ಶ್ರಾವಣ ಶುಕ್ರವಾರ ಕೋವಿಡ್ ಶಾಕ್: ಸಾವಿರದ ಗಡಿ ದಾಟಿದ ಸೋಂಕಿತರ ಸಂಖ್ಯೆ
* ಒಂದೇ ದಿನ ೧೮೪ ಪ್ರಕರಣಗಳು ಪತ್ತೆ * ತಲ್ಲಣಗೊಂಡ ಜನತೆ
ಬಾಗಲಕೋಟೆ ಜು.೨೪:
ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಕೈಮಿರುತ್ತಿದ್ದು, ಶ್ರವಾಣ ಶುಕ್ರವಾರದ ಸಂಭ್ರಮಕ್ಕೆ ಬರೆ ಎಂಬAತೆ ಒಂದೇ ದಿನ ೧೮೪ ಪ್ರಕರಣಗಳು ಪತ್ತೆಯಾಗಿವೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ೧೧೬೮ಕ್ಕೆ ಹೆಚ್ಚಳಗೊಂಡಿದ್ದು, ತಲ್ಲಣಮೂಡಿಸಿದೆ.
ಪ್ರಸ್ತುತ ಜಿಲ್ಲೆಯಲ್ಲಿ ೬೨೫ ಸಕ್ರಿಯ ಪ್ರಕರಣಗಳು ಇದ್ದು, ೧೧೬೮ ಪ್ರಕರಣಗಳ ಪೈಕಿ ೫೦೭ ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.
ಹೊಸದಾಗಿ ದೃಢಪಟ್ಟ ಸೋಂಕಿತರ ಪೈಕಿ ಬಾಗಲಕೋಟೆ ತಾಲೂಕಿನಲ್ಲಿ ೩೨, ಬಾದಾಮಿ ೩೨, ಬೀಳಗಿ ೪, ಜಮಖಂಡಿ ೫೦, ಹುನಗುಂದ ೩೦, ಮುಧೋಳ ೪೨ ಹಾಗೂ ಬೇರೆ ಜಿಲ್ಲೆಯ ಒಂದು ಪ್ರಕರಣಗಳು ಪತ್ತೆಯಾಗಿವೆ. ಜಮಖಂಡಿಯ ಪೊಲೀಸ್ ಠಾಣೆಯ ೭, ಹುನಗುಂದ ಮತ್ತು ನವನಗರ ತಲಾ ಓರ್ವ ಸಿಬ್ಬಂದಿ ಸೇರಿ ೯ ಜನ ಪೊಲೀಸ್ ಸಿಬ್ಬಂದಿಗಳಿಗೆ ಸೋಂಕು ದೃಡಪಟ್ಟಿದೆ.
ಜಿಲ್ಲೆಯಿಂದ ಕಳುಹಿಸಲಾದ ಒಟ್ಟು ೧೧೩ ಸ್ಯಾಂಪಲ್‌ಗಳ ವರದಿಯನ್ನು ನಿರೀಕ್ಷಿಸಲಾಗುತ್ತಿದ್ದು, ಪ್ರತ್ಯೇಕವಾಗಿ ೧೨೬೪ ಜನ ನಿಗಾದಲ್ಲಿದ್ದಾರೆ. ಜಿಲ್ಲೆಯಿಂದ ಇಲ್ಲಿಯವರೆಗೆ ಒಟ್ಟು ೨೨೧೪೨ ಸ್ಯಾಂಪಲ್‌ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಪೈಕಿ ೨೦೬೨೩ ನೆಗಟಿವ್ ಪ್ರಕರಣ, ೧೧೬೮ ಪಾಜಿಟಿವ್ ಪ್ರಕರಣ ಹಾಗೂ ೩೯ ಜನ ಮೃತ ಪ್ರಕರಣ ವರದಿಯಾಗಿರುತ್ತದೆ.
ಕೋವಿಡ್-೧೯ ದಿಂದ ಒಟ್ಟು ೫೦೭ ಜನ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇನ್ನು ೬೨೫ ಮಾತ್ರ ಸಕ್ರಿಯ ಪ್ರಕರಣಗಳು ಇವೆ. ಇಲ್ಲಿವರೆಗೆ ಒಟ್ಟು ೧೫೯ ಸ್ಯಾಂಪಲ್‌ಗಳು ಮಾತ್ರ ರಿಜೆಕ್ಟ ಆಗಿರುತ್ತವೆ. ಕಂಟೈನ್ಮೆAಟ್ ಝೋನ್ ೯೫ ಇದ್ದು, ಇನ್‌ಸ್ಟಿಟ್ಯೂಶನ್ ಕ್ವಾಂರAಟೈನ್‌ನಲ್ಲಿದ್ದ ೬೨೯೬ ಜನರನ್ನು ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಓರ್ವ ವೃದ್ದೆ ಸಾವು:ಕೋವಿಡ್‌ಗೆ ಬಾಗಲಕೋಟೆಯ ೭೩ ವರ್ಷದ ವೃದ್ದೆ ಖಾಸಗಿ ಕೋವಿಡ್ ಆಸ್ಪತ್ರೆಯಲ್ಲಿ ಶುಕ್ರವಾರ ಮೃತಪಟ್ಟಿದ್ದಾರೆ. ಮೃತಪಟ್ಟ ವೃದ್ದೆ ನ್ಯೂಮೇನಿಯಾ, ಸಕ್ಕರೆ ಖಾಯಿಲೆ ಮತ್ತು ಅಧಿಕ ರಕ್ತದ ಒತ್ತಡಗಳ ಖಾಲಿಯೆಗಳಿಗೆ ಒಳಗಾಗಿದ್ದರು. ಮೃತಪಟ್ಟವರ ಅಂತ್ಯಕ್ರಿಯೆಯನ್ನು ಕೋವಿಡ್ ಮಾರ್ಗಸೂಚಿಯನ್ವಯ ನೆರವೇರಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿ ತಿಳಿಸಿದ್ದಾರೆ.