ಬಾಗಲಕೋಟೆಯಲ್ಲಿ "ಪುಂಗಿ ಊದಲಿದ್ದಾಳೆ ರಂಗಿ"
*ಕೋಟೆನಗರಿಯಲ್ಲಿ ಮತ್ತೆ ನಾಟಕದ ಹವಾ * ಜನರನ್ನು ರಂಜಿಸಲು ಬರ್ತಿದ್ದಾಳೆ ರಂಗಿ
ನಾಡನುಡಿ ನ್ಯೂಸ್
ಬಾಗಲಕೋಟೆ:
ಕೋವಿಡ್ ಲಾಕ್ಡೌನ್ ನಂತರ ಮತ್ತೆ ನಾಟಕ ಪ್ರದರ್ಶನಗಳ ಹವಾ ಶುರುವಾಗುತ್ತಿದೆ.ನಗರದ ಬಸವೇಶ್ವರ ವೃತ್ತದಲ್ಲಿ "ಹೌದಲೇ ರಂಗಿ ಊದಲೇನ್ ಪುಂಗಿ" ನಾಟಕ ಡಿ.೧ರಿಂದ ಪ್ರದರ್ಶನಗೊಳ್ಳಲಿದೆ.
ಆಶಾಪುರದ ಸಂಗಮೇಶ್ವರ ನಾಟ್ಯ ಸಂಘದಿಂದ ನಾಟಕ ನಡೆಯುತ್ತಿದ್ದು ಪ್ರತಿದಿನ ಎರಡು ಪ್ರದರ್ಶನಗಳು ನಡೆಯಲಿವೆ ಎಂದು ಸಂಘದ ಮಾಲೀಕರಾದ ಪ್ರೇಮಾ ಗುಳೇದಗುಡ್ಡ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜ್ಯೋತಿ ಗುಳೇದಗುಡ್ಡ, ಮಂಜುನಾಥ ಗುಳೇದಗುಡ್ಡ, ಗುರು ಮೋರಟಗಿ ಮತ್ತಿತರರು ನಾಟಕದಲ್ಲಿ ಅಭಿನಯಿಸಲಿದ್ದಾರೆ.ಈ ನಾಟಕ ಸಾಕಷ್ಟು ಜನಮನ್ನಣೆಗಳಿಸಿದೆ ಎಂದು ತಿಳಿಸಿದರು.
ಕೋವಿಡ್ ನಂತರ ಪರಿಸ್ಥಿತಿ ಅಯೋಮಯವಾಗಿದೆ.ಹಣ್ಣು, ಕಾಯಿಪಲ್ಲೆ ಮಾರಿ ಬದುಕು ನಡಿಸಿದ್ದೇವೆ.ಇದೀಗ ಕೋವಿಡ್ ನ ಎಲ್ಲ ಸುರಕ್ಷತೆಗಳನ್ನು ಪಾಲಿಸಿ ನಾಟಕ ಏರ್ಪಡಿಸಲಾಗುತ್ತಿದ್ದು,ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಿ ಸಂಕಷ್ಟದಲ್ಲಿರುವ ಕಂಪನಿಗಳಿಗೆ ಜೀವನ ನೀಡಬೇಕೆಂದು ಮನವಿ ಮಾಡಿದರು.
ಸಂಚಾಲಕ ಮಂಜುನಾಥ ಗುಳೇದಗುಡ್ಡ, ರಾಜು ಹುಬ್ಬಳ್ಳಿ ಮತ್ತಿತರರು ಉಪಸ್ಥಿತರಿದ್ದರು.