ಮೇ ೨೫ರಂದು ತೋವಿವಿ ೧೧ನೇ ಘಟಿಕೋತ್ಸವ: ಮೊದಲ ಬಾರಿಗೆ ಗೌವರ ಡಾಕ್ಟರೇಟ್ ಪ್ರದಾನ
ಬಾಗಲಕೋಟೆ:
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 11 ನೇ ಘಟಿಕೋತ್ಸವವನ್ನು ಮೇ 25 ರಂದು ಬೆಳಿಗ್ಗೆ 10.30ಕ್ಕೆ ವಿಶ್ವ ವಿದ್ಯಾಲಯದ ಮುಖ್ಯ ಆವರಣದ ನೂತನ ಸಭಾ ಭವನದಲ್ಲಿ ಆಯೋಜಿಸಲಾಗಿದ್ದು, ಪ್ರಥಮ ಬಾರಿಗೆ ವಿಶ್ವ ವಿದ್ಯಾಲಯದಿಂದ ಪ್ರಗತಿ ಪರ ರೈ,ಮಾಜಿ ಸಚಿವ ಎಚ್. ಏಕಾಂತಯ್ಯಾರವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಾಲಾಗುತ್ತಿದೆಯೆಂದು ತೋವಿವಿಯ ಕುಲಪತಿ ಡಾ.ಕೆ.ಎಮ್.ಇಂದಿರೇಶ ತಿಳಿಸಿದರು.
(ಏಕಾಂತಯ್ಯ)
ತೋವಿವಿಯ ಸಭಾಂಗಣದಲ್ಲಿ ಮಂಗಳವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ರಾಜ್ಯಪಾಲರು ಮತ್ತು ತೋವಿವಿಯ ಕುಲಪತಿ ಥಾವರಚದ ಗೆಹ್ಲೋಟ್ ಅವರು ಅಧ್ಯಕ್ಷತೆಯಲ್ಲಿ ಗೌರವ ಡಾಕ್ಟರೇಟ ಮತ್ತು ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಮತ್ತು ಪದವಿ ಪ್ರದಾನ ಮಾಡಲಾಗುತ್ತಿದೆ. ಘಟಿಕೋತ್ಸವದ ಭಾಷಣವನ್ನು ಇಂಡಿಯನ್ ವಾಟರ್ ಮ್ಯಾನ್ ಎಂದೇ ಕರೆಯಲಾಗುವ ರಾಜಸ್ಥಾನದ ಡಾ.ರಾಜೇಂದ್ರ ಸಿಂಗ್ ರವರು ಮಾಡಲಿದ್ದಾರೆ. ಕರ್ನಾಟಕದ ತೋಟಗಾರಿಕೆ ಯೋಜನೆ ಹಾಗೂ ಸಾಂಖ್ಯಿಕ ಸಚಿವ ಮತ್ತು ತೊವಿವಿಯ ಸಹಕುಲಾಧಿಪತಿಗಳಾಗಿರುವ ಮುನಿರತ್ನರವರು ಉಪಸ್ಥಿತರಿರುವರು ಎಂದು ತಿಳಿಸಿದರು.
