ಮಾದಿಗ ಮಹಸಭಾ ನಾಯಕ‌ ಮುತ್ತಣ್ಣ ಬೆಣ್ಣೂರ ಬಿಜೆಪಿ ಸೇರ್ಪಡೆ

ಮಾದಿಗ ಮಹಸಭಾ ನಾಯಕ‌ ಮುತ್ತಣ್ಣ ಬೆಣ್ಣೂರ ಬಿಜೆಪಿ ಸೇರ್ಪಡೆ

ಬಾಗಲಕೋಟೆ: ಕಾಂಗ್ರೆಸ್ ಮುಖಂಡ, ಮಾದಿಗ ಮಹಾಸಭಾದ ರಾಜ್ಯಾಧ್ಯಕ್ಷ ಮುತ್ತಣ್ಣ ಬೇಣ್ಣೂರ ಅವರು ಬಿಜೆಪಿ ಪಕ್ಷ ಸೇರ್ಪಡೆಗೊಂಡರು.

ನವಗರದ  ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಪಕ್ಷ‌ ಸೇರ್ಪಡೆ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ರಾಜ್ಯ ಚುನಾವಣಾ ಉಸ್ತುವಾರಿ ಅರುಣ ಸಿಂಗ್, ಸಚಿವ ಗೋವಿಂದ ಕಾರಜೋಳ,ಶಾಸಕ‌ ಡಾ.ವೀರಣ್ಣ ಚರಂತಿಮಠ ಅವರ ಸಮ್ಮುಖದಲ್ಲಿ ಬಿಜೆಪಿ ಪಕ್ಷವನ್ನು ಸೇರ್ಪಡೆಗೊಂಡರು.
ಮಾದಿಗ ಮಹಾಸಭಾದ ತಾಲ್ಲೂಕು ಅಧ್ಯಕ್ಷ ಹನಮಂತ ಮುತ್ತತ್ತಿ,ಪ್ರಧಾನ ಕಾರ್ಯದರ್ಶಿ ಕನಕಪ್ಪ‌ ಪೂಜಾರಿ,  ಹಾಗೂ ಬೆಂಬಲಿಗರು ಬಿಜೆಪಿ ಪಕ್ಷವನ್ನು ಸೇರ್ಪಡೆಗೊಂಡರು.

ಈ ಸಂಧರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ,ಬಸವರಾಜ‌ ಯಂಕಂಚಿ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ,ಶಿವಾನಂದ ಟವಳಿ ಸೇರಿದಂತೆ ಅನೇಕರು ಇದ್ದರು