ಎಸ್ಪಿ ಕಚೇರಿ ಪಕ್ಕದಲ್ಲೇ ನೀತಿ ಸಂಹಿತೆ ಉಲ್ಲಂಘನೆ..!
*ತೆರವಾಗದ ಉಪ್ಪಾರ ಅಭಿವೃದ್ಧಿ ನಿಗಮದ ಫಲಕ * ಮತದಾರರ ಮೇಲೆ ಪ್ರಭಾವ ಬೀರುತ್ತಿರುವ ಸಿಎಂ ಫೋಟೋ ವುಳ್ಳ ಫ್ಲೆಕ್ಸ್
ಬಾಗಲಕೋಟೆ: ನವನಗರದ ಜಿಲ್ಲಾಡಳಿತ ಭವನಕ್ಕೆ ಸಾಗುವ ಮಾರ್ಗ, ಅದರಲ್ಲೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಪಕ್ಕದಲ್ಲೇ ನೀತಿ ಸಂಹಿತೆ ಉಲ್ಲಂಘನೆಯಾಗುತ್ತಿದ್ದರೂ ಅದು ಅಧಿಕಾರಿಗಳ ಗಮನಕ್ಕೆ ಬಂದAತ್ತಿಲ್ಲ. ಬಂದಿದ್ದರೂ ಅದರ ತೆರುವಿಗೆ ಗಮನಹರಿಸದಿರುವುದು ಚರ್ಚೆಗೆ ಗ್ರಾಸವಾಗಿದೆ.
ನ್ಯಾಯಾಲಯ ಸಂಕೀರ್ಣದಿAದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ತೆರಳುವ ಮಾರ್ಗದ ಶ್ರೀಅಯ್ಯಪ್ಪಸ್ವಾಮಿ ದೇಗುಲದ ಆವರಣಕ್ಕೆ ಹೊಂದಿಕೊAಡು ಮುಖ್ಯರಸ್ತೆಯಲ್ಲೇ ಈ ಫಲಕ ರಾರಾಜಿಸುತ್ತಿದೆ. ಫಲಕದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಭಾವಚಿತ್ರವಿದ್ದು, ಉಪ್ಪಾರ ಸಮಾಜಕ್ಕೆ ಬೊಮ್ಮಾಯಿ ಸರ್ಕಾರ ನೀಡಿರುವ ಕೊಡುಗೆಗಳನ್ನು ವಿವರಿಸಲಾಗಿದೆ. ಈ ಮಾರ್ಗದಲ್ಲಿ ಪ್ರತಿದಿನ ಚುನಾವಣಾ ಅಧಿಕಾರಿಗಳು, ಸಿಬ್ಬಂದಿ ಓಡಾಡುತ್ತಿದ್ದರೂ ಫಲಕ ತೆರವುಗೊಳ್ಳದಿರುವುದು ಏಕೆ ಎಂಬುದಕ್ಕೆ ಅಧಿಕಾರಿಗಳೇ ಉತ್ತರಿಸಬೇಕಿದೆ.