿಯೋಗದ ಸಂದರ್ಭದಲ್ಲಿ ನಿಮ್ಮ ಪುತ್ರವು ನಮ್ಮ ಮನೋಸ್ಥೆöÊರ್ಯವನ್ನು ಹೆಚ್ಚಿಸಿದೆ. ನೀವು ಪಕ್ಕದಲ್ಲೇ ಕುಳಿತು ಸಂತೈಸಿದಷ್ಟು ಸಮಾಧಾನ ತಂದಿದೆ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.
ಇದಲ್ಲದೇ ಬಿಜೆಪಿ ರಾಷ್ಟಿçÃಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಧರ್ಮೇಂದ್ರ ಪ್ರಧಾನ, ಪ್ರಹ್ಲಾದ್ ಜೋಶಿ, ಮಹಾರಾಷ್ಟç ಡಿಸಿಎಂ ದೇವೇಂದ್ರ ಫಡ್ನವಿಸ್, ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ, ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಸೇರಿ ಸಂಘ ಪರಿವಾರದ ಹಿರಿಯರು, ಪಕ್ಷದ ಕಾರ್ಯಕರ್ತರು ಕುಟುಂಬದ ಜತೆಯಾಗಿ ನಿಂತಿದ್ದಾರೆ ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದ್ದಾರೆ.