ತೋವಿವಿಯ ವ್ಯವಸ್ಥಾಪನ ಮಂಡಳಿಯ ಸದಸ್ಯರು, ಶಿಕ್ಷಣ ಪರಿಷತ್ ಮಂಡಳಿಯ ಸದಸ್ಯರು (ಸ್ನಾತಕ ಮತ್ತು ಸ್ನಾತಕೊತ್ತರ) ಕರ್ನಾಟಕ ವಿಧಾನ ಸಭೆ ಮತ್ತು ವಿಧಾನ ಪರಿಷತ್ ಸದಸ್ಯರು, ಸಂಸತ್ ಸದಸ್ಯರು, ಜಿಲ್ಲಾ ಆಡಳಿತದ ಹಿರಿಯ ಅಧಿಕಾರಿಗಳು ಮತ್ತು ಜಿಲ್ಲಾ ಅಭಿವೃದ್ಧಿ ಇಳಾಖೆಗಳ ಮುಖ್ಯಸ್ಥರು, ಶೈಕ್ಷಣಿಕ ಸಂಸ್ಥೆಗಳ ವಿಜ್ಞಾನಿಗಳು ಮತ್ತು ಮುಖ್ಯಸ್ಥರು, ಚಿನ್ನದ ಪದಕಗಳ ದಾನಿಗಳು, ಆಹ್ವಾನಿತರು ಮತ್ತು ತೋವಿವಿಯ ಬೋಧಕ ಬೋಧಕೇತರ ಸಿಭ್ಭಂದಿ ಈ ಘಟಿಕೋತ್ಸವದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ ಎಂದರು. ಘಟಿಕೋತ್ಸವದ ವಿಶೇಷತೆಗಳು :
ಪ್ರಸ್ತುತ 11 ನೇ ಘಟಿಕೋತ್ಸವದಲ್ಲಿ ಪ್ರಪ್ರಥಮ ಬಾರಿಯಾಗಿ 2021-22 ನೇ ಸಾಲಿಗೆ ಮಾಜಿ ಸಚಿವ ಮತ್ತು ಪ್ರಗತಿಪರ ರೈತರಾಗಿರುವ ಹಿರಿಯೂರಿನ ಹೆಚ್ ಏಕಾಂತಯ್ಯ ರವರಿಗೆ ರಾಜ್ಯಪಾಲರಿಂದ ಗೌರವ ಡಾಕ್ಟರೇಟ್ ಪದವಿಯನ್ನು ನೀಡಲಾಗುತ್ತಿದೆ. ಏಕಾಂತಯ್ಯ ರವರು ತೋಟಗಾರಿಕೆಯಲ್ಲಿ ಮಾಡಿರುವ ಉತ್ಕøಷ್ಠ ಸಾಧನೆಗಾಗಿ ಗೌ ಡಾ ಪದವಿಗೆ ಆಯ್ಕೆ ಆಗಿರುತ್ತಾರೆ. ವಿವಿಧ ಮಹಾ ವಿದ್ಯಾಲಯಗಳ ವಿದ್ಯಾರ್ಥಿಗಳ ಒಟ್ಟಾರೆಯಾದ ಅಂಕಗಳ ಆಧಾರದ ಮೇಲೆ ತೋವಿವಿಯ ಹಾಗೂ ಎಲ್ಲಾ ದಾನಿಗಳ ಚಿನ್ನದ ಪದಕಗಳನ್ನು ವಿದ್ಯಾಥಿಗಳಿಗೆ ವಿತರಿಸಲಾಗುತ್ತಿದ್ದು, ಒಟ್ಟು 680 ವಿದ್ಯಾರ್ಥಿಗಳಲ್ಲಿ 475 ಸ್ನಾತಕ (ತೋಟಗಾರಿಕೆ), 23 ಬಿ.ಟೆಕ್(ಆಹಾರ ತಂತ್ರಜ್ಞಾನ), 137 ಸ್ನಾತಕೋತ್ತರ (ತೋಟಗಾರಿಕೆ) ಹಾಗೂ 45 ಪಿ.ಎಚ್.ಡಿ ಪದವಿ ಪ್ರದಾನ ಅಲ್ಲದೇ ಸ್ನಾತಕೋತ್ತರ ವಿಭಾಗದಲ್ಲಿ ವಿವಿಧ ಡಿಪಾರ್ಟಮೆಂಟ್ ನ್ ವಿದ್ಯಾರ್ಥಿಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ತೋವಿವಿಯಿಂದ 25 ಹಾಗೂ ದಾನಿಗಳು ಕೊಡಮಾಡುವ 52 ಸೇರಿ ಒಟ್ಟು 77 ಚಿನ್ನದ ಪದಕಗಳನ್ನು ಘಟಿಕೋತ್ಸವದಲ್ಲಿ ವಿತರಿಸಲಾಗುತ್ತಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ತೋವಿವಿಯ ವಿಸ್ತರಣಾ ನಿರ್ದೇಶಕ ಡಾ.ಎಸ್.ಐ.ಅಥಣಿ ಮತ್ತು ವ್ಯವಸ್ಥಾಪಣಾ ಮಂಡಳಿಯ ಸದಸ್ಯೆ ಬಿ.ಸುಮಿತ್ರಾದೇವಿ ಉಪಸ್ಥಿತರಿದ್ದರು.