ಬಾಗಲಕೋಟೆ ಡಿಸಿಸಿ ಬ್ಯಾಂಕಿಗೆ ಮತ್ತೋರ್ವ ಸದಸ್ಯ ನಾಮನಿರ್ದೇಶನ..!
ಬಾಗಲಕೋಟೆ ಡಿಸಿಸಿ ಬ್ಯಾಂಕ್ ಗೆ ಮತ್ತೋಋವ ಸದಸ್ಯನನ್ನು ನೇಮಕಗೊಳಿಸಿ ಸರ್ಕಾರ ಆದೇಶಿಸಿದೆ.ಯಾರು ಆ ಸದಸ್ಯ ಎಂಬುದರ ಮಾಹಿತಿ ಇಲ್ಲಿದೆ ನೋಡಿ
ನಾಡನುಡಿ ನ್ಯೂಸ್
ಬಾಗಲಕೋಟೆ:
ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಗೆ ದಿಢೀರ್ ಬೆಳವಣಿಗೆಯಲ್ಲಿ ಮತ್ತೊಬ್ಬ ನಿರ್ದೇಶಕ್ನರನ್ನು ನಾಮನಿರ್ದೇಶನಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ಈ ಹಿಂದೆ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಬಾದಾಮಿಯ ಸಿದ್ಧನಗೌಡ ಪಾಟೀಲ ಅವರನ್ನು ಸರ್ಕಾರ ದಿಢೀರ್ ನೇಮಕಗೊಳಿಸಿ ಆದೇಶಿಸಿದೆ.ಅವರು ಬಾದಾಮಿ ತಾಲೂಕು ಜಾಲಿಹಾಳ ಪಿಕೆಪಿಎಸ್ ಸದಸ್ಯರೂ ಆಗಿದ್ದಾರೆ.
ಬ್ಯಾಂಕ್ ನಲ್ಲಿ ಸರ್ಕಾರದ ಶೇರು ಇಲ್ಲದಿದ್ದರೆ ಅಂಥಲ್ಲಿ ನಾಮನಿರ್ದೇಶನಕ್ಕೆ ಅವಕಾಶವಿಲ್ಲ ಎಂದು ಹೇಳಿಕೊಂಡು ಈವರೆಗೆ ಬರಲಾಗಿತ್ತು. ಆದರೆ ಇತ್ತೀಚೆಗೆ ನೇಮಕಗೊಂಡ ಮಹಾಲಿಂಗಪುರದ ಬಸವರಾಜ ಪಾಟೀಲ ಹಾಗೂ ಈಗ ನೇಮಕಗೊಂಡಿರುವ ಸಿದ್ಧನಗೌಡ ಪಾಟೀಲ ಸೇರಿ ಒಟ್ಟು ಇಬ್ಬರನ್ನು ನಾಮನಿರ್ದೇಶನಗೊಳಿಸಿದೆ.
ಮಹಾಲಿಂಗಪುರದ ಬಸವರಾಜ ಪಾಟೀಲ ಇತ್ತೀಚೆಗೆ ರಬಕವಿ-ಬನಹಟ್ಟಿ ಪಿಕೆಪಿಎಸ್ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ ಕೊನೆ ಕ್ಷಣದಲ್ಲಿ ಕಣದಿಂದ ನಿವೃತ್ತಿ ಘೋಷಿಸಿ ಸಿದ್ದು ಸವದಿ ಅವರನ್ನು ಬೆಂಬಲಿಸಿರುವುದಾಗಿ ತಿಳಿಸಿದ್ದರು.ಚುನಾವಣೆ ಮರುದಿನವೇ ಸರ್ಕಾರ ಅವರನ್ನು ನಾಮನಿರ್ದೇಶನಗೊಳಿಸಿತ್ತು. ಈಗ ದಿಢೀರ್ ಬೆಳವಣಿಗೆಯಲ್ಲಿ ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಸಿದ್ಧನಗೌಡರನ್ನೂ ನಾಮನಿರ್ದೇಶನಗೊಳಿಸಿದ್ದು,೨೦೦೫ರಲ್ಲಿ ಅವರು ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾಗಿದ್ದರು.