ದೇಶದಲ್ಲಿ ಹೆಡೆ ಎತ್ತಿದ ಕೋಮುವಾದದಿಂದ ಗುರಿ ತಲುಪದ ಕನಸಿನ ಭಾರತ- ಸಿಎಂ ಸಿದ್ದರಾಮಯ್ಯ*

ಬೆಂಗಳೂರಿನಲ್ಲಿ ಗಣರಾಜೋತ್ಸವದ ಧ್ವಜಾರೋಹಣ ‌ನೆರವೇರಿಸಿದ ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ನಡೆಯನ್ನು ಪರೋಕ್ಷವಾಗಿ ‌ಕುಟುಕಿದ್ದಾರೆ

ದೇಶದಲ್ಲಿ ಹೆಡೆ ಎತ್ತಿದ ಕೋಮುವಾದದಿಂದ ಗುರಿ ತಲುಪದ ಕನಸಿನ ಭಾರತ- ಸಿಎಂ ಸಿದ್ದರಾಮಯ್ಯ*

ಬಾಗಲಕೋಟೆ:ಗಣರಾಜೋತ್ಸವದ ಪ್ರಯುಕ್ತ ಶುಕ್ರವಾರ ಬೆಂಗಳೂರಿನಲ್ಲಿ ಧ್ವಜಾರೋಹಣ ನೆರವೇರಿಸಿದ ಸಿಎಂ ಸಿದ್ದರಾಮಯ್ಯ ರಾಮ ಮಂದಿರ ವಿಚಾರ ನೇರವಾಗಿ ಪ್ರಾಸ್ತಾಪಿಸದೆ ಕೇಂದ್ರ ಸರ್ಕಾರದ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

 ಸಮಾಜವನ್ನು ಧರ್ಮಗಳ ಆಧಾರದಲ್ಲಿ ವಿಭಜಿಸುವ ಹುನ್ನಾರಕ್ಕೆ ಜನತೆ ಬಲಿ ಆಗಬಾರದು ಚುನಾಯಿತ ಸರ್ಕಾರ ಇಲ್ಲವೇ ಜನಪ್ರತಿನಿಧಿಗಳು ತಮ್ಮ ವೈಫಲ್ಯವನ್ನು‌ ಮುಚ್ಚಿಹಾಕಲು ಜಾತಿ-ಧರ್ಮಗಳಂಥ ಭಾವನಾತ್ಮಕ ವಿಷಯಗಳನ್ನು ದುರ್ಬಳಕೆ ಮಾಡುವುದು ಸಂವಿಧಾನಕ್ಕೆ ಬಗೆಯುವ ದ್ರೋಹವಾಗಿದೆ ಎಂದು ವಾಗ್ದಾಳಿ ನಡೆಸಿದರು.

ಕನ್ನಡಿಗರು ಕಳೆದ ಬಾರಿ ನೀಡಿರುವ ಜನಮತದಲ್ಕಿ ಸಂವಿಧಾನದ ಆಶಯವಾದ ಜಾತ್ಯತೀತ ಸಮಾಜದ ರಕ್ಷಣೆಯ ಸಂದೇಶ ನೀಡಿದ್ದಾರೆ. ಕೋಮುವಾದಿ ಶಕ್ತಿಗಖ ಹುಟ್ಟಡಗಿಸಲು ನಮ್ಮ ಸರ್ಕಾರ ಸರ್ವ ಸನ್ನದವಾಹಗಿದೆ‌. ಕನ್ನಡಿಗರು ದೃಢವಾಗಿ ನಮ್ಮ ಜತೆಗೆ ನಿಲ್ಲಬೇಕೆಂದು ಮನವಿ ಮಾಡಿದರು.

(ಜಾಹೀರಾತು:ಬಾಗಲಕೋಟೆ ಹಾಗೂ ಸುತ್ತಮುತ್ತಲೂ ಮದುವೆ ಸಮಾರಂಭಗಳ ಅಲಂಕಾರಕ್ಕೆ ಸಂಪರ್ಕಿಸಿ ದರ್ಶ್ ಇವೆಂಟ್ಸ್)

ನಮ್ಮ ನಡೆ ಅಭಿವೃದ್ಧಿ ಕಡೆಗೆ ಸಾಗುತ್ತಿದ್ದರೂ ನಮ್ಮ ಕನಸಿನ ಭಾರತದ ಗುರಿ ತಲುಪಲು ಸಾಧ್ಯವಾಗಲ್ಲ. ಇತ್ತೀಚೆಗೆ ಹೆಡೆ ಎತ್ತಿರಿವ ಕೋಮುವಾದವು ನಮ್ಮ ಜಾತ್ಯತೀಯ ಸಮಾಜಕ್ಕೆ ಅಪಾಯವನ್ನು ಉಂಟು ಮಾಡುತ್ತಿದೆ ಎಂದು ದೂರಿದರು.

(ಬಾಗಲಕೋಟೆ, ಬಾದಾಮಿ, ಮುಧೋಳ ನಗರಗಳಲ್ಲಿರಿವ ಪಕ್ವಾನ್ ರೆಸ್ಟೋರೆಂಟ್‌ ಗೆ ಭೇಟಿ ಕೊಡಿ)