ಬಿಜೆಪಿ ಸರ್ಕಾರ ಹೇಳಿಕೊಳ್ಳುವ ಸಾಧನೆ ಮಾಡಿಲ್ಲ: ಮೇಟಿ

ಬಿಜೆಪಿ ಸರ್ಕಾರ ಹೇಳಿಕೊಳ್ಳುವ ಸಾಧನೆ ಮಾಡಿಲ್ಲ: ಮೇಟಿ

ಬೇವೂರ: ಬಿಜೆಪಿ ಸರ್ಕಾರ ಹೇಳಿಕೊಳ್ಳುವ ಸಾಧನೆಯನ್ನು  ಮಾಡಿಲ್ಲ,  ಆದರೆ ರಾಜ್ಯದಲ್ಲಿ  ಭ್ರಷ್ಟಾಚಾರ ತಾಂಡವ ಆಡುತ್ತಿದೆ ಎನ್ನುವುದಕ್ಕೆ ಬಿಜೆಪಿ ಕೆಲ ಶಾಸಕರು ಜೈಲು ಪಾಲು, ಇನ್ನೂ ಕೆಲವರ  ಮೇಲೆ  ಆರೋಪಗಳನ್ನು ಕೇಳಿಯೂ  ಕೆಳದಂತಿರುವ   ಮೋದಿ   ಅವರು ಯಾವ  ಮುಖ  ಇಟ್ಟುಕೊಂಡು ರಾಜ್ಯದಲ್ಲಿ ಮತ ಯಾಚನೆಗೆ  ಬರುತ್ತಿದ್ದಾರೆ ಎನ್ನುವುದು ತಿಳಿಯುತ್ತಿಲ್ಲ ಎಂದು  ಮಾಜಿ ಸಚಿವ ಎಚ್. ವೈ ಮೇಟಿ ಹೇಳಿದರು, 
ಬಾಗಲಕೋಟೆ  ವಿಧಾನಸಭಾ  ಮತಕ್ಷೇತ್ರದ ತಿಮ್ಮಾಪೂರ ಗ್ರಾಮದಲ್ಲಿ  ಸುತಗುಂಡಾರ ಗ್ರಾಮದ  ೫೦ಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರನ್ನು ಕಾಂಗ್ರೇಸ್‌ಗೆ  ಬರಮಾಡಿಕೊಂಡು  ಮಾತನಾಡಿರು, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಕೈಗೊಂಡ ರೈತಪರ, ಜನಪರ ಹಾಗೂ ಅಭಿವೃದ್ದಿ ಕಾರ್ಯಗಳನ್ನು  ನಾವು ಮುಂದಿಟ್ಟು ಜನತೆಗೆ ಮತಯಾಚಿಸುವದರ ಜತೆಗೆಗ್ಯಾರಂಟಿ ಕಾರ್ಡಗಳನ್ನು  ನೀಡಿ ಮತಯಾಚಿಸುತ್ತಿದ್ದೇವೆ, ಆದರೆ ಬಿಜೆಪಿ  ಸರ್ಕಾರಗಳ  ಸಾಧನೆ ಶೂನ್ಯವಾಗಿದ್ದು ಬಡೆದಾಳುವ ನೀತಿಗೆ ಮುಂದಾಗಿದ್ದು ಕಾಂಗ್ರೇಸ್ ವಿರುದ್ದ ಸುಳ್ಳು ಆರೋಪಗಳನ್ನು  ಮಾಡುತ್ತಿದೆ, ಇಂತಹ ಹುಸಿ ಆರೋಪಗಳಿಗೆ ಜನತೆ ಸೊಪ್ಪು ಹಾಕುವುದಿಲ್ಲ  ಎಂದರು. ಜಿಪಂ  ಮಾಜಿ ಅಧ್ಯಕ್ಷ   ಬಸವಂತಪ್ಪ  ಮೇಟಿ ಮಾತನಾಡಿ ಬಿಜೆಪಿಯು ಜನರ ದಿಕ್ಕು  ತಪ್ಪಸಿ ದುರಾಡಳಿತ  ನಡೆಸುತ್ತಿದೆ, ಪರಿಣಾಮ  ಬಿಜೆಪಿಯಿಂದ ಜನತೆ ಬೇಸತ್ತಿದ್ದು ಪ್ರತಿ ಗ್ರಾಮದಲ್ಲಿ ಜನತೆ ಬಿಜೆಪಿ ಧಿಕ್ಕರಿಸಿ  ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಿದ್ದಾರೆ ಎಂದರು, ಮುಂಖಡರಾದ ಉಮೇಶ  ಮೇಟಿ, ಸಂಗಮೇಶ  ದೊಡಮನಿ, ಜೆಟ್ಟೆಪ್ಪ  ಮಾದಾಪೂರ,  ಹನಮಂತ ಪೂಜಾರಿ, ಶ್ರೀಕರ  ದೇಸಾಯಿ, ಹುಲಪ್ಪ ತೇಜಿ, ಶಿವಪ್ಪ ನುಗ್ಗಿ, ಶಿದಪ್ಪ  ಕುಂಚಗನೂರ, ಗುಳಪ್ಪ ನುಗ್ಗಿ, ಶಂಕ್ರಪ್ಪ  ನುಗ್ಗಿ, ಸೇರಿದಂತೆ  ಹಲವರು ಇದ್ದರು.
ಸೇರ್ಪಡೆ:  ಸುತಗುಂಡಾರ ಗ್ರಾಮದ  ಪ್ರಮುಖರಾದ  ಭೀಮಣ್ಣ ಚಿಮ್ಮಲಗಿ, ಶ್ರೀಶೈಲ ಬಾಗೇವಾಡಿ,  ಯಮನಪ್ಪ ಅಪ್ಪಣ್ಣವರ, ಬಸಪ್ಪ  ಚಲವಾದಿ, ಶ್ರೀನಿವಾಸ, ಅಪ್ಪಣ್ಣವರ,  ಶಿವು ತಿಮ್ಮಸಾಗರ, ಗುರುರಾಜ  ಮನಗೂಳಿ,  ಹನಮಂತ  ಮೇಟಿ, ಮಡಿವಾಳಪ್ಪ ಚಲವಾದಿ, ಶ್ರೀಶೈಲ ಅಪ್ಪಣ್ಣವರ, ಗ್ಯಾನಪ್ಪ  ಚಲವಾದಿ ಸಂಗಪ್ಪ ಚಲವಾದಿ  ಸೇರಿದಂತೆ  ೫೦ಕ್ಕೂ ಹೆಚ್ಚು  ಜನರು ಎಚ್.ವೈ.ಮೇಟಿ  ಸಮ್ಮಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು.