ಮುಸ್ಲಿಂ ಯುವತಿಯರೊಂದಿಗೆ ಸ್ನೇಹ ಇಬ್ಬರು ಯುವಕರ ಮೇಲೆ ಹಲ್ಲೆ: ಬಾಗಲಕೋಟೆಯಲ್ಲೂ ಶುರುವಾಯಿತೆ ನೈತಿಕ ಪೊಲೀಸಗಿರಿ..!

ಮುಸ್ಲಿಂ ಯುವತಿಯರೊಂದಿಗೆ ಸ್ನೇಹ ಇಬ್ಬರು ಯುವಕರ ಮೇಲೆ ಹಲ್ಲೆ: ಬಾಗಲಕೋಟೆಯಲ್ಲೂ ಶುರುವಾಯಿತೆ ನೈತಿಕ ಪೊಲೀಸಗಿರಿ..!


ಬಾಗಲಕೋಟೆ:
ತಮ್ಮ ಧರ್ಮದ ಯುವತಿಯರೊಂದಿಗೆ ಉಪಹಾರ ಸೇವಿಸಲು ಬೇಕರಿಯೊಂದಕ್ಕೆ ತೆರಳಿದ್ದ ಇಬ್ಬರು ಯುವಕರ ಮೇಲೆ ಮುಸ್ಲಿಂ ಯುವಕರ ತಂಡ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.

ಬಾಗಲಕೋಟೆ  ನಗರದ ಬಸವೇಶ್ವರ ವೃತ್ತದ ಬಳಿಯಿರುವ ಬೇಕರಿಯೊಂದರಲ್ಲಿ ಈ ಘಟನೆ ನಡೆದಿದ್ದು, ಗಾಯಾಳು ಯುವಕರು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಮೇಲ್ನೋಟಕ್ಕೆ ನೈತಿಕ ಪೊಲೀಸಗಿರಿ ರೀತಿಯ ಘಟನೆ ಇದಾಗಿದ್ದು, ಇದರ ಹೊರತಾಗಿ ಯಾವುದಾದರೂ ವೈಯಕ್ತಿಕ ‌ದ್ವೇಷ ಹಲ್ಲೆ ನಡೆಸಿದ ಗುಂಪು ಹಾಗೂ ಗಾಯಾಳು ಯುವಕರ ಮಧ್ಯೆ ಇತ್ತೆ ಎಂಬುದು ಪೊಲೀಸರ ತನಿಖೆಯಿಂದಷ್ಟೇ ತಿಳಿದು ಬರಬೇಕಿದೆ. ಇನ್ನು ಇಬ್ಬರು ಯುವಕರು ಸಲ್ಲಿಸಿರುವ ದೂರಿನಲ್ಲಿ ಯುವತಿಯರ ಮೇಲೆಯೂ ಗುಂಪು ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದ್ದು  ಮಾರಾಕಾಸ್ತ್ರಗಳೊಂದಿಗೆ ತಂಡ ಆಗಮಿಸಿತ್ತು ಎಂದು ದೂರಲಾಗಿದೆ. 

ಸೋಮವಾರ ರಾತ್ರಿ ಈ ಘಟನೆ ನಡೆದಿರುವ ವರದಿಯಾಗಿದ್ದು, ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